newsfirstkannada.com

ಆಟೋ, ಕಾರು ಮಧ್ಯೆ ಭೀಕರ ಅಪಘಾತ.. ಓರ್ವನ ಸ್ಥಿತಿ ಬಹಳ ಗಂಭೀರ

Share :

09-11-2023

    ಕಾರು ಮತ್ತು ಆಟೋ ನಡುವೆ ಭೀಕರ ಅಪಘಾತ

    ಗೋಣಿಕೊಪ್ಪ ಸಮೀಪ ಕೈಕೇರಿ ಬಳಿ ಌಕ್ಸಿಡೆಂಟ್

    ಭಗವತಿ ದೇವಾಲಯದ ಬಳಿ ಅಪಘಾತ, ಗಾಯ

ಮಂಡ್ಯ: ರಸ್ತೆಯಲ್ಲಿ ವಾಹನಗಳನ್ನ ಚಲಾಯಿಸುವಾಗ ಜಾಗರೂಕರಾಗಿರಬೇಕು. ಅದರಲ್ಲೂ ರಸ್ತೆ ತಿರುವಿನಲ್ಲಿ ಭಾರೀ ವಾಹನಗಳನ್ನ ಚಲಾಯಿಸುವಾಗ ಎಷ್ಟು ಹುಷಾರಾಗಿದ್ರೂ ಕಮ್ಮಿನೇ. ಇಲ್ಲದೇ ಇದ್ರೆ ಇಂತಹ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಅಂಥದ್ದೇ ಒಂದು ಘಟನೆ ಕೊಡಗು ಜಿಲ್ಲೆಯ ಗೋಣಿಕೊಪ್ಪ ಬಳಿ ಸಂಭವಿಸಿದೆ.

ರಸ್ತೆಯಲ್ಲಿ ವಾಹನಗಳು ತನ್ನ ಪಾಡಿಗೆ ತಾವು ಚಲಿಸುತ್ತಿದ್ದವು. ಅದೇ ರಸ್ತೆಯಲ್ಲಿ ಆಟೋ ಒಂದು ಹೋಗುತ್ತಿತ್ತು. ಹೀಗಿರಬೇಕಾದ್ರೆ ಆಟೋ ಮುಂದೆ ದಿಢೀರ್​​ ಎಂದು ಕಾರೊಂದು ಮುಂದೆ ಬಂದಿದೆ. ಏಕಾಏಕಿ ಕಾರು ಮುಂದೆ ಬಂದ ಕಾರಣಕ್ಕೆ ಆಟೋ ಮತ್ತು ಕಾರು ಚಾಲಕರ ನಿಯಂತ್ರಣಕ್ಕೆ ಸಿಗದೆ ಮುಖಾಮುಖಿಯಾಗಿ ಡಿಕ್ಕಿಯಾಗಿವೆ.

ಡಿಕ್ಕಿ ಹೊಡೆದ ರಭಸಕ್ಕೆ ಆಟೋ ರಸ್ತೆಯಲ್ಲಿ ಪಲ್ಟಿಯಾಗಿದೆ. ಕಾರು ರಸ್ತೆಯಲ್ಲಿ ಒಂದು ರೌಂಡ್​ ಸುತ್ತಿ ಅಲ್ಲೇ ನಿಂತಿದೆ. ಘಟನೆಯಲ್ಲಿ ಆಟೋ ಚಾಲಕ ಕೈಕೇರಿ ನಿವಾಸಿ ಶಿವಣ್ಣ ನಾಯಕ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರಸ್ತೆಯ ಪಕ್ಕದಲ್ಲಿದ್ದ ಅಂಗಡಿಯ ಸಿಸಿಟಿವಿಯ ಕ್ಯಾಮೆರಾದಲ್ಲಿ ಘಟನೆಯ ದೃಶ್ಯ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಟೋ, ಕಾರು ಮಧ್ಯೆ ಭೀಕರ ಅಪಘಾತ.. ಓರ್ವನ ಸ್ಥಿತಿ ಬಹಳ ಗಂಭೀರ

https://newsfirstlive.com/wp-content/uploads/2023/11/Car_Auto-Accident.jpg

Load More