ಅರವಳಿಕೆ ಮದ್ದಿಗೆ ಬಗ್ಗದ ಚಿರತೆಯನ್ನ ಗುಂಡಿಟ್ಟು ಕೊಲ್ಲಲಾಗಿದ್ಯಾ?
ಪಾಳು ಬಿದ್ದ ಮನೆ, ಪೊದೆ ಸೇರಿದ್ದ ಚಿರತೆಗಾಗಿ ಕಾರ್ಯಾಚರಣೆ
ಬೊಮ್ಮನಹಳ್ಳಿ ಕೃಷ್ಣಾರೆಡ್ಡಿ ಲೇಔಟ್ ಕೈಗಾರಿಕಾ ಪ್ರದೇಶದಲ್ಲಿ ಸೆರೆ
ಕಳೆದ 5 ದಿನದ ಹಿಂದೆ ಚಿರತೆ ಕಂಡ ಬೆಂಗಳೂರು ಜನರು ಬೆಚ್ಚಿ ಬಿದ್ದಿದ್ದರು. ಇಂದು ಬೊಮ್ಮನಹಳ್ಳಿಯ ಕೃಷ್ಣಾರೆಡ್ಡಿ ಲೇಔಟ್ ಕೈಗಾರಿಕಾ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆ ಚಿರತೆಯನ್ನು ಸೆರೆ ಹಿಡಿಯಲಾಗಿತ್ತು. ಆದ್ರೀಗ ಸೆರೆ ಸಿಕ್ಕ ಚಿರತೆ ಮೃತಪಟ್ಟಿದೆ ಎನ್ನಲಾಗಿದೆ.
ಕಾಡಿನಿಂದ ನಾಡಿಗೆ ಬಂದಿದ್ದ ಚಿರತೆ ಬೀದಿ ನಾಯಿಗಳ ಬೆನ್ನು ಬಿದ್ದಿತ್ತು. ಆದಾದ ಮೇಲೆ ಕೃಷ್ಣಾ ರೆಡ್ಡಿ ಲೇಔಟ್‌ನ ಅಪಾರ್ಟ್‌ಮೆಂಟ್ ಒಳಗೂ ಓಡಾಟ ನಡೆಸಿತ್ತು. ಸಿಸಿಟಿವಿಯಲ್ಲಿ ಚಿರತೆಯನ್ನು ನೋಡಿದ್ದ ಜನರಿಗೆ ಆತಂಕ ಹೆಚ್ಚಾಗಿತ್ತು. ಕೊನೆಗೆ ಪಾಳು ಬಿದ್ದ ಮನೆ, ಪೊದೆ ಸೇರಿದ್ದ ಚಿರತೆಯನ್ನು ಹಿಡಿಯಲು ಕಾರ್ಯಾಚರಣೆಗೆ ಇಳಿದಿದ್ದ ಆಪರೇಷನ್ ಸಕ್ಸಸ್ ಆಗಿದೆ. ಆದರೆ ಸೆರೆ ಸಿಕ್ಕ ಚಿರತೆ ಸಾವನ್ನಪ್ಪಿದೆ.
ಡಬಲ್ ಬ್ಯಾರೆಲ್ ಗನ್‌ನಿಂದ ಶೂಟೌಟ್?
ಚಿರತೆ ಆಪರೇಷನ್ ವೇಳೆ ಅರಣ್ಯ ಇಲಾಖೆ ಮಹಾ ಯಡವಟ್ಟು ಮಾಡಿದ್ಯಾ ಅನ್ನೋ ಅನುಮಾನ ವ್ಯಕ್ತವಾಗಿದೆ. ಕಾರ್ಯಾಚರಣೆಗೆ ಇಳಿದಿದ್ದ ಟಾಸ್ಕ್ ಫೋರ್ಸ್ ಸಿಬ್ಬಂದಿಯನ್ನೇ ಪರಚಿ ಹೋಗಿತ್ತು. ಹೀಗಾಗಿ ನುರಿತ ತಜ್ಞರನ್ನ ಕರೆಸಿಕೊಳ್ಳದೆ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯ ಮಾಡಿದ್ರಾ? ಅರವಳಿಕೆ ಮದ್ದಿಗೆ ಬಗ್ಗದ ಚಾಲಾಕಿ ಚಿರತೆಯನ್ನ ಗುಂಡಿಟ್ಟು ಕೊಲ್ಲಲಾಗಿದ್ಯಾ ಅನ್ನೋ ಪ್ರಶ್ನೆಗಳು ಮೂಡಿದೆ. ಪೊದೆಯಿಂದ ಚಿರತೆ ಬಲೆಗೆ ಬೀಳುತ್ತಿದ್ದಂತೆ ಬನ್ನೇರುಘಟ್ಟದಿಂದ ಆಗಮಿಸಿದ್ದ ಸಿಬ್ಬಂದಿಯೇ ಶೂಟೌಟ್ ಮಾಡಿದ್ದಾರೆ ಎನ್ನಲಾಗಿದೆ. ಅರವಳಿಕೆ ನೀಡುವ ಬದಲು ಏಕ್ ಧಮ್ ಶೂಟ್ ಮಾಡಿ ಚಿರತೆಯನ್ನು ಸಾಯಿಸಿರೋ ಆರೋಪ ಕೇಳಿ ಬಂದಿದೆ.
ಅರಣ್ಯ ಇಲಾಖೆ ನಡೆಿಸಿದ ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕ ಚಿರತೆ ಮೃತಪಟ್ಟಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯಕೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಚಿರತೆ ಸಾವಿಗೆ ಕಾರಣವೇನು ಅನ್ನೋದು ತನಿಖೆಯಿಂದ ಬಹಿರಂಗವಾಗಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ