newsfirstkannada.com

ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್​ ಕಾರು ಭೀಕರ ಅಪಘಾತ; ಓರ್ವ ಸಾವು, ಹಲವರಿಗೆ ಗಾಯ

Share :

08-11-2023

  ಬೈಕ್​ ಹಾಗೂ ಕಾರು ನಡುವೆ ನಡೀತು ಭೀಕರ ಅಪಘಾತ

  ಮಧ್ಯಪ್ರದೇಶ ಚುನಾವಣಾ ಪ್ರಚಾರದ ವೇಳೆ ಅವಘಡ

  ಅಪಘಾತದಲ್ಲಿ ಶಾಲಾ ಶಿಕ್ಷಕ ನಿರಂಜನ್ ದಾರುಣ ಸಾವು

ಚಿಂದ್ವಾರ: ಬೈಕ್​ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಗಂಭೀರವಾಗಿ ಗಾಯಗೊಂಡಿರೋ ಘಟನೆ ಚಿಂದ್ವಾರದಲ್ಲಿ ನಡೆಸಿದೆ. ನಿರಂಜನ್ (35) ಮೃತ ದುರ್ದೈವಿ.

ಭೀಕರ ಅಪಘಾದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಿಜೆಪಿಯ ಪ್ರಮುಖ ನಾಯಕ, ಕೇಂದ್ರ ಸಚಿವರಾಗಿರುವ ಪ್ರಹ್ಲಾದ್ ಪಟೇಲ್ ಚಿಂದ್ವಾರದಿಂದ ನರಸಿಂಘಪುರಕ್ಕೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಪ್ರಹ್ಲಾದ್ ಪಟೇಲ್ ಅವರು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ನರಸಿಂಘಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.

ನರಸಿಂಘಫುರಕ್ಕೆ ಸಚಿವರ ಕಾರು ಹಾಗೂ ಬೆಂಗಾವಲು ವಾಹನ ವೇಗವಾಗಿ ತೆರಳುತ್ತಿತ್ತು. ಈ ವೇಳೆ ನಾಲ್ವರು ಇದ್ದ ಬೈಕ್​​ಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತ ನಿರಂಜನ್ ಅವರು ಶಾಲಾ ಶಿಕ್ಷಕರಾಗಿದ್ದು, ಮೂವರು ಮಕ್ಕಳನ್ನು ಬೈಕ್‌ನಲ್ಲಿ ಕೂರಿಸಿ ರಾಂಗ್ ಸೈಡ್​ನಿಂದ ಏಕಾಏಕಿ ಕಾರಿನ ಮುಂದೆ ಬಂದಿದ್ದಾರೆ. ಇದರಿಂದ ಈ ಭೀಕರ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್​ ಕಾರು ಭೀಕರ ಅಪಘಾತ; ಓರ್ವ ಸಾವು, ಹಲವರಿಗೆ ಗಾಯ

https://newsfirstlive.com/wp-content/uploads/2023/11/accident-65.jpg

Load More