newsfirstkannada.com

ಇಂದು ಸುಪ್ರೀಂ ಕಟಕಟೆಯಲ್ಲಿ ಕಾವೇರಿ ಕಾನೂನು ಕದನ; ಸರ್ವ ಪಕ್ಷ ಸಭೆ ಬಳಿಕವೂ ತಮಿಳುನಾಡಿಗೆ ಹರಿದ ಜೀವನದಿ

Share :

25-08-2023

    ತಮಿಳುನಾಡು ವಿರುದ್ಧ ವಾಟಾಳ್ ನಾಗರಾಜ್ ಆಕ್ರೋಶ

    ತಕ್ಷಣ ನೀರು ನಿಲ್ಲಿಸುವಂತೆ ಶಾಸಕರಿಗೆ ರೈತರ ತಾಕೀತು

    ಲೋಟದಲ್ಲಿ ನೀರು ಹಂಚಿ ಮಂಡ್ಯ ಮಂದಿಯ ಆಕ್ರೋಶ

ನೆರೆಯ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಅನ್ನೋ ರೀತಿ ಆಗುತ್ತಿದೆ ರಾಜ್ಯದ ಆಣೆಕಟ್ಟುಗಳ ಸ್ಥಿತಿ. ಉಂಡುಹೋದ ಕೊಂಡು ಹೋದ ಅನ್ನೋ ಹಂಗೆ ತಮಿಳುನಾಡು ನೀರು ಪಡೆದು, ಇನ್ನು ಬೇಕು, ಇನ್ನು ಬೇಕು ಅಂತ ಸುಪ್ರೀಂಕೋರ್ಟ್​​ ಕದ ತಟ್ಟಿದೆ. ಹೀಗಾಗಿ ಇಂದು ಸುಪ್ರೀಂಕೋರ್ಟ್‌ನ ಹೊಸ ತ್ರಿಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆಗೆ ಬರುತ್ತಿದೆ. ಇತ್ತ, ರಾಜ್ಯವೂ ಕೂಡ ತನ್ನ ವಾದ ಮಂಡಿಸಲು ಸನ್ನದ್ಧವಾಗಿದೆ.

ಕಾವೇರಿ ಜಲಾನಯನದಲ್ಲಿರುವ ನೀರು ನಮಗೆ ಸಾಕಾಗಲ್ಲ!

ಮುಂಗಾರಿನ ಕಣ್ಣಾಮುಚ್ಚಾಲೆ ಆಟ, ರಾಜ್ಯವನ್ನ ಸಂಕಷ್ಟದ ಸ್ಥಿತಿಗೆ ತಂದು ನಿಲ್ಲಿಸಿದೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ನೆರೆ ಮನೆಯ ದಾಹ ನೀಗಿಸಬೇಕಾದ ನತದೃಷ್ಟ ಸ್ಥಿತಿಗೆ ಕರ್ನಾಟಕ ತಲುಪಿದೆ. ಜಲ ದಾನದ ಬಳಿಕವೂ ತಮಿಳುನಾಡಿನ ದಾಹ, ಕ್ಯಾತೆಯ ಹಂತಕ್ಕೆ ತಲುಪಿದೆ. ತಮಿಳುನಾಡಿನಲ್ಲಿನ ಮತ ರಾಜಕೀಯಕ್ಕಾಗಿ ಸುಪ್ರೀಂಕೋರ್ಟ್​​​ ಹೆಬ್ಬಾಗಿಲಲ್ಲಿ ಸ್ಟಾಲಿನ್​​ ಸರ್ಕಾರ ವಕಾಲತ್ತಿಗೆ ನಿಂತಿದೆ. ಹೀಗಾಗಿ ಇಂದು ಸುಪ್ರೀಂಕೋರ್ಟ್​ನಲ್ಲಿ ಕಾವೇರಿ ಕದನಕ್ಕೆ ಮತ್ತೊಮ್ಮೆ ಚಾಲನೆ ಸಿಗಲಿದೆ.

ಹೊಸ ತ್ರಿಸದಸ್ಯ ಪೀಠದಲ್ಲಿ ನಡೆಯಲಿದೆ ಕಾವೇರಿ ವಿಚಾರಣೆ

ಕಾವೇರಿ ಅರ್ಜಿ ವಿಚಾರಣೆ ಇಂದಿನಿಂದ ಆರಂಭ ಆಗಲಿದೆ. ಕೋರ್ಟ್​ನಿಂದ ಜಸ್ಟೀಸ್ ಬಿ.ಆರ್.ಗವಾಯಿ ನೇತೃತ್ವದಲ್ಲಿ ಜಸ್ಟೀಸ್ ಪಿ.ಎಸ್‌. ನರಸಿಂಹ, ಜಸ್ಟೀಸ್ ಪಿ.ಕೆ.ಮಿಶ್ರಾ ಅವರ ತ್ರಿಸದಸ್ಯ ಪೀಠ ರಚನೆ ಆಗಿದೆ. ಈ ಮಧ್ಯೆ ನ್ಯಾಯ ಪಂಚಾಯ್ತಿ ಮುಂದೆ ಕರ್ನಾಟಕ ತನ್ನ ಅಫಿಡವಿಟ್ ಸಲ್ಲಿಸಿದೆ. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ಈಗಾಗಲೇ ತಮಿಳುನಾಡಿಗೆ ನೀರು ಬಿಟ್ಟಿದೆ. ಈ ಬಾರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆ ನಡೆವೆ ನೀರು ಹರಿಸಿ ಪ್ರಾಧಿಕಾರದ ಆದೇಶ ಪಾಲನೆ ಆಗಿದೆ. ಆದ್ರೂ ತಮಿಳುನಾಡು ಇನ್ನೂ ಬೇಕು ಎಂಬ ವಾದವೇ ಕಾವೇರಿ ನೀರಿನ ದುರ್ಬಳಕೆ ಅಂತ ಅರ್ಜಿಯಲ್ಲಿ ಉಲ್ಲೇಖಿಸಿದೆ.

ಲೋಟದಲ್ಲಿ ನೀರು ಹಂಚಿ ಪ್ರತಿಭಟಿಸಿದ ಮಂಡ್ಯ ಹುಡುಗ್ರು!

ಇತ್ತ, ಮಂಡ್ಯದಲ್ಲಿ ಮಾತ್ರ ಜಲ ಜ್ವಾಲೆ ಹಬ್ಬಿದೆ. ತಮಿಳುನಾಡಿಗೆ ನೀರು ಹರಿಸ್ತಿರೋದಕ್ಕೆ ಮಂಡ್ಯ ಯೂತ್ ಗ್ರೂಪ್‌, ಬಿಂದಿಗೆಯಲ್ಲಿ ನೀರು ಹೊತ್ತುಕೊಂಡು ವಿನೂತನವಾಗಿ ಪ್ರತಿಭಟನೆ ನಡೆಸಿದೆ. ವೈದ್ಯ ಡಾ.ಅನೀಲ್ ಆನಂದ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಮಂಡ್ಯದ ಪ್ರಮುಖ ಬೀದಿಗಳಲ್ಲಿ ಜನರಿಗೆ ಒಂದು ಲೋಟ ನೀರು ಕೊಡುವ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಇನ್ನೊಂದ್ಕಡೆ, ಮದ್ದೂರು ತಾಲೂಕಿನ ಸಾದೋಳಲು ಗ್ರಾಮದಲ್ಲಿ ನಡೆದ ಸಭೆಯಲ್ಲಿ ಶಾಸಕರಿಗೆ ರೈತರು ತಾಕೀತು ಮಾಡಿದ್ದಾರೆ.

ತಕ್ಷಣ ನೀರು ನಿಲ್ಲಿಸಬೇಕು. ಮದ್ದೂರು ವ್ಯಾಪ್ತಿಗೆ ನೀರು ಬಂದಿಲ್ಲ. ಭತ್ತ ಒಣಗ್ತಿದೆ ಅಂತ ನೋವು ತೋಡ್ಕೊಂಡಿದ್ದಾರೆ. ಇತ್ತ, ರಾಜಧಾನಿ ಬೆಂಗಳೂರಿನಲ್ಲೂ ತಮಿಳುನಾಡಿನ ವಿರುದ್ಧದ ಹೋರಾಟಕ್ಕೆ ವಾಟಾಳ್ ನಾಗರಾಜ್ ಎಂಟ್ರಿ ಆಗಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ಸ್ಟಾಲಿನ್ ಪ್ರತಿಕೃತಿ ದಹಿಸಿ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೆ, ನಿನ್ನೆಯ ಕಾವೇರಿ ಸಭೆಗೆ ರೈತರನ್ನ, ಹೋರಾಟಗಾರರನ್ನ ಕರೆದಿಲ್ಲ ಅಂತ ಕಿಡಿಕಾರಿದ್ರು. ಇದೇ ವೇಳೆ, ವಾಟಾಳ್​ರನ್ನ ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು.

ಮತ್ತಷ್ಟು ಕುಸಿದ ಕೆಆರ್​ಎಸ್ ಜಲಾಶಯ ನೀರಿನ ಮಟ್ಟ!

ಸರ್ವಪಕ್ಷ ಸಭೆ ಆಗಿದ್ದು ಸಭೆಯಲ್ಲಿ ನೀರು ಸ್ಥಗಿತಕ್ಕೆ ವಿಪಕ್ಷಗಳು ಆಗ್ರಹಿಸಿದ್ವು. ಆದ್ರೂ ಸರ್ಕಾರ ಮಾತ್ರ ತಮಿಳುನಾಡಿಗೆ ನೀರು ಹರಿಸ್ತಿದೆ. 10 ಸಾವಿರಕ್ಕು ಅಧಿಕ ಕ್ಯೂಸೆಕ್ ನೀರು ಹರಿಯುತ್ತಿದ್ದು, ಇದರಿಂದ ಕೆಆರ್​ಎಸ್ ಡ್ಯಾಂನ ನೀರಿನ ಮಟ್ಟ ಮತ್ತಷ್ಟು ಕುಸಿದಿದೆ. ನಿನ್ನೆ 103 ಅಡಿಗೆ ಕೆಆರ್​​​ಎಸ್​​​​ ಡ್ಯಾಂನ ನೀರಿನ ಮಟ್ಟ ಕುಸಿತ ಕಂಡಿದೆ. 124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ ಸದ್ಯ ಉಳಿದಿದ್ದು ಕೇವಲ 103.20 ಅಡಿ ನೀರು ಮಾತ್ರ. 49.542 ಟಿಎಂಸಿ ಗರಿಷ್ಠ ಮಟ್ಟ ಹೊಂದಿರುವ ಡ್ಯಾಂನಲ್ಲಿ ಸತತ ನೀರು ಬಿಟ್ಟಿದ್ದರಿಂದ 25.423 ಟಿಎಂಸಿ ನೀರು ಉಳಿದಿದೆ.

25.423 ಟಿಎಂಸಿಯಲ್ಲಿ 17 ಟಿಎಂಸಿ ಮಾತ್ರ ಬಳಕೆಗೆ ಯೋಗ್ಯ ಆಗಿದೆ. ಇದೇ ರೀತಿ ಮುಂದುವರೆದ್ರೆ ಇನ್ನೆರಡು ವಾರದಲ್ಲಿ ನೀರು ಖಾಲಿ ಆಗುವ ಭೀತಿ ಕಾಡ್ತಿದೆ. ನಿನ್ನೆಯು ತಮಿಳುನಾಡಿಗೆ 10,720 ಕ್ಯೂಸೆಕ್ ನೀರು ಹರಿಸಲಾಗಿದೆ. ರಾಜ್ಯ ಸರ್ಕಾರದ ನಡೆಯಿಂದ ಮಂಡ್ಯ ರೈತರಿಗೆ ಆತಂಕ ಮತ್ತಷ್ಟು ಹೆಚ್ಚಾಗ್ತಿದೆ. ಬೆಳೆಗೆ ನೀರು ಸಿಗದ ಕಾರಣ ಬೆಳೆಯೆಲ್ಲ ಒಣಗ್ತಿರುವ ಚಿಂತೆ ಕಾಡ್ತಿದೆ. ಇತ್ತ, ಮುಂದಿನ ದಿನಗಳಲ್ಲಿ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಜನರ ಕುಡಿಯುವ ನೀರಿಗು ಸಮಸ್ಯೆ ಉಲ್ಬಣಿಸುವ ಸಾಧ್ಯತೆ ದಟ್ಟವಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ಸುಪ್ರೀಂ ಕಟಕಟೆಯಲ್ಲಿ ಕಾವೇರಿ ಕಾನೂನು ಕದನ; ಸರ್ವ ಪಕ್ಷ ಸಭೆ ಬಳಿಕವೂ ತಮಿಳುನಾಡಿಗೆ ಹರಿದ ಜೀವನದಿ

https://newsfirstlive.com/wp-content/uploads/2023/08/krs-3.jpg

Load More