ಮತ್ತೆ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟ ಸರ್ಕಾರ
ಸರ್ಕಾರದ ವಿರುದ್ಧ ಮುಂದುವರಿದ ರೈತರ ಹೋರಾಟ
ರಾಜ್ಯದಲ್ಲೇ ನೀರಿಗೆ ಕೊರತೆ, ತಮಿಳುನಾಡಿಗೆ ಬಿಟ್ಟಿದ್ಯಾಕೆ?
ಮಂಡ್ಯ: ಹೊಟ್ಟೆಗೆ ಹಿಟ್ಟಿಲ್ಲದಿದ್ರು ಜುಟ್ಟಿಗೆ ಮಲ್ಲಿಗೆ ಹೂವು ಅನ್ನೋ ಹಾಗಾಗಿದೆ ಸದ್ಯ ರಾಜ್ಯದ ಪರಿಸ್ಥಿತಿ. ರಾಜ್ಯದಲ್ಲೇ ಜೀವಜಲಕ್ಕೆ ಹಾಹಾಕಾರ ಎದುರಾಗಿದ್ರೂ ಪಕ್ಕದ ರಾಜ್ಯಕ್ಕೆ ನೀರುಣಿಸಿ ಸುಪ್ರೀಂಕೋರ್ಟ್ಮುಂದೆ ಶಬ್ಬಾಶ್ ಎನ್ನಿಸಿಕೊಳ್ಳೋಕೆ ರಾಜ್ಯ ಸರ್ಕಾರ ಮುಂದಾಗಿದೆ. ಇದು ಅನ್ನದಾತರ ಕೆರಳುವಂತೆ ಮಾಡಿದೆ.
ಕರುನಾಡಿಗರ ಪಾಲಿನ ಜೀವಜಲದ ಒಡಲಿನಂತಿದ್ದ ಕಾವೇರಿ ತಾಯಿಗೆ ಈ ಬಾರಿ ಕಂಟಕ ಎದುರಾಗಿದೆ. ಮಳೆರಾಯನ ಕಣ್ಣಾಮುಚ್ಚಾಲೆ ಆಟ ಕಾವೇರಿ ಒಡಲನ್ನ ಬರಿದಾಗಿಸಿದೆ. ಇಂತಹ ಸಂದಿಘ್ನ ಪರಿಸ್ಥಿತಿಯ ಮಧ್ಯೆಯೂ ನೆರೆಯ ರಾಜ್ಯದ ಗಡಿಯನ್ನ ಕಾವೇರಿ ದಾಟಿರೋದು ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ.
ಸಕ್ಕರೆ ನಾಡಿನಲ್ಲಿ ಮುಂದುವರೆದ ಅನ್ನದಾತರ ಆಕ್ರೋಶ
ಸಂಕಷ್ಟದ ಮಧ್ಯೆಯೂ ಕಾವೇರಿ ನದಿಯ ನೀರನ್ನ ತಮಿಳುನಾಡಿಗೆ ಬಿಡುಗಡೆಮಾಡಿರೋದಕ್ಕೆ ಮಂಡ್ಯ ರೈತರು ನಿಗಿ ನಿಗಿ ಕೆಂಡವಾಗಿದ್ದಾರೆ. ಕಳೆದ 5-6 ದಿನಗಳಿಂದ ಸಕ್ಕರೆನಾಡು ಮಂಡ್ಯದಲ್ಲಿ ಮಡುಗಟ್ಟಿದ ರೈತರ ಆಕ್ರೋಶ ಪ್ರತಿಭಟನೆಯ ರೂಪತಾಳಿದೆ. ಶ್ರೀರಂಗಪಟ್ಟಣದ ಸ್ನಾನಘಟ್ಟದ ಬಳಿ ಭೂಮಿತಾಯಿ ಹೋರಾಟ ಸಮಿತಿಯ ಸದಸ್ಯರು ಕಾವೇರಿ ನದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ಹೊರಾಹಾಕಿದ್ದಾರೆ. ಕೂಡಲೇ ತಮಿಳುನಾಡಿಗೆ ಹರಿಸ್ತಿರೋ ನೀರು ನಿಲ್ಲಿಸ ಬೇಕು ಅಂತ ಆಗ್ರಹಿಸಿದ್ದಾರೆ.
‘ಕಾವೇರಿ’ದ ಪ್ರತಿಭಟನೆ.. ರೈತರ ಉಪವಾಸ ಸತ್ಯಾಗ್ರಹ
ನೆರೆಯ ತಮಿಳುನಾಡಿಗೆ ನೀರು ಹರಿಸಿರೋ ವಿಚಾರ ಪ್ರತಿಭಟನೆ, ಆಕ್ರೋಶ, ಧಿಕ್ಕಾರದ ಮಧ್ಯೆ ಉಪವಾಸ ಸತ್ಯಾಗ್ರಹಕ್ಕೂ ಕಾರಣವಾಗಿದೆ. ಮಂಡ್ಯದಲ್ಲಿ ಭಾರತೀಯ ಕಿಸಾನ್ ಸಂಘದಿಂದ ತಮಿಳುನಾಡಿಗೆ ನೀರು ಹರಿಸಿರೋದಕ್ಕೆ ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗಿದೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ನಡೆಸಿದ ಕಿಸಾನ್ ಸಂಘ, ರಾಜ್ಯ ಸರ್ಕಾರ ಜಿಲ್ಲೆಯ ರೈತರಿಗೆ ಸರ್ಕಾರ ಮೋಸ ಮಾಡ್ತಿದೆ. ನೀರು ಹರಿಸೋದನ್ನ ನಿಲ್ಲಿಸದಿದ್ದರೆ ಅಮರಣಾಂತ ಉಪವಾಸ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕೆಆರ್ಎಸ್ಗೆ ಕಂಟಕ.. ಜಲಾಶಯದ ಒಡಲು ಖಾಲಿ ಖಾಲಿ
ಒಂದ್ಕಡೆ ಮಳೆ ಕಳ್ಳಾಟ, ಮತ್ತೊಂದ್ಕಡೆ ಅನ್ನದಾತರ ಆಕ್ರೋಶ, ಈ ಮಧ್ಯೆ ಕೆಆರ್‌ಎಸ್ ಜಲಾಶಯದ ಒಡಲು ಸಹ ಬರಿದಾಗತೊಡಗಿದೆ. ಕಳೆದ 7 ದಿನಗಳಲ್ಲಿ ಜಲಾಶಯದಲ್ಲಿ 7 ಟಿಎಂಸಿ ನೀರು ಖಾಲಿಯಾಗಿದೆ. ದಿನೇ ದಿನೇ ಕೆಆರ್‌ಎಸ್ ನೀರಿನ ನೀರಿನ ಮಟ್ಟ ನೆಲ ಕಚ್ಚುತ್ತಿರೋದು ಮತ್ತಷ್ಟು ಸಂಕಷ್ಟದ ಸೂಚನೆ ನೀಡತೊಡಗಿದೆ.
ಕೆಆರ್‌ಎಸ್ ಖಾಲಿ ಖಾಲಿ
ಕಳೆದ ಬುಧವಾರ ಕೆಆರ್‌ಎಸ್ ಡ್ಯಾಂನಲ್ಲಿ 33.216 ಟಿಎಂಸಿ ಇದ್ದ ನೀರಿನ ಪ್ರಮಾಣ ಈಗ 26.284 ಟಿಎಂಸಿಗೆ ಇಳಿಕೆ ಕಂಡಿದೆ. ಈ 26.284 ಟಿಎಂಸಿ ನೀರಿನ ಪೈಕಿ 17.905 ಟಿಎಂಸಿ ನೀರು ಮಾತ್ರ ಬಳಕೆಗೆ ಯೋಗ್ಯವಾಗಿದೆ. ಮತ್ತೆ ತಮಿಳುನಾಡಿಗೆ 9,172 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಇದೇ ಇನ್ನೊಂದು ವಾರ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿದ್ರೆ ನೀರಿನ ಮಟ್ಟ ಮತ್ತಷ್ಟು ಕುಸಿತವಾಗೋ ಸಾಧ್ಯತೆ ಇದೆ.
ಇನ್ನೂ ಮಂಡ್ಯ ಜನರ ಜೀವನಾಡಿ ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಸಂಗ್ರಹ ಎಷ್ಟಿದೆ?
ಒಟ್ನಲ್ಲಿ ಸಕ್ಕರೆನಾಡಿನ ಅಕ್ಷಯ ಪಾತ್ರೆಯಂತಿದ್ದ ಕೆಆರ್ಎಸ್ಗೆ ಸದ್ಯ ಜಲಕಂಟಕ ಎದುರಾಗಿರೋದು ಅನ್ನದಾತರ ನಿದ್ದೆಗೆಡಿಸಿದೆ. ರೈತರ ಪ್ರತಿಭಟನೆಗೆ ಮಣಿದು ರಾಜ್ಯ ಸರ್ಕಾರ ಪರಿಸ್ಥಿತಿಯನ್ನ ನ್ಯಾಯಾಲಯಕ್ಕೆ ಮನವರಿಕೆ ಮಾಡಿ ನೀರು ಹರಿಸೋದನ್ನ ನಿಲ್ಲಿಸುತ್ತ ಅಂತ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ