newsfirstkannada.com

ಗೃಹಲಕ್ಷ್ಮಿ ನೋಂದಣಿ​​; ಅರ್ಜಿ ಹಾಕಲು ದುಡ್ಡು ಕೇಳೋ ಮುನ್ನ ಹುಷಾರ್​​; ಇಬ್ಬರ ಮೇಲೆ ಬಿತ್ತು ಕೇಸ್​​​

Share :

29-07-2023

    ಕಾಂಗ್ರೆಸ್​ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಗೃಹಲಕ್ಷ್ಮಿ

    ಗೃಹಲಕ್ಷ್ಮಿ ನೋಂದಣಿಗಾಗಿ ದುಡ್ಡು ಪಡೆಯುತ್ತಿದ್ದ ಭ್ರಷ್ಟರು..!

    ಹಣ ಪಡೆದು ನೋಂದಣಿ ಮಾಡುತ್ತಿದ್ದ ಇಬ್ಬರ ವಿರುದ್ಧ ಕೇಸ್​​

ಬೆಳಗಾವಿ: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆ ನೋಂದಣಿ ಮಾಡಲು ಗ್ರಾಮ ಒನ್​ ಕೇಂದ್ರದ ಲಾಗಿನ್​ ಐಡಿ ದುರ್ಬಳಕೆ ಮಾಡಿಕೊಂಡು ಸಾರ್ವಜನಿಕರಿಂದ ಹಣ ವಸೂಲಿ ಮಾಡಿದ ಕೇಸ್​ ಸಂಬಂಧ ಇಬ್ಬರ ವಿರುದ್ಧ ಕೇಸ್​ ಮಾಡಲಾಗಿದೆ.

ನಗರದ ಚವಾಟ ಗಲ್ಲಿಯಲ್ಲಿ ಜನತಾ ಆನ್​ಲೈನ್​​ ಸೆಂಟರ್ ನಡೆಸುತ್ತಿರೋ ಅದೃಶ್ ಮತ್ತು ಮುತಗಾ ಗ್ರಾಮ ಒನ್ ಕೇಂದ್ರದ ಕಿರಣ ಚೌಗಲಾ ಎಂಬುವರ ವಿರುದ್ಧ ಕೇಸ್​ ದಾಖಲಾಗಿದೆ. ಬೆಳಗಾವಿ ನಗರದ ಮಾರ್ಕೆಟ್ ಪೊಲೀಸ್ ಠಾಣೆ ಪೊಲೀಸರು ಕೇಸ್​ ಮಾಡಿದ್ದಾರೆ.

ಜನತಾ ಆನ್​ಲೈನ್​​ ಸೆಂಟರ್​​ನಲ್ಲಿ ಗೃಹಲಕ್ಷ್ಮಿ ಯೋಜನೆ ನೋಂದಣಿಗಾಗಿ ಹಣ ಪಡೆಯಲಾಗುತ್ತಿದೆ ಎಂದು ಸಾರ್ವಜನಿಕರು ದೂರು ನೀಡಿದ್ದಾರೆ. ಸಾರ್ವಜನಿಕರ ದೂರಿನ ಆಧಾರದ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಆರ್. ನಾಗರಾಜ್, ಬೆಳಗಾವಿ ತಹಶೀಲ್ದಾರ್‌ ಸಿದ್ದರಾಯ ಬೋಸಗಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಜಂತ್ರಿ ಅವರು ಜನತಾ ಆನ್​​ಲೈನ್​ ಕೇಂದ್ರದ ಮೇಲೆ ದಾಳಿ ನಡೆಸಿ ಅಕ್ರಮ ಪತ್ತೆ ಮಾಡಿದ್ದರು. ಇದಾದ ಬಳಿಕ ಕೇಂದ್ರಕ್ಕೆ ಬೀಗ ಜಡಿದು ಪೊಲೀಸ್ ಠಾಣೆಯಲ್ಲಿ ದೂರು ನೀಡಿರುತ್ತಾರೆ.

ಗ್ರಾಮ ಒನ್ ಕೇಂದ್ರದ ಪರವಾನಿಗೆ ಅಮಾನತು

ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ನೋಂದಣಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆಸಿರುವ ಮುತಗಾ ಗ್ರಾಮ ಒನ್ ಕೇಂದ್ರದ ಪರವಾನಿಗೆ ಕೂಡ ಅಮಾನತು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೃಹಲಕ್ಷ್ಮಿ ನೋಂದಣಿ​​; ಅರ್ಜಿ ಹಾಕಲು ದುಡ್ಡು ಕೇಳೋ ಮುನ್ನ ಹುಷಾರ್​​; ಇಬ್ಬರ ಮೇಲೆ ಬಿತ್ತು ಕೇಸ್​​​

https://newsfirstlive.com/wp-content/uploads/2023/07/Gruhalakshmi-scheme.jpg

Load More