/newsfirstlive-kannada/media/post_attachments/wp-content/uploads/2023/06/AMRUT.jpg)
ಉಡುಪಿ: ಜಿಲ್ಲೆಯ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ವಿರುದ್ಧ ಕೋಟ್ಯಾಂತರ ರೂಪಾಯಿ ವಂಚನೆ ಆರೋಪ ಕೇಳಿ ಬಂದಿದೆ.
ಏನಿದು ಆರೋಪ..?
ಉಡುಪಿ ನಗರದ ಶ್ರೀ ಲಕ್ಷ್ಮೀ ಇನ್ಪ್ರಾಸ್ಟ್ರಕ್ಚರ್‌ನ ಮಾಲೀಕ, ಆರೋಪಿ ಅಮೃತ್ ಶೆಣೈ ‘ವೈಜರ್’ ಹೆಸರಿನ ಅಪಾರ್ಟ್ ಮೆಂಟ್ ಕಟ್ಟಿಸುತ್ತಿದ್ದು, ಈ ಕಟ್ಟಡದ ನಿರ್ಮಾಣ ಹಂತದಲ್ಲೇ ಹಲವರು ಲಕ್ಷಾಂತರ ರೂಪಾಯಿ ನೀಡಿ ಬುಕ್ ಮಾಡಿದ್ದರು. ಅಂದಾಜು 40 ಕ್ಕೂ ಹೆಚ್ಚು ಜನರಿಂದ ಆರೋಪಿ ಕಂತುಗಳಲ್ಲಿ ಲಕ್ಷಾಂತರ ರೂಪಾಯಿ ಪಡೆದುಕೊಂಡಿದ್ದಾರಂತೆ.
/newsfirstlive-kannada/media/post_attachments/wp-content/uploads/2023/06/UDP-2-300x169.png)
ಆದರೆ ಫ್ಲ್ಯಾಟ್ ಕಾಮಗಾರಿಯನ್ನೂ ಮುಗಿಸದೆ, ನೋಂದಣಿಯೂ ಮಾಡಿಸಿಕೊಟ್ಟಿಲ್ಲ. ಇಷ್ಟೇ ಅಲ್ಲದೇ ಇಬ್ಬಿಬ್ಬರಿಗೆ ಒಂದೇ ಫ್ಲ್ಯಾಟ್​ನ್ನು ಮಾರಿದ್ದಾಗಿ ವಂಚನೆಗೊಳಗಾದವರು ದೂರಿದ್ದಾರೆ. ಅಮೃತ್ ಶೆಣೈ ವಿರುದ್ಧ ನಗರ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ.
/newsfirstlive-kannada/media/post_attachments/wp-content/uploads/2023/06/UDP-1-300x173.png)
ಅಪಾರ್ಟ್​​ಮೆಂಟ್ ಕೊಡ್ತೀವಿ ಎಂದು ನಮ್ಮ ಬಳಿ ಎಲ್ಲಾ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. 8 ವರ್ಷದ ಹಿಂದೆಯೇ ದುಡ್ಡನ್ನು ಪಡೆದು, ಇನ್ನೂ ನೋಂದಣಿ ಮಾಡಿಸಿಕೊಟ್ಟಿಲ್ಲ. ದುಡ್ಡು ಕೂಡ ವಾಪಸ್ ಕೊಟ್ಟಿಲ್ಲ ಎಂದು ವಂಚನೆಗೊಳಗಾದ ಗಿರೀಶ್ ಐತಾಳ್ ಆರೋಪಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us