newsfirstkannada.com

VIDEO: ನಿಂತಿದ್ದ ಕಾರಿಗೆ ವೇಗವಾಗಿ ಬಂದು ಡಿಕ್ಕಿ ಹೊಡೆದ ಬೈಕ್​​​; ಅಸಲಿಗೆ ಆಗಿದ್ದೇನು..?

Share :

21-08-2023

    ನೋಡುಗರ ನಗೆಪಾಟಲಿಗೀಡಾದ ಬೈಕ್ ಕಾರು ಅಪಘಾತ

    ರಸ್ತೆ ದಾಟುತ್ತಿದ್ದ ಕಾರಿಗೆ ವೇಗವಾಗಿ ಡಿಕ್ಕಿ ಹೊಡೆದ ಬೈಕ್​

    ಕಾರು ಚಾಲಕನ ಎಡವಟ್ಟು ಬಿದ್ದು ಬಿದ್ದು ನಕ್ಕ ನೆಟ್ಟಿಗರು

ಗದಗ: ನೋಡ ನೋಡುತ್ತಿದ್ದಂತೆ ವೇಗವಾಗಿ ಬಂದ ಬೈಕ್​ವೊಂದು ಕಾರಿಗೆ ಡಿಕ್ಕಿ ಹೊಡೆದಿರೋ ಘಟನೆ ಧೋಬಿ‌ ಘಾಟ್ ಪಾರ್ವತಿ‌ ಪೆಟ್ರೋಲಿಯಂ ಬಳಿ ನಡೆದಿದೆ. ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಪೆಟ್ರೋಲ್ ಬಂಕ್​ನಿಂದ ನಿಧಾನಗತಿಯಲ್ಲಿ ಬಂದ ಇಂಡಿಕಾ ಕಾರು ರಸ್ತೆ ಕ್ರಾಸ್ ಮಾಡಲು ನಿಂತುಕೊಂಡಿತ್ತು. ಇದನ್ನು ಗಮನಿಸದೇ ವೇಗವಾಗಿ ಬಂದ ಬೈಕ್​ ಸವಾರ ನೋಡ ನೋಡುತ್ತಿದ್ದಂತೆ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಕಾರಿಗೆ ಗುದ್ದಿದ ಸವಾರ ಸ್ಥಳದಲ್ಲೇ ಅಚ್ಚರಿ ರೀತಿಯಲ್ಲಿ ನಿಂತುಕೊಂಡಿದ್ದಾನೆ. ಬಳಿಕ ಕಾರು ಚಾಲಕ ಯೂಟರ್ನ್ ತೆಗೆದುಕೊಳ್ಳುತ್ತಾ ರಸ್ತೆ ಮಧ್ಯದ ಡಿವೈಡರ್ ಫುಟ್ ಮೇಲೆ ಹತ್ತಿಸಿ ರಸ್ತೆಗೆ ಬಂದಿರೋ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಕಾರು ಚಾಲಕನ ಯಡವಟ್ಟು ನಗೆಪಾಟಲಿಗೆ ಈಡಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ನಿಂತಿದ್ದ ಕಾರಿಗೆ ವೇಗವಾಗಿ ಬಂದು ಡಿಕ್ಕಿ ಹೊಡೆದ ಬೈಕ್​​​; ಅಸಲಿಗೆ ಆಗಿದ್ದೇನು..?

https://newsfirstlive.com/wp-content/uploads/2023/08/accideant-1.jpg

Load More