newsfirstkannada.com

WATCH: ಕ್ಯೂಟ್‌ ಕ್ಯಾಟ್‌ಗೂ ಮಸ್ತ್​ ಹೆಲ್ಮೆಟ್.. ತನ್ನ ಮಾಲೀಕನ ಜೊತೆ ಬೆಕ್ಕಿನ ಬೈಕ್​ ಸವಾರಿ ಹೇಗಿದೆ ನೋಡಿ

Share :

19-08-2023

    ನನಗೆ ಮಾತ್ರ ಅಲ್ಲ, ನಿನಗೂ ಕೂಡ ಇದೆ ಚಿಕ್ಕ ಹೆಲ್ಮೆಟ್..!

    ವೈರಲ್​ ಆದ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು?

    ಮಿಲಿಯನ್​​ ವೀವ್ಸ್​ ಪಡೆದುಕೊಂಡ ಕ್ಯಾಟ್‌ ಹೆಲ್ಮೆಟ್‌ ವಿಡಿಯೋ

ಹೆಲ್ಮೆಟ್ ಹಾಕಿಕೊಂಡು ಜೀವ ಉಳಿಸಿಕೊಳ್ಳಿ ಅನ್ನೋದು ಪೊಲೀಸರ ಸಲಹೆ. ಆದರೆ ಹೆಲ್ಮೆಟ್​ ಹಾಕಿಕೊಳ್ಳುವುದರಿಂದ ಜನರು ಪ್ರಾಣಾಪಾಯದಿಂದ ಪಾರಾಗಬಹುದು. ಆದರೂ ಕೂಡ ಕೆಲವರು ಹೆಲ್ಮೆಟ್ ಹಾಕಿಕೊಳ್ಳುವುದಿಲ್ಲ. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಡಿಯೋ ನೋಡಿ ಎಲ್ಲರೂ ಕೂಡ ನನ್ನ ಹಾಗೇ ಹೆಲ್ಮೆಟ್ ಹಾಕಿಕೊಳ್ಳಿ ಎಂಬ ಸಂದೇಶವನ್ನು ಸಾಕು ಪ್ರಾಣಿ ಪೂವ್​ ಮಾಡಿದೆ.

ಬೆಕ್ಕು ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಇತ್ತೀಚಿನ ದಿನಗಳಲ್ಲಿ ಸಾಕು ಪ್ರಾಣಿ ಬೆಕ್ಕು ಎಲ್ಲರ ಮನೆಗಳಲ್ಲಿ ಇದ್ದೇ ಇರುತ್ತವೆ. ಹೀಗೆ ತನ್ನ ಪ್ರೀತಿಯ ಬೆಕ್ಕಿನ ಮರಿಗೆ ಯುವಕನೊರ್ವ ಹೆಲ್ಮೆಟ್‌ ಹಾಕಿ ನೆಟ್ಟಿಗರ ಗಮನ ಸೆಳೆದಿದ್ದಾನೆ. ತಾನು ಮಾತ್ರವಲ್ಲದೆ ಆತನ ಜೊತೆಗಿದ್ದ ಕ್ಯೂಟ್ ಬೆಕ್ಕಿಗೂ ಕೂಡ ಪುಟ್ಟ ಹೆಲ್ಮೆಟ್‌ ಹಾಕಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ಫುಲ್​ ಫಿದಾ ಆಗಿದ್ದಾರೆ. ವಿಡಿಯೋದಲ್ಲಿ ಹೆಲ್ಮೆಟ್ ಧರಿಸಿರುವ ಬೆಕ್ಕು ಕೂಡ ಬೈಕ್ ಮೇಲೆ ಆರಾಮವಾಗಿ ಕುಳಿತಿರುವುದು ಕಂಡುಬರುತ್ತದೆ.

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಈ ವಿಡಿಯೋ ನೋಡಿದ ಅದೆಷ್ಟೋ ನೆಟ್ಟಿಗರು ಮನಸೋತಿದ್ದಾರೆ. ಕೂಲ್ ಕ್ಯಾಟ್, ಎಷ್ಟು ಅದ್ಭುತವಾಗಿದೆ, ಮುದ್ದು ಮುದ್ದಾದ ಬೆಕ್ಕು ಎಂದು ಬಗೆ ಬಗೆಯಾಗಿ ಕಾಮೆಂಟ್​ ಮಾಡಿದ್ದಾರೆ. ಟ್ವೀಟರ್​ನಲ್ಲಿ ಈ ವಿಡಿಯೋ 7.4 ಮಿಲಿಯನ್​​ ವಿವ್ಸ್​ ಪಡೆದುಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ಕ್ಯೂಟ್‌ ಕ್ಯಾಟ್‌ಗೂ ಮಸ್ತ್​ ಹೆಲ್ಮೆಟ್.. ತನ್ನ ಮಾಲೀಕನ ಜೊತೆ ಬೆಕ್ಕಿನ ಬೈಕ್​ ಸವಾರಿ ಹೇಗಿದೆ ನೋಡಿ

https://newsfirstlive.com/wp-content/uploads/2023/08/cat-helmet-1.jpg

Load More