newsfirstkannada.com

ಬೈಕ್​​ ಟಚ್​ ಆಗಿದ್ದಕ್ಕೆ ಕಾರ್​ನಲ್ಲಿ ಚೇಸ್​ ಮಾಡಿ ಕೊಂದ ಹಂತಕರು; ಯುವಕ ದಾರುಣ ಸಾವು!

Share :

Published August 22, 2024 at 10:24pm

    ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈ ರೋಡ್​ ರೇಜ್​ ಕೇಸ್​​ ಹೆಚ್ಚಳ

    ಚಿಕ್ಕ ವಿಚಾರವನ್ನೇ ದೊಡ್ಡದು ಮಾಡ್ಕೊಂಡು ಅಟ್ಟಹಾಸ ಮರೆದ್ರು!

    ಜಸ್ಟ್​ ಬೈಕ್​ ಟಚ್​​​ನಿಂದ ಶುರುವಾದ ಕಿರಿಕ್​ಗೆ​ ಜೀವ ತೆಗೆದುಬಿಟ್ರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈ ರೋಡ್​ ರೇಜ್​ ಕೇಸ್​​ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಚಿಕ್ಕ ವಿಚಾರವನ್ನೂ ದೊಡ್ಡದು ಮಾಡ್ಕೊಂಡು ಅಟ್ಟಹಾಸ ತೋರ್ತಿರುವ ಪ್ರಕರಣಗಳಿಂದ ಸಿಟಿ ಮಂದಿ ತಲೆ ನೋವು ಜಾಸ್ತಿಯಾಗ್ತಿದೆ. ಆದ್ರೀಗ ಈ ರೋಡ್ ರೇಜ್​ ಕಾರಣಕ್ಕೆ ಅಮಾಯಕ ಹುಡುಗನೊಬ್ಬನ ಜೀವ ಬಲಿಯಾಗಿದೆ. ಜಸ್ಟ್​ ಬೈಕ್​ ಟಚ್​​​ನಿಂದ ಶುರುವಾದ ಕಿರಿಕ್​​ ಜೀವ ತೆಗೆಯುವ ಮಟ್ಟಕ್ಕೆ ಹೋಗಿ ನಿಂತಿದೆ. ಬೀದಿಯಲ್ಲೇ ಬಡ ಹುಡುಗನೊಬ್ಬನ ನೆತ್ತರು ಹರಿದು ಹೋಗಿದೆ.

ಒಂದ್ಕಡೆ ನುಜ್ಜುಗುಜ್ಜಾಗಿರು ಬೈಕ್​.. ಇನ್ನೊಂದೆಡೆ ದಿಕ್ಕು ತಪ್ಪಿ ನಿಂತಿರುವ ಕಾರ್.. ಸುತ್ತಲೂ ಜನವೋ ಜನ.. ಈ ಮಧ್ಯೆ ರಕ್ತಸಿಕ್ತ ವ್ಯಕ್ತಿಯೊಬ್ಬನನ್ನ ಕಾರನಲ್ಲಿ ಹಾಕ್ತಿದ್ದಾರೆ. ಕತ್ತಲ ರಾತ್ರಿಯಲ್ಲಿ ಇಷ್ಟೆಲ್ಲ ಜನ ನಿಂತಿದ್ದಾರೆ ಅಂದ್ರೆ ಇದು ಪಕ್ಕಾ ಆ್ಯಕ್ಸಿಡೆಂಟ್ ಅಂತಲೇ ನೀವು ಅಂದುಕೊಂಡಿರ್ತಿರಾ.. ಆದ್ರೆ ಇದು ಆ್ಯಕ್ಸಿಡೆಂಟ್ ಅಲ್ಲ.. ಕೊಲೆ.. ತಿಳಿದು ತಿಳಿದು ಮಾಡಿರುವ ರಣ ಭೀಕರ ಮರ್ಡರ್..

ಹೆಚ್ಚಾಯ್ತು ರೋಡ್ ರೇಜ್ ಹಾವಳಿ! ಬೈಕ್ ಸವಾರ ಬಲಿ

ಯೆಸ್​ ಕಳೆದೊಂದು ತಿಂಗಳಿನಿಂದ ಬೆಂಗಳೂರಿನಲ್ಲಿ ಈ ರೋಡ್ ರೇಜ್ ಕೇಸ್​​ಗಳ ಹಾವಳಿ ಜಾಸ್ತಿಯಾಗಿದೆ. ವಾಹನ ಸವಾರರು ಸಣ್ಣಪುಟ್ಟ ವಿಚಾರಕ್ಕೆ ಕಿರಿಕ್ ಮಾಡ್ಕೊಂಡು ಗಲಾಟೆ ಮಾಡ್ಕೋತಿರುವ ಕೇಸ್​​ಗಳು ಒಂದಾ ಎರಡಾ? ದಿನಕ್ಕೊಂದ್ರಂತೆ ಒಂದಿಲ್ಲೊಂದು ರೋಡ್ ರೇಜ್ ಕೇಸ್​ಗಳು ಬೆಳಕಿಗೆ ಬರ್ತಾನೆ ಇದಾವೆ. ರಸ್ತೆಯಲ್ಲಿ ಗಾಡಿ ಓಡಿಸೋರು ತಾಳ್ಮೆಯಿಂದ ಗಾಡಿ ಓಡಿಸಿದ್ರೆ ಒಳ್ಳೆಯದು. ಆದ್ರೆ ತಾಳ್ಮೆ ಕಳ್ಕೊಂಡ್ರೆ ನಡೆಯಬಾರದ ದುರಂತೆ ನಡೆದು ಹೋಗುತ್ತೆ. ಈಗ ಇಂಥದ್ದೆ ರೋಡ್​ ರೇಜ್​​ ಕಿರಿಕ್​ಗೆ ಬಾಳಿ ಬದುಕಬೇಕಿದ್ದ ಹುಡುಗನೊಬ್ಬನ ಜೀವ ಬಲಿಯಾಗಿ ಹೋಗಿದೆ. ಮನೆ ಸೇರಬೇಕಿದ್ದವನು ಮಸಣ ಸೇರಿದ್ದಾನೆ.

ಅಸಲಿಗೆ ಆಗಿದ್ದೇನು?

ಬುಧವಾರ ರಾತ್ರಿ ಎಂಟು ಗಂಟೆ ಸಮಯ ಅನ್ಸುತ್ತೆ. ಮಹೇಶ್, ಬಾಲಾಜಿ ಹಾಗೂ ನಿಖಿಲ್ ಮೂರು ಜನ ಸ್ನೇಹಿತರು ಬೈಕ್​ನಲ್ಲಿ ಮನೆ ಕಡೆ ಹೊರಟಿದ್ರು. ಇದೇ ವೇಳೆ ಚನ್ನಕೇಶವ ಮತ್ತು ಅರವಿಂದ ಅನ್ನೋರು ಕಾರ್​ ಚಲಾಯಿಸಿಕೊಂಡು ಇದೇ ರೋಡ್​​ನಲ್ಲಿ ಬರ್ತಿದ್ರು. ಆದ್ರೆ ಮಹೇಶ್ ಮತ್ತು ಸ್ನೇಹಿತರು ಇದ್ದ ಬೈಕ್​ ಅಚಾನಕ್​​ ಆಗಿ ಈ ಅರವಿಂದ್ ಓಡಿಸ್ತಿದ್ದ ಕಾರ್​ಗೆ ಟಚ್​ ಆಗಿದೆ. ಜಸ್ಟ್ ಬೈಕ್ ಟಚ್ ಆಗಿದ್ದೇ ತಡ ಕಾರ್​ನಲ್ಲಿದ್ದ ಅರವಿಂದ್ ಮತ್ತು ಚನ್ನಕೇಶವ್​ ಕಾರಿನಿಂದ ಇಳಿದು ಈ ಬೈಕ್ ಸವಾರರ ಜೊತೆ ಗಲಾಟೆ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಕಿರಿಕ್ ಆಗಿದೆ. ರಸ್ತೆ ಅಂದ್ಮೆಲೆ ಸಣ್ಣ ಪುಟ್ಟ ಅಪಘಾತದ ಕಾಮನ್.. ಇದೇ ರೀತಿಯೇ ಇವರ ಬೈಕ್ ಕೂಡ ಕಾರ್​​ಗೆ ಟಚ್ ಆಗಿತ್ತು. ಇದನ್ನೆ ದೊಡ್ಡದು ಮಾಡಿದ್ದ ಅರವಿಂದ ಮತ್ತು ಚನ್ನಕೇಶವ್ ಬೈಕ್ ಸವಾರರ ಜೊತೆ ವಾಗ್ವಾದ ಮಾಡಿ ಜಗಳ ಮಾಡಿದ್ರು. ಆದ್ರೆ ಬೈಕ್​ ಸವಾರರು ಹೇಳುವಷ್ಟು ಹೇಳಿ ಕೊನೆಗೆ ಅಲ್ಲಿಂದ ಬೈಕ್ ಹತ್ತಿ ಹೊರಟ್ಟಿದ್ದಾರೆ. ಆದ್ರೆ ಕಾರ್​ನಲ್ಲಿದ್ದ ಚನ್ನಕೇಶವ್ ಮತ್ತು ಅರವಿಂದ ಇಷ್ಟಕ್ಕೆ ಸುಮ್ಮನಾಗಿರಲಿಲ್ಲ. ಕಾರ್​ನಲ್ಲಿ ಬೈಕ್​​ ಸವಾರರನ್ನ ಚೇಸ್ ಮಾಡೋದಕ್ಕೆ ಶುರು ಮಾಡಿದ್ದಾರೆ. ಮುಂದೆ ನಡೆಯಬಾರದ ದುರಂತ ನಡೆದುಬಿಟ್ಟಿದೆ.

ಇದನ್ನೂ ಓದಿ: KSRTC ಬಸ್ ಹರಿದು ದುರಂತ.. 6 ವರ್ಷದ ಬಾಲಕನ ಜೀವ ಉಳಿಸಲು ಹರಸಾಹಸ; ಕೊನೆಗೆ ಏನಾಯ್ತು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೈಕ್​​ ಟಚ್​ ಆಗಿದ್ದಕ್ಕೆ ಕಾರ್​ನಲ್ಲಿ ಚೇಸ್​ ಮಾಡಿ ಕೊಂದ ಹಂತಕರು; ಯುವಕ ದಾರುಣ ಸಾವು!

https://newsfirstlive.com/wp-content/uploads/2024/08/Crime-news.jpg

Load More