newsfirstkannada.com

ಸತತ ಕಾರ್ಯಾಚರಣೆ.. ಕೊನೆಗೂ ಬಲೆಗೆ ಬಿದ್ದ ಒಂಟಿ ಚಿರತೆ ಗುಂಡೇಟಿಗೆ ಬಲಿ

Share :

01-11-2023

    ಸಿಬ್ಬಂದಿ ಮೇಲೆ ಅಟ್ಯಾಕ್ ಮಾಡಿ ಎಸ್ಕೇಪ್ ಆಗಿದ್ದ ಚಿರತೆ

    ಮತ್ತೊಮ್ಮೆ ಅರವಳಿಕೆ ಮದ್ದು ನೀಡೋ ವೇಳೆ ಮತ್ತೆ ಯಡವಟ್ಟು

    ಮತ್ತೊಮ್ಮೆ ಮರವಳಿಕೆ ಮದ್ದಯ ಕೊಡೋವಾಗ ಮಿಸ್ ಫೈಯರ್

ಬೆಂಗಳೂರು: ರಾತ್ರಿವೊತ್ತು ರೌಂಡ್ಸ್​ ಬರೋ ಚಿರತೆ ಬೆಳಕಾದ್ರೆ ಮಾಯ ಆಗ್ತಿತ್ತು. ಬೆಳಗ್ಗೆಯಲ್ಲಾ ಎಷ್ಟೇ ಹುಡುಕಿದ್ರು ಮತ್ತೆ ಮತ್ತೇ ಎಸ್ಕೇಪ್ ಆಗ್ತಿತ್ತು. ಕಳೆದ ನಾಲ್ಕೈದು ದಿನದಿಂದ ಸಿಕ್ಕಾಪಟ್ಟೆ ಕಾಟ ಕೊಡ್ತಿದ್ದ ಚಿರತೆ ಫೈನಲಿ ಸೆರೆ ಸಿಕ್ಕಿದೆ. ಸತತ ಕಾರ್ಯಾಚರಣೆಯಿಂದ ಒಂಟಿ ಚಿರತೆ ಹಿಡಿಯೋವಲ್ಲಿ ಅರಣ್ಯ ಅಧಿಕಾರಿಗಳು ಸಕ್ಸಸ್​ ಆಗಿದ್ದಾರೆ.

ಸತತ ಕಾರ್ಯಾಚರಣೆ.. ಕೊನೆಗೂ ಬಲೆಗೆ ಬಿತ್ತು ಒಂಟಿ ಚಿರತೆ!
ರಾತ್ರಿ-ಹಗಲು ಚಮಕ್ ಕೊಡ್ತಿದ್ದ ಚಾಲಾಕಿ ಚಿರತೆ ವಶಕ್ಕೆ!

ಬೆಂಗಳೂರಿಗೆ ತಲೆನೋವಾಗಿದ್ದ ಚಿರತೆ ಕೊನೆಗೂ ಸೆರೆ ಸಿಕ್ಕಿದೆ. ಕಳೆದ ನಾಲ್ಕೈದು ದಿನದಿಂದ ಕೂಡ್ಲುಗೇಟ್​ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾರ್ವಜನಿಕರಿಗೆ ಕಾಟ ಕೊಡ್ತಿದ್ದ ಚಿರತೆ ಹಿಡಿಯುವಲ್ಲಿ ಅರಣ್ಯ ಅಧಿಕಾರಿಗಳು ಕೊನೆಗೂ ಸಕ್ಸಸ್​ ಆಗಿದ್ದಾರೆ. ಸತತ ಕಾರ್ಯಾಚರಣೆಯಿಂದ ಚಿರತೆ ಸಿಕ್ಕಿ ಬಿದ್ದಿದೆ. ಟ್ರಾಕ್ವಲಿನ್​ ಗನ್ ಬಳಸಿ ಚಿರತೆಗೆ ಅರವಳಿಕೆ ಮದ್ದು ನೀಡಿ ಬೋನಿಗೆ ಬೀಳಿಸುವಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಯಶಸ್ವಿಯಾಗಿದ್ದಾರೆ. ಚಿರತೆ ಆಪರೇಷನ್ ಅಂದುಕೊಂಡಂತೆ ಸುಲಭವಾಗಿರಲಿಲ್ಲ. ಮೂರು ದಿನದಿಂದ ಸತತವಾಗಿ ಅರಣ್ಯ ಇಲಾಖೆಯ ನಾನಾ ವಿಭಾಗದ ಸಿಬ್ಬಂದಿಗಳು ಅಖಾಡಕ್ಕಿಳಿದು ಕಾರ್ಯಾಚರಣೆ ಮಾಡಿದ್ದರು.
ಮೂರನೇ ದಿನ ಆಪರೇಷನ್ ಹೇಗಿತ್ತು ಅಂತ ಬೆಳಗ್ಗೆಯಿಂದ ಸಂಜೆಯವರೆಗೂ ಎಷ್ಟೇ ಶಬ್ದ ಮಾಡಿದ್ರು ಹೊರಗೆ ಬಾರದ ಚಿರತೆ ರಾತ್ರಿ ಸುಮಾರು 11 ಗಂಟೆ ಸುಮಾರಿಗೆ ಪಾಳು ಬಿದ್ದ ಬಿಲ್ಡಿಂಗ್ ಎದುರುಗಡೆಯಿದ್ದ ಕಾಂಪೌಂಡ್​ ಮೇಲೆ ಪ್ರತ್ಯಕ್ಷವಾಗಿತ್ತು. ಸಂಜೆ ನಂತರ ಕಾರ್ಯಾಚರಣೆ ನಿಲ್ಲಿಸಿದ್ದ ಅರಣ್ಯ ಅಧಿಕಾರಿಗಳು 11 ಗಂಟೆಯ ನಂತರ ಮತ್ತೆ ಅಲರ್ಟ್ ಆದರು. ಮತ್ತೆ ಟೀಂಗಳನ್ನ ಕರೆಸಿಕೊಂಡು ಫಿಲ್ಡ್​ಗಿಳಿದರು. ಮಧ್ಯರಾತ್ರಿ 2.30ರವೆಗೂ ಚಿರತೆಯ ಚಲನವಲನವನ್ನ ಫಾಲೋ ಮಾಡಿದ್ರು. ಆಮೇಲೆ ಮಧ್ಯರಾತ್ರಿ ವೇಳೆ ಮತ್ತೆ ಅದೇ ಪಾಳು ಬಿದ್ದ ಬಿಲ್ಡಿಂಗ್​ ಒಳಗೆ ಚಿರತೆ ನುಸುಳಿಕೊಳ್ತು.

ಟ್ರಾಕ್ವೆಲಿನ್ ಗನ್​ನಲ್ಲಿ ಶೂಟ್ ಮಾಡಿದ ವೈದ್ಯರು!
ಇಬ್ಬರ ಮೇಲೆ ಅಟ್ಯಾಕ್ ಮಾಡಿ ಎಸ್ಕೇಪ್ ಆದ ಚಿರತೆ!

ಪಾಳು ಬಿದ್ದ ಬಿಲ್ಡಿಂಗ್​ ಒಳಗೆ ಚಿರತೆ ಹೋಗಿದ್ದನ್ನ ಕಣ್ಣಾರೆ ಕಂಡ ಅರಣ್ಯ ಇಲಾಖೆ ಸಿಬ್ಬಂದಿ ಬೆಳಗ್ಗೆಯವರೆಗೂ ಚಿರತೆಯ ಚಲನವಲನವನ್ನ ಗಮಿನಿಸಿದ್ದರು. ಬಿಲ್ಡಿಂಗ್ ಒಳಗೆ ಚಿರತೆ ಇರೋ ಜಾಗವನ್ನ ಥರ್ಮಲ್ ಡ್ರೋನ್ ಮೂಲಕ ಖಚಿತಪಡಿಸಿಕೊಂಡ ಅಧಿಕಾರಿಗಳು, ಆ ನಂತರ ಡಾಕ್ಟರ್ ಕಿರಣ್ ಸಾರಥ್ಯದಲ್ಲಿ ಚಿರತೆಗೆ ಅರವಳಿಕೆ ಮುದ್ದು ಕೊಡೋಕು ಮುಂದಾಗ್ತಾರೆ. ಎರಡು ಸಲ ಚಿರತೆಗೆ ಟ್ರಾಕ್ವೆಲಿನ್ ಗನ್ ಮೂಲಕ ಶೂಟ್ ಮಾಡಲಾಗುತ್ತೆ. ಅಲ್ಲಿಗೆ ಆಪರೇಷನ್ ಚಿರತೆ ಸಕ್ಸಸ್ ಅಂತಾನೇ ಅಂದ್ಕೊಂಡ್ರು. ಅರವಳಿಕೆ ಮುದ್ದು ನೀಡಿದ ಕೆಲವು ಸಮಯದ ನಂತರ ಚಿರತೆ ಹತ್ತಿರ ಹೋದ ಡಾಕ್ಟರ್ ಕಿರಣ್ ಮತ್ತು ತಂಡದ ಮೇಲೆ ಚಿರತೆ ಅಟ್ಯಾಕ್ ಮಾಡಿಬಿಡುತ್ತೆ. ಈ ದಾಳಿಯಲ್ಲಿ ಡಾಕ್ಟರ್ ಕಿರಣ್ ಮತ್ತು ಇನ್ನೊಬ್ಬ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳು ಆಗಿರುವ ವರದಿಯಾಗಿದೆ. ಅಷ್ಟರಲ್ಲೇ ಕಿರಣ್ ಅವರನ್ನ ಆಂಬುಲೆನ್ಸ್​ ಮೂಲಕ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುವುದು.

ಅರವಳಿಕೆ ಮದ್ದು ನೀಡಿದರೂ ಚಿರತೆ ಎಸ್ಕೇಪ್ ಆಗಿದ್ದೇಗೆ?

ಅರವಳಿಕೆ ಮದ್ದು ನೀಡಿದ್ಮೇಲೆ ಚಿರತೆ ಪ್ರಜ್ಞೆ ತಪ್ಪಬೇಕಿತ್ತು. ಪ್ರಜ್ಞೆ ತಪ್ಪಿದ ನಂತರ ಎಲ್​ಟಿಎಫ್​ ಸಿಬ್ಬಂದಿ ಚಿರತೆಯನ್ನ ಬಲೆ ಮೂಲಕ ಹಿಡಿದು ಬೋನ್​ಗೆ ಹಾಕಿಕೊಳ್ಳಬೇಕಿತ್ತು. ಆದ್ರೆ, ದುರಾದೃಷ್ಟವಶಾತ್ ಡಾಕ್ಟರ್ ಕಿರಣ್ ಫೈರ್ ಮಾಡಿದ ಅರವಳಿಕೆ ಮುದ್ದು ಚಿರತೆಗೆ ಸರಿಯಾಗಿ ಬಿದ್ದಿಲ್ಲ. ಹೆಚ್ಚು ಮಾಂಸವಿರುವ ಭಾಗಕ್ಕೆ ಅರವಳಿಕೆ ಮುದ್ದು ನೀಡಬೇಕು. ಆದ್ರೆ, ಡಾಕ್ಟರ್ ಕಿರಣ್ ಫೈರ್ ಮಾಡಿದ ಅರವಳಿಕೆ ಮದ್ದು ಆ ಚಿರತೆಗೆ ಸರಿಯಾಗಿ ಇಂಜೆಕ್ಟ್​ ಆಗಿಲ್ಲ. ಹಾಗಾಗಿ, ಡಾಕ್ಟರ್ ಕಿರಣ್ ಅವರ ಪ್ರಯತ್ನ ಸಕ್ಸಸ್​​ ಆಗ್ಲಿಲ್ಲ. ಎರಡು ಸಲ ಫೈರ್ ಮಾಡಿದ್ರು ಎಫೆಕ್ಟ್​ ಆಗಲಿಲ್ಲ. ಎಚ್ಚರ ತಪ್ಪಿದಂತೆ ಕಂಡುಬಂದರೂ ಚಿರತೆ ಎಚ್ಚರ ತಪ್ಪಿರಲಿಲ್ಲ. ಹತ್ತಿರ ಹೋದ ಸಿಬ್ಬಂದಿ ಮೇಲೆ ಅಟ್ಯಾಕ್ ಮಾಡಿದ ಅಲ್ಲಿಂದ ಎಸ್ಕೇಪ್ ಆಯ್ತು.

ಅರವಳಿಕೆ ಮದ್ದು ನೀಡಿ ಚಿರತೆ ಹಿಡಿದ ಸಿಬ್ಬಂದಿ!

ಸಿಬ್ಬಂದಿ ಮೇಲೆ ಅಟ್ಯಾಕ್ ಮಾಡಿ ಎಸ್ಕೇಪ್ ಆಗಿದ್ದ ಚಿರತೆಯನ್ನು ಹಿಂಬಾಲಿಸಿದ ಅರಣ್ಯ ಅಧಿಕಾರಿಗಳು, ಚಿರತೆ ಇರೋ ಜಾಗ ಪತ್ತೆ ಹಚ್ಚಿ, ಜೆಸಿಬಿಗಳಿಂದ ಸುತ್ತ ಮುತ್ತ ಕ್ಲೀನ್ ಮಾಡಿ ಪ್ಲಾನ್ ಮಾಡಿ ನಿಂತಿದ್ರು. ಗಾಯಗೊಂಡಿದ್ದ ಡಾಕ್ಟರ್ ಕಿರಣ್ ಮತ್ತೆ ಆಪರೇಷನ್​ಗೆ ಇಳಿದು ಚಿರತೆಗೆ ಟ್ರಾಕ್ವಲಿನ್ ಗನ್ ಮೂಲಕ ಅರವಳಿಕೆ ಮದ್ದು ನೀಡಿದ್ರು. ಮತ್ತೆ ಮೊದಲ ಸಲ ಮಿಸ್​ ಆದ್ರೂ ಎರಡನೇ ಸಲ ಮಿಸ್ ಆಗಿಲ್ಲ. ಚಿರತೆಗೆ ಅರವಳಿಕೆ ಮದ್ದು ಕರೆಕ್ಟ್​ ಆಗಿ ಇಂಜೆಕ್ಟ್ ಆಯ್ತು. ಅಷ್ಟೊತ್ತಿಗೆ ಸುತ್ತವರೆದಿದ್ದ ಸಿಬ್ಬಂದಿ ಚಿರತೆಯನ್ನ ಬಲೆಗೆ ಬೀಳಿಸಿಕೊಂಡರು. ಫೈನಲಿ ಬೆಂಗಳೂರಿಗೆ ಆತಂಕ ತಂದಿದ್ದ ಚಿರತೆ ಸೆರೆ ಸಿಕ್ಕಿದೆ. ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಚಿರತೆಯನ್ನ ಬಿಡೋಕೆ ಮುಂದಾಗಿದ್ದು, ಕೂಡ್ಲುಗೇಟ್​ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಚಿರತೆ ಆಪರೇಷನ್‌ ವೇಳೆ ಅರಣ್ಯ ಇಲಾಖೆ ಮಹಾ ಯಡವಟ್ಟು ಮಾಡಿದ್ಯಾ ಅನ್ನೋ ಅನುಮಾನ ವ್ಯಕ್ತವಾಗಿದೆ. ಕಾರ್ಯಾಚರಣೆಗೆ ಇಳಿದಿದ್ದ ಟಾಸ್ಕ್‌ ಫೋರ್ಸ್‌ ಸಿಬ್ಬಂದಿಯನ್ನೇ ಪರಚಿ ಹೋಗಿತ್ತು. ಹೀಗಾಗಿ ನುರಿತ ತಜ್ಞರನ್ನ ಕರೆಸಿಕೊಳ್ಳದೆ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯ ಮಾಡಿದ್ರಾ? ಅರವಳಿಕೆ ಮದ್ದಿಗೆ ಬಗ್ಗದ ಚಾಲಾಕಿ ಚಿರತೆಯನ್ನ ಗುಂಡಿಟ್ಟು ಕೊಲ್ಲಲಾಗಿದ್ಯಾ ಅನ್ನೋ ಪ್ರಶ್ನೆಗಳು ಮೂಡಿದೆ. ಪೊದೆಯಿಂದ ಚಿರತೆ ಬಲೆಗೆ ಬೀಳುತ್ತಿದ್ದಂತೆ ಬನ್ನೇರುಘಟ್ಟದಿಂದ ಆಗಮಿಸಿದ್ದ ಸಿಬ್ಬಂದಿಯೇ ಶೂಟೌಟ್ ಮಾಡಿದ್ದಾರೆ ಎನ್ನಲಾಗಿದೆ. ಅರವಳಿಕೆ ನೀಡುವ ಬದಲು ಏಕ್ ಧಮ್ ಶೂಟ್ ಮಾಡಿ ಚಿರತೆಯನ್ನು ಸಾಯಿಸಿರೋ ಆರೋಪ ಕೇಳಿ ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸತತ ಕಾರ್ಯಾಚರಣೆ.. ಕೊನೆಗೂ ಬಲೆಗೆ ಬಿದ್ದ ಒಂಟಿ ಚಿರತೆ ಗುಂಡೇಟಿಗೆ ಬಲಿ

https://newsfirstlive.com/wp-content/uploads/2023/11/chita.jpg

Load More