newsfirstkannada.com

ಕಾವೇರಿದ ಕಾವೇರಿ ಹೋರಾಟ; ತಮಿಳುನಾಡಿಗೆ ನೀರು ಬಿಡಬೇಡಿ ಎಂದು ಕನ್ನಡಿಗರ ಹೋರಾಟ

Share :

03-09-2023

    ತಮಿಳುನಾಡಿಗೆ ಕಾವೇರಿ ನೀರು.. ರೈತರಿಗೆ ಕಣ್ಣೀರು!

    ತಾರಕಕ್ಕೇರಿದ ಕಾವೇರಿ ಕದನ.. ಮೊಳಗಿತು ಕಹಳೆ

    ಬೆಂಗಳೂರಿಂದ ಕನ್ನಂಬಾಡಿಕಟ್ಟೆವರೆಗೆ ಬೈಕ್ ಱಲಿ

ಮಂಡ್ಯ: ತಮಿಳುನಾಡಿಗೆ ನೀರು ಹರಿದು ಹೋಗುತ್ತಿದೆ. ಕಾವೇರಿ ಕೊಳ್ಳದ ಒಡಲು ಬರಿದಾಗುತ್ತಿದೆ. ವಿವಾದ ಸುಪ್ರೀಂಕೋರ್ಟ್​ ಕಟಕಟೆಯಲ್ಲಿ ನಿಂತಿದೆ. ರಾಜ್ಯದ ರೈತರ ಜಲಜ್ವಾಲೆ ಧಗಧಗಿಸುತ್ತಿದೆ. ಸರ್ಕಾರ ಕಾನೂನು ಹೋರಾಟಕ್ಕೆ ಮುಂದಾಗಿದೆ. ಪರಿಸ್ಥಿತಿ ಅಯೋಮಯ ಆಗುವಂತಿದೆ.

ವರುಣ ಮುನಿಸಿಕೊಂಡ ಹೊತ್ತಲ್ಲೇ ತಮಿಳುನಾಡು ಕಾವೇರಿ ಕ್ಯಾತೆ ತೆಗೆದಿದೆ. ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿಲ್ಲ. ಇರುವ ಅಲ್ಪಸ್ವಲ್ಪ ನೀರನ್ನ ತಮಿಳುನಾಡು ಕಸಿದುಕೊಳ್ತಿದೆ. ಅನ್ನದಾತರ ಕಿಚ್ಚಿನ ನಡುವೆ ಜೆಡಿಎಸ್ ಜೊತೆ ಕೇಸರಿಪಡೆಯೂ ಕಾವೇರಿ ಕಹಳೆ ಮೊಳಗಿಸಿದೆ.

ಸಕ್ಕರೆನಾಡಲ್ಲಿ ತಾರಕಕ್ಕೇರಿದ ‘ಕಾವೇರಿ’ದ ಕದನ!

ಸಕ್ಕರೆ ನಾಡು ಮಂಡ್ಯದಲ್ಲಿ ‘ಕಾವೇರಿ’ ಉಳಿವಿಗಾಗಿ ಹೋರಾಟ ಮತ್ತಷ್ಟು ಕಾವು ಪಡೆದಿದೆ. ಜೆಡಿಎಸ್ ಬಳಿಕ ಈಗ ಬಿಜೆಪಿ ಕೂಡ ಕದನ ಕಣಕ್ಕೆ ಇಳಿದಿದೆ. ಮಂಡ್ಯದ ಕಾವೇರಿ ನೀರಾವರಿ ನಿಗಮದ ಕಚೇರಿ ಬಳಿ ಕಾವೇರಿ ನಮ್ಮನ್ನು ಬಿಟ್ಟು ಹೋಗಬೇಡ ಅಂತ ಘೋಷಣೆ ಕೂಗುತ್ತಾ ಅಪ್ಪಿಕೋ ಚಳವಳಿ ಮಾಡಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಒಬ್ಬರನ್ನೊಬ್ಬರು ತಬ್ಬಿಕೊಂಡು ಚಳವಳಿ ನಡೆಸಿದ್ದಾರೆ. ನೀರು ಬಿಟ್ಟ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಿಂದ ಕೆಆರ್​ಎಸ್​​ವರೆಗೆ ಬೈಕ್ ಱಲಿ!

ಮತ್ತೊಂದೆಡೆ ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಕರುನಾಡ ಸೇವಕರು ಸಿಡಿದೆದ್ದಿದ್ದಾರೆ. ಬೆಂಗಳೂರಿನಿಂದ ಕೆಆರ್​​ಎಸ್​​ವರೆಗೆ ಬೈಕ್ ಱಲಿ ನಡೆಸಿದ ಕರುನಾಡ ಸೇವಕರು ಮತ್ತು ಕನ್ನಡಸೇನೆ ಕಾರ್ಯಕರ್ತರು ಮಂಡ್ಯ ಮೈಷುಗರ್ ಸರ್ಕಲ್​​​ನಲ್ಲಿ ಚಪ್ಪಡಿ ಕಲ್ಲು ಹೊತ್ತುಕೊಂಡು ಸರ್ಕಾರ ನಮ್ಮ ತಲೆ ಮೇಲೆ ಚಪ್ಪಡಿ ಕಲ್ಲು ಹೊರಿಸಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಜಯ ವೃತ್ತದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.

ಈ ಸಂಬಂಧ ನ್ಯೂಸ್​ಫಸ್ಟ್​ ಜತೆಗೆ ಮಾತಾಡಿದ ಕರುನಾಡ ಸೇವಕರು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾದೇಶ್​ಗೌಡ ಎಸ್​​., ಕಾವೇರಿ ನೀರು ಉಳಿವಿಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ. ಮಂಡ್ಯ ರೈತರ ಕಷ್ಟ ಹೇಳ ತೀರದಾಗಿದೆ. ರಾಜ್ಯದಲ್ಲೇ ಕುಡಿಯಲು ನೀರಿಲ್ಲದಾಗ ತಮಿಳುನಾಡಿಗೆ ಬಿಡೋದು ಎಷ್ಟು ಸರಿ? ಎಂದರು. ಜತೆಗೆ ಯಾವುದೇ ಕಾರಣಕ್ಕೂ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬಾರದು ಎಂದು ಆಗ್ರಹಿಸಿದರು.

ನಾಡಿನ ಹಿತ ರಕ್ಷಣೆಗೆ ಕಾನೂನು ಹೋರಾಟ ಎಂದ ಸಚಿವ!

ಕಾವೇರಿ ಹೋರಾಟ ಭುಗಿಲೆದ್ದಿರುವ ಬೆನ್ನಲ್ಲೇ ಸಚಿವ ಹೆಚ್​.ಕೆ.ಪಾಟೀಲ್ ಪ್ರತಿಕ್ರಿಯಿಸಿದ್ದು ಕರ್ನಾಟಕದ ಹಿತಕ್ಕಾಗಿ ಕಾನೂನು ಹೋರಾಟ ಮಾಡ್ತೀವಿ ಅಂತ ಹೇಳಿದ್ದಾರೆ.. ಅತ್ತ ಕಾವೇರಿ ನೀರಿನ ವಿಷಯದಲ್ಲಿ ನನಗೆ ಏನನ್ನೂ ಹೇಳಲು ಶಕ್ತಿ ಇಲ್ಲ ಅಂತ ಮಾಜಿ ಪ್ರಧಾನಿ ದೇವೇಗೌಡರು ಪ್ರತಿಕ್ರಿಯೆ ನೀಡಿದ್ದಾರೆ.

ಒಟ್ಟಿನಲ್ಲಿ ಕರುನಾಡಲ್ಲಿ ಜಲಸಂಕಷ್ಟ ಹಾಹಾಕಾರ ಎಬ್ಬಿಸಿದೆ. ಸೆಪ್ಟೆಂಬರ್ 6ರಂದು ಸುಪ್ರೀಂಕೋರ್ಟ್​​ನಲ್ಲಿ ಕಾವೇರಿ ವಿಚಾರಣೆ ನಡೆಯಲಿದ್ದು ಕೋರ್ಟ್ ತೀರ್ಪಿನ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ರಾಜ್ಯ ಸರ್ಕಾರ ಕೋರ್ಟ್ ಆದೇಶ ಪಾಲಿಸುತ್ತಾ ಅಥವಾ ಹೋರಾಟಗಾರರ ಆಕ್ರೋಶಕ್ಕೆ ಮಣಿಯುತ್ತಾ ಅಂತ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾವೇರಿದ ಕಾವೇರಿ ಹೋರಾಟ; ತಮಿಳುನಾಡಿಗೆ ನೀರು ಬಿಡಬೇಡಿ ಎಂದು ಕನ್ನಡಿಗರ ಹೋರಾಟ

https://newsfirstlive.com/wp-content/uploads/2023/09/Cauvery.jpg

Load More