/newsfirstlive-kannada/media/post_attachments/wp-content/uploads/2023/10/Car-Accident_1234.jpg)
ದೆಹಲಿ: ಅತಿವೇಗದ ಚಾಲನೆಯಿಂದಾಗಿ ಇತ್ತೀಚಿಗೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಇದನ್ನ ತಡೆಗಟ್ಟಲು, ರಸ್ತೆಯಲ್ಲಿ ನಿಯಮ ಪಾಲಿಸುವಂತೆ ಮಾಡಲು ಪೊಲೀಸರನ್ನು ನಿಯೋಜಿಸಲಾಗ್ತಿದೆ. ಆದ್ರೆ ಇಲ್ಲೊಬ್ಬ ದುರುಳ ಆ ಪೊಲೀಸರ ಮೇಲೆ ಕಾರು ಚಲಾಯಿಸ್ಬಿಟ್ಟಿದ್ದಾನೆ.
ಅಯ್ಯೋ ಎಂಥಾ ಕ್ರೂರಿ ಇರಬೇಕು ಈತ. ಅದ್ಹೇಗೆ ಪೊಲೀಸ್ ಕಾನ್ಸ್​ಟೇಬಲ್​ಗೆ ಕಾರಲ್ಲಿ ಸ್ಪೀಡಾಗಿ ಬಂದು ಗುದ್ದಿದ್ದಾನೆ. ಈ ಅಪಘಾತ ಸೆಂಟ್ರಲ್ ದೆಹಲಿಯ ಕನ್ನಾಟ್ ಪ್ರದೇಶದಲ್ಲಿ ನಡೆದಿದೆ.
Watch: Delhi Police constable thrown in air after SUV hits him. The incident happened on October 24 after which the constable was treated for his injuries. The driver of the car was arrested. #Delhi#DelhiNCR#DelhiPolice#Viral#ViralVideo#ViralVideos#CCTV#CCTVVideopic.twitter.com/OgaCsX66Tf
— Vani Mehrotra (@vani_mehrotra)
Watch: Delhi Police constable thrown in air after SUV hits him. The incident happened on October 24 after which the constable was treated for his injuries. The driver of the car was arrested. #Delhi#DelhiNCR#DelhiPolice#Viral#ViralVideo#ViralVideos#CCTV#CCTVVideopic.twitter.com/OgaCsX66Tf
— Vani Mehrotra (@vani_mehrotra) October 27, 2023
">October 27, 2023
ಇನ್ನು, ದೆಹಲಿ ಪೊಲೀಸರು ರಾತ್ರಿ ವೇಳೆ ತಮ್ಮ ಕೆಲಸದಲ್ಲಿ ನಿರತವಾಗಿದ್ರು. ಬ್ಯಾರಿಕೇಡ್ ಹಾಕಿ ವಾಹನಗಳನ್ನ ತಡೆದು ತಪಾಸಣೆ ಮಾಡುತ್ತಿದ್ರು. ವೇಳೆ ರಸ್ತೆಯಲ್ಲಿ ಸ್ಪೀಡ್ ಆಗಿ ಬಂದ ಕಾರು ಕಾನ್ಸ್​ಸ್ಟೇಬಲ್​ಗೆ ಗುದ್ದಿ ಮುಂದೆ ಹೋಗಿದೆ. ಪರಿಣಾಮ ಕಾರು ಬ್ಯಾರಿಕೇಡ್​ಗೆ ಡಿಕ್ಕಿ ಹೊಡೆದಿದ್ದು, ಆ ಕಾನ್ಸ್​ಸ್ಟೇಬಲ್ ಗಾಳಿಯಲ್ಲಿ ಹಾರಿ ನೆಲಕ್ಕೆ ಬಿದ್ದಿದ್ದಾರೆ. ಡಿಕ್ಕಿ ಬಳಿಕ ಕಾರು ಚಾಲಕ ಅಲ್ಲಿಂದ ಪಾರಾರಿಯಾಗಲು ಪ್ರಯತ್ನಿಸಿದ್ದಾನೆ. ದೆಹಲಿ ಪೊಲೀಸರು ಚಾಲಕನನ್ನು ಹಿಂಬಾಲಿಸಿ ಅರೆಸ್ಟ್ ಮಾಡಿ ತನಿಖೆ ಕೈಗೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us