newsfirstkannada.com

ಪಕ್ಕದ ಮನೆಯವರಲ್ಲಿ ಒಂದು ವಿನಂತಿ.. ಕಾರ್ ಓನರ್​ಗೆ ಪ್ರೀತಿಯಿಂದ ಮನವಿ ಪತ್ರ ಬರೆದ ಮಾಲೀಕ..!

Share :

03-07-2023

  ಸಿಲಿಕಾನ್​​ ಸಿಟಿ ಮಂದಿಗೆ ಶುರುವಾಯ್ತು ಪಾರ್ಕಿಂಗ್ ಸಮಸ್ಯೆ

  ಮನೆ ಮುಂದೆ ನಿಲ್ಲಿಸಿದ ಕಾರಿನ ಮೇಲೆ ಬಂತು ಮನವಿ ಪತ್ರ

  ಟ್ವಿಟರ್ ಖಾತೆಯಲ್ಲಿ ಸಖತ್​ ವೈರಲ್​​ ಆಗ್ತಿದೆ​ ಚಿಕ್ಕ ಪತ್ರ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಾಮಾನ್ಯವಾಗಿ ಮಂದಿಗೆ ಇರೋ ಕಾಮನ್ ಸಮಸ್ಯೆ ಏನಪ್ಪಾ ಅಂತ ಕೇಳಿದ್ರೆ ಎಲ್ಲರು ಕೊಡೋ ಉತ್ತರ ಒಂದೇ. ಅದು ರಸ್ತೆ ಸರಿ ಇಲ್ಲಾ, ಅತಿಯಾದ ಟ್ರಾಫಿಕ್​ ಜಾಮ್​. ಪಾರ್ಕಿಂಗ್ ಸಮಸ್ಯೆ. ಬಿಲ್ಡಿಂಗ್‌ನಲ್ಲೇ ಪಾರ್ಕಿಂಗ್‌ ಇದ್ರೆ ಓಕೆ. ಇಲ್ಲಾ ಅಂದ್ರೆ ಮನೆ ಮುಂದಿರೋ ರಸ್ತೆನೇ ಗತಿ ಎಂದು ಹೇಳುತ್ತಾರೆ. ಇದರ ಮಧ್ಯೆ ಮನೆ ಮಾಲೀಕರೊಬ್ಬರು ಕಾರ್ ಓನರ್​ಗೆ ಪ್ರೀತಿಯಿಂದ ಮನವಿ ಪತ್ರವೊಂದು ಬರೆದಿದ್ದಾರೆ. ಇದೀಗ ಈ ಚಿಕ್ಕ ಲೆಟರ್​ ಟ್ವಿಟರ್​ನಲ್ಲಿ ಸಖತ್ ವೈರಲ್ ಆಗುತ್ತಿದೆ.

ಅಷ್ಟಕ್ಕೂ ಈ ಪತ್ರದಲ್ಲಿ ಏನಿದೆ..?

ನಮಸ್ತೆ. ದಯವಿಟ್ಟು ನಿಮ್ಮ ಕಾರನ್ನು ಇಲ್ಲಿ ನಿಲ್ಲಿಸಬೇಡಿ! ಈ ತರ ನಿಲ್ಲಿಸಬಾರದು ಅಂತ ಮೊದಲೇ ಮನವಿ ಮಾಡಿದ್ದೆವು. ಆದ್ರೂ ಇನ್ನೊಮ್ಮೆ ಕೇಳಿ ಕೊಳ್ತಾ ಇದ್ದೇವೆ ನಾವು 2000ನೇ ಇಸವಿಯಿಂದ ಈ ಏರಿಯಾದಲ್ಲಿ ವಾಸಿಸುತ್ತಿದ್ದೇವೆ. ನಮ್ಮದೇ ಆದ 2 ಕಾರುಗಳನ್ನು ಹೊಂದಿದ್ದೇವೆ. ಇದನ್ನ ದಯವಿಟ್ಟು ಅರ್ಥಮಾಡಿಕೊಳ್ಳಿ. ನೀವು ಮೊದಲು ಎಲ್ಲಿ ಪಾರ್ಕ್ ಮಾಡ್ತಿದ್ರೋ ಅಲ್ಲೇ ನಿಮ್ಮ ಕಾರ್ ಪಾರ್ಕ್ ಮಾಡಿ.

-ಇಂತಿ ನಿಮ್ಮ ಪಕ್ಕದಮನೆ ನಿವಾಸಿ

ಸದ್ಯ ಟ್ವಿಟರ್ ಖಾತೆಯಲ್ಲಿ ಈ ವಿಚಾರ ಸಖತ್​ ಟ್ರೆಂಡಿಂಗ್​ನಲ್ಲಿದ್ದು, ಈ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿದೆ. ಕಾರ್ ಪಾರ್ಕ್ ಮಾಡಿದ್ದಕ್ಕೆ ಸಾಂಬಾರ್ ಪೌಡರ್ ಚೆಲ್ಲಿ ಕೂಡ ಅನೇಕ ನೆರೆಹೊರೆಯವರು ಕುಹಕವಾಡಿದರೆ, ಇನ್ನೂ ಕೆಲವರು ಪ್ರೀತಿಯ ಪತ್ರಕ್ಕೆ ಫಿದಾ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಕ್ಕದ ಮನೆಯವರಲ್ಲಿ ಒಂದು ವಿನಂತಿ.. ಕಾರ್ ಓನರ್​ಗೆ ಪ್ರೀತಿಯಿಂದ ಮನವಿ ಪತ್ರ ಬರೆದ ಮಾಲೀಕ..!

https://newsfirstlive.com/wp-content/uploads/2023/07/parking.jpg

Load More