newsfirstkannada.com

ಇನ್ಮುಂದೆ ಮೆಟ್ರೋದಲ್ಲೂ ಎಣ್ಣೆ ಬಾಟಲ್​​ ತೆಗೆದುಕೊಂಡು ಹೋಗಬಹುದು.. ಆದ್ರೆ ಕಂಡೀಷನ್ಸ್​​ ಅಪ್ಲೈ!

Share :

01-07-2023

    ಮೆಟ್ರೋದಲ್ಲಿ ಮದ್ಯದ ಬಾಟಲ್​ಗಳನ್ನು ಸಾಗಿಸಲು ಕಂಡೀಷನ್ಸ್​ ಅಪ್ಲೈ

    ಒಬ್ಬ ವ್ಯಕ್ತಿ ಇಷ್ಟು ಬಾಟಲ್​ಗಳನ್ನು ತೆಗೆದುಕೊಂಡು ಹೋಗಬಹುದು

    ಟ್ವಿಟರ್​ನಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಮೆಟ್ರೋ ಅಧಿಕಾರಿಗಳು

ನವದೆಹಲಿ: ಬೃಹತ್​ ನಗರಗಳಲ್ಲಿ ಟ್ರಾಫಿಕ್​ ಸಮಸ್ಯೆ ತಪ್ಪಿಸಲು ಮೆಟ್ರೋ ರೈಲುಗಳ ಸಂಚಾರ ಆರಂಭಿಸಲಾಗಿತ್ತು. ಈಗಾಗಲೇ ದೇಶದ ಬಹುತೇಕ ರಾಜಧಾನಿಗಳಲ್ಲಿ ಮೆಟ್ರೋ ರೈಲುಗಳು ಸುಗಮವಾಗಿ ಸಂಚಾರ ಮಾಡುತ್ತಿವೆ. ಸದ್ಯ ಈ ಮೆಟ್ರೋ ರೈಲಿನಲ್ಲಿ ಸೀಲ್ ಮಾಡಿದಂತ ಮದ್ಯಪಾನದ ಬಾಟಲ್​ಗಳನ್ನು ಕೊಂಡೊಯ್ಯಬಹುದು ಎಂದು ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (DMRC) ಹೇಳಿದೆ. ಜೊತೆಗೆ ಕೆಲವು ಕಂಡಿಷನ್​ಗಳನ್ನು ಹಾಕಿದೆ.

ಟ್ವಿಟರ್​ ಬಳಕೆದಾರರೊಬ್ಬರು ದೆಹಲಿ ಮೆಟ್ರೋದಲ್ಲಿ ಮದ್ಯಪಾನ ಬಾಟಲ್​ಗಳನ್ನು ತೆಗೆದುಕೊಂಡು ಹೋಗಬಹುದೇ ಎಂದು ಪ್ರಶ್ನೆ ಮಾಡಿದ್ದರು. ಇವರು ತಮ್ಮ ಟ್ವೀಟ್​ ಅನ್ನು ಡಿಲೀಟ್​ ಮಾಡಿದ್ದಾರೆ. ಆದರೂ ಇದಕ್ಕೆ DMRCಯು ತನ್ನ ಅಧಿಕೃತ ಟ್ವಿಟರ್​ನಲ್ಲಿ ಉತ್ತರಿಸಿದ್ದು, ಒಬ್ಬ ವ್ಯಕ್ತಿಯು ಮೆಟ್ರೋದಲ್ಲಿ 2 ಸೀಲ್ ಮಾಡಿದ ಬಾಟಲ್​ಗಳನ್ನು ತೆಗೆದುಕೊಂಡು ಹೋಗಬಹುದು. ಆದರೆ ಮೆಟ್ರೋ ರೈಲಿನ ಒಳಗೆ, ನಿಲ್ದಾಣ ಹಾಗೂ ಮೆಟ್ರೋಗೆ ಸಂಬಂಧಿಸಿದ ಯಾವುದೇ ಸ್ಥಳಗಳಲ್ಲಿ ಮದ್ಯಪಾನ ಮಾಡುವಂತಿಲ್ಲ ಎಂದು ಹೇಳಿದೆ.

ಈವರೆಗೂ ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಮೆಟ್ರೋ ಲೈನ್ ಹೊರತು ಪಡಿಸಿ ದೆಹಲಿ ಮೆಟ್ರೋದಲ್ಲಿ ಮದ್ಯ ತೆಗೆದುಕೊಂಡು ಹೋಗುವುದನ್ನು ನಿಷೇಧ ಮಾಡಲಾಗಿತ್ತು. ಆದರೆ ಈಗ ಇದನ್ನು ಸಡಿಲಿಕೆ ಮಾಡಿದ್ದು 2 ಬಾಟಲ್​ಗಳನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇನ್ಮುಂದೆ ಮೆಟ್ರೋದಲ್ಲೂ ಎಣ್ಣೆ ಬಾಟಲ್​​ ತೆಗೆದುಕೊಂಡು ಹೋಗಬಹುದು.. ಆದ್ರೆ ಕಂಡೀಷನ್ಸ್​​ ಅಪ್ಲೈ!

https://newsfirstlive.com/wp-content/uploads/2023/06/METRO_DELHI.jpg

Load More