newsfirstkannada.com

VIDEO: ವೇಗವಾಗಿ ಬಂದು ಗುದ್ದಿದ ಕಾರು; ಅಬ್ಬಾ.. ಪವಾಡ ಸದೃಶ ರೀತಿಯಲ್ಲಿ ಪಾರಾದ ವಿದ್ಯಾರ್ಥಿನಿ

Share :

04-07-2023

    ರಸ್ತೆ ದಾಟುತ್ತಿದ್ದಾಗ ವಿದ್ಯಾರ್ಥಿನಿಗೆ ಏಕಾಏಕಿ ಡಿಕ್ಕಿ ಹೊಡೆದ ಕಾರು

    ಮುಧೋಳ ತಹಶೀಲ್ದಾರ್ ಕಚೇರಿ ಬಳಿ ನಡೆದ ಭೀಕರ ಅಪಘಾತ

    ಪವಾಡ ಸದೃಶ ರೀತಿಯಲ್ಲಿ ಬಚಾವ್​​​ ಆದ ವಿದ್ಯಾರ್ಥಿನಿ ರೇಣುಕಾ

ಬಾಗಲಕೋಟೆ: ಇತ್ತೀಚಿಗೆ ರಾಜ್ಯದ ಹಲವೆಡೆ ಅಪಘಾತದ ಸಂಖ್ಯೆ ಹೆಚ್ಚಾಗುತ್ತಲೇ ಇವೆ. ಭೀಕರ ಅಪಘಾತದಲ್ಲಿ ಸಾಕಷ್ಟು ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಅದರಲ್ಲಿ ಇನ್ನು ಕೆಲವರು ಸಾವಿನ ದವಡೆಯಿಂದ ಪಾರಾಗಿ ಬರುತ್ತಾರೆ. ಹೀಗೆ ರಸ್ತೆ ದಾಟುತ್ತಿದ್ದಾಗ ವಿದ್ಯಾರ್ಥಿನಿಗೆ ಆಕಸ್ಮಿಕವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಈ ಘಟನೆಯು ಜಿಲ್ಲೆಯ ಮುಧೋಳ ತಹಶೀಲ್ದಾರ್ ಕಚೇರಿ ಬಳಿ ಸಂಭವಿಸಿದೆ.

ವಿದ್ಯಾರ್ಥಿನಿಯು ರಸ್ತೆ ಮೇಲೆ ಓಡಿಕೊಂಡು ಹೋಗುತ್ತಿದ್ದಾಗ ಏಕಾಏಕಿ ಬಂದ ಕಾರು ಆಕೆಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿನಿ ಹಾರಿ ರಸ್ತೆ ಬದಿ ಬಿದ್ದಿದ್ದಾಳೆ. ಸದ್ಯ ಈ ಅಪಘಾತದಲ್ಲಿ ಬದುಕುಳಿದ ವಿದ್ಯಾರ್ಥಿನಿ ರೇಣುಕಾಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಈ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ವೇಗವಾಗಿ ಬಂದು ಗುದ್ದಿದ ಕಾರು; ಅಬ್ಬಾ.. ಪವಾಡ ಸದೃಶ ರೀತಿಯಲ್ಲಿ ಪಾರಾದ ವಿದ್ಯಾರ್ಥಿನಿ

https://newsfirstlive.com/wp-content/uploads/2023/07/accident-2.jpg

Load More