newsfirstkannada.com

ಹೆದ್ದಾರಿಯಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಸಾವು, ಓರ್ವನ ಸ್ಥಿತಿ ಗಂಭೀರ

Share :

Published June 30, 2024 at 7:38am

  ಏಳು ಜನರಿದ್ದ ಏರ್ಟಿಗಾ ಕಾರು ಹೆದ್ದಾರಿಯಲ್ಲಿ ಅಪಘಾತ

  ಬೆಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಕಾರು

  ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಡಿವೈಡರ್​ಗೆ ಡಿಕ್ಕಿ

ವಿಜಯನಗರ: ಹೆದ್ದಾರಿಯಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ಓರ್ವನ ಸ್ಥಿತಿ ಗಂಭೀರವಾಗಿದೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಹೊರವಲಯದ NH 50 ರಲ್ಲಿ ಘಟನೆ ನಡೆದಿದೆ.

ಏರ್ಟಿಗಾ ಕಾರೊಂದು ಏಳು ಜನರನ್ನು ಹೊತ್ತು ಸಾಗಿಸುತ್ತಿತ್ತು. ಇಳಕಲ್‍ನಿಂದ ಬೆಂಗಳೂರಿಗೆ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ವೇಳೆ ಏರ್ಟಿಗಾ‌ ಕಾರು ಅಪಘಾತವಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಡಿವೈಡರ್​ಗೆ ಗುದ್ದಿದೆ. ಅಪಘಾತದಲ್ಲಿ ನಾಲ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಇದನ್ನೂ ಓದಿ: ಅನುಮಾನಾಸ್ಪದವಾಗಿ ಯುವಕ ಸಾವು.. ಬೇಕರಿ ಮಾಲೀಕನೇ ಕೊಲೆ ಮಾಡಿರೋದಾಗಿ ಆರೋಪ

ಡಿಕ್ಕಿ ರಸಭಕ್ಕೆ ಕಾರು ನುಜ್ಜುಗುಜ್ಜಾಗಿದೆ. ಸಾವನ್ನಪ್ಪಿದ ಇಬ್ಬರೂ ಲಿಂಗಸಗೂರು ಮೂಲದ ವ್ಯಕ್ತಿಗಳು ಎಂದು ಹೇಳಲಾಗುತ್ತಿದೆ. ಅತ್ತ ಗಾಯಾಳುಗಳಿಗೆ ಕೂಡ್ಲಿಗಿ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಹೀಲಿಯಂ ಸಿಸ್ಟಂ ಸೋರಿಕೆ! ಬಾಹ್ಯಾಕಾಶದಲ್ಲಿ ಅಪಾಯದಲ್ಲಿ ಸಿಲುಕಿದ ಭಾರತ ಮೂಲದ ವಿಜ್ಞಾನಿ ಸುನೀತಾ ವಿಲಿಯಮ್ಸ್! 

ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಮೃತರ ವಿಳಾಸ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆದ್ದಾರಿಯಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಸಾವು, ಓರ್ವನ ಸ್ಥಿತಿ ಗಂಭೀರ

https://newsfirstlive.com/wp-content/uploads/2024/06/car-Accident-3.jpg

Load More