newsfirstkannada.com

ಕಾವೇರಿ ಒಡಲು ಬಗೆದು ಲೂಟಿಗೆ ಸ್ಕೆಚ್​.. ನ್ಯೂಸ್​ ಫಸ್ಟ್​ ವರದಿ ಬೆನ್ನಲ್ಲೇ ಅಧಿಕಾರಿಗಳು ಅಲರ್ಟ್​, ಭೂಗಳ್ಳ ಶಾಕ್..!

Share :

Published June 27, 2024 at 8:54am

  ಕೃಷ್ಣರಾಜ ಅಣೆಕಟ್ಟು ಪ್ರದೇಶವನ್ನೆ ಆಕ್ರಮಿಸಿಕೊಳ್ಳಲು ಸಂಚು

  ಕೇರಳ ಮೂಲದ ಖತರ್ನಾಕ್ ಭೂಗಳ್ಳರ ಕನಸ್ಸು ನುಚ್ಚು ನೂರು

  ಕಾವೇರಿ ಒಡಲನ್ನೇ ಬಗೆದು ಲೂಟಿಗೆ ಮುಂದಾಗಿದ್ದ ಖತರ್ನಾಕ್

ಕೋಟ್ಯಾಂತರ ಕನ್ನಡಿಗರ ದಾಹವನ್ನ ನೀಗಿಸುತ್ತಿರುವ ಕಾವೇರಿ ತಾಯಿ ಒಡಲಿಗೆ ಈ ಹಿಂದೆ ಅಕ್ರಮ ಗಣಿಗಾರಿಕೆ ಕಂಟಕವಾಗಿತ್ತು. ಆದ್ರೆ ಇಲ್ಲಿ ಭೂಗಳ್ಳರು ಕಾವೇರಿ ಒಡಲನ್ನೆ ಒತ್ತುವರಿ ಮಾಡಿಕೊಂಡು ಲೂಟಿಗೆ ಮುಂದಾಗಿದ್ರು. ಈ ಬಗ್ಗೆ ಗೊತ್ತಾಗಿ ನ್ಯೂಸ್​ ಫಸ್ಟ್​ ಯಾವಾಗ ಅಖಾಡಕ್ಕೆ ಎಂಟ್ರಿ ಕೊಟ್ಟಿತೋ ಖತರ್ನಾಕ್ ಭೂಗಳ್ಳರ ಕನಸ್ಸು ನುಚ್ಚು ನೂರಾಗಿದೆ.

ಇದನ್ನೂ ಓದಿ: ಜಸ್ಟ್​ ಗುರಾಯಿಸಿದ್ಕೆ.. ಬಿಯರ್ ಬಾಟಲ್​ಗಳಿಂದ ತಲೆಗೆ ಹೊಡೆದು ವ್ಯಕ್ತಿಯ ಭೀಕರ ಕೊಲೆ

ಕೆಆರ್​ಎಸ್​ ಕೃಷ್ಣರಾಜ ಸಾಗರ ಅಣೆಕಟ್ಟು ಹಳೆ ಮೈಸೂರು ಭಾಗದ ಜೀವನಾಡಿ. ಮಂಡ್ಯ ಜಿಲ್ಲೆಯ ರೈತರ ಆಶಾಕಿರಣ. ತಾಯಿ ಕಾವೇರಿ ಬೆಂಗಳೂರು, ಮೈಸೂರು ಸೇರಿ ಹಲವು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಿ ಕೋಟಿ ಕೋಟಿ ಕನ್ನಡಿಗರ ದಾಹ ನೀಗಿಸುತ್ತಿದ್ದಾಳೆ. ಆದ್ರೆ ಕೇರಳ ಮೂಲದ ನಖೇಶ್ ಜಾನ್ ಮ್ಯಾಥ್ಯೂ ಎಂಬ ವ್ಯಕ್ತಿ ಕಾವೇರಿ ಒಡಲನ್ನೇ ಬಗೆದು ಲೂಟಿಗೆ ಮುಂದಾಗಿದ್ದ.

ಇದನ್ನೂ ಓದಿ: Kalki 2898 AD: ತೆರೆ ಮೇಲೆ ಗ್ರ್ಯಾಂಡ್ ಆಗಿ ಅಪ್ಪಳಿಸಿದ ಕಲ್ಕಿ.. ಸ್ಟಾರ್ ದಿಗ್ಗಜರ ಕಂಡು ಸಿನಿ ರಸಿಕರು ಫುಲ್ ಖುಷ್..!

ನ್ಯೂಸ್​ ಫಸ್ಟ್​ ವರದಿ ಬೆನ್ನಲ್ಲೇ ಅಧಿಕಾರಿಗಳು ಅಲರ್ಟ್​, ಭೂಗಳ್ಳ ಕಕ್ಕಾಬಿಕ್ಕಿ

ಕೇರಳ ಮೂಲದ ನಖೇಶ್ ಜಾನ್ ಮ್ಯಾಥ್ಯೂ ತನಗೆ ಸೇರಿದ 2-3 ಎಕರೆ ತೋಟದ ಜೊತೆಗೆ ಕಾವೇರಿ ಒಡಲ ಮೇಲೆ ಕಣ್ಣಾಕಿದ್ದ. ಡ್ಯಾಂನ ಪ್ರದೇಶವನ್ನೆ ಆಕ್ರಮಿಸಿಕೊಳ್ಳಲು ಸಂಚು ರೂಪಿಸಿದ್ದ. ಅಷ್ಟೇ ಅಲ್ಲ ಡ್ಯಾಂಗೆ ಸೇರಿದ್ದ ಜಾಗವನ್ನೆ ತೋಟವಾಗಿ ಮಾಡಿಕೊಳ್ಳಲು ಜೆಸಿಬಿ ಮೂಲಕ ಒತ್ತುವರಿ ಕಾರ್ಯದಲ್ಲಿ ತೊಡಗಿದ್ದ. ನಾಲ್ಕೈದು ಎಕರೆ ಜಾಗವನ್ನ ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಿಕೊಳ್ಳಲು ಜೆಸಿಬಿ ಮೂಲಕ ಗುಂಡಿ ಕೂಡ ತೆಗೆಸಿದ್ದ. ವಿಷಯ ತಿಳಿದ ನ್ಯೂಸ್ ಫಸ್ಟ್ ಸ್ಥಳಕ್ಕೆ ತೆರಳಿ ಕಾವೇರಿ ಒಡಲ ಲೂಟಿ ಬಗ್ಗೆ ವಿಸ್ತೃತ ವರದಿ ಮಾಡಿತ್ತು. ಕಣ್ಮುಚ್ಚಿ ಕುಳಿತ ಅಧಿಕಾರಿಗಳನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿತ್ತು. ಡ್ಯಾಂ ಪ್ರದೇಶ ಒತ್ತುವರಿಯಾದ್ರೆ ನೀರು ಸಂಗ್ರಹ ಸಾಮರ್ಥ್ಯ ಕುಗ್ಗುತ್ತೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಮತ್ತಷ್ಟು ಹಾಹಾಕಾರ ಸೃಷ್ಟಿಯಾಗುತ್ತೆ ಎಂಬುದನ್ನ ಕಣ್ಣಿಗೆ ಕಟ್ಟುವಂತೆ ವರದಿ ಮೂಲಕ ತಿಳಿಸಿತ್ತು. ಜೊತೆಗೆ ತಕ್ಷಣವೆ ಒತ್ತುವರಿ ತಪ್ಪಿಸದಿದ್ದರೇ ಮತ್ತಷ್ಟು ಜನರು ಕಾವೇರಿ ಒಡಲನ್ನ ಲೂಟಿ ಮಾಡಿಕೊಳ್ಳಲು ದಾರಿ ದೀಪವಾಗುತ್ತೆ ಎಂಬ ಎಚ್ಚರಿಕೆ ನೀಡಿತ್ತು. ನ್ಯೂಸ್​ ಫಸ್ಟ್​ನ ಈ ವರದಿಗೆ ಸದ್ಯ ಫಲಶೃತಿ ಸಿಕ್ಕಿದೆ.

ನ್ಯೂಸ್ ಫಸ್ಟ್ ವರದಿ.. ಭೂ ಒತ್ತುವರಿಗೆ ತೆಗೆದಿದ್ದ ಗುಂಡಿಯನ್ನ ತಾನೇ ಮುಚ್ಚಿದ

ಯಾವಾಗ ನ್ಯೂಸ್ ಫಸ್ಟ್ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಅಕ್ರಮವಾಗಿ ಡ್ಯಾಂನ ಭೂಮಿ ಒತ್ತುವರಿ ವಿಚಾರ ತಿಳಿಸಿತೋ ತಕ್ಷಣವೇ ಅಧಿಕಾರಿಗಳು ಎಚ್ಚೆತ್ತಿದ್ದಾರೆ. ಪ್ರಭಾವಿ ಭೂಗಳ್ಳ ಮ್ಯಾಥ್ಯೂಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ. ಸ್ಥಳಕ್ಕೆ ತೆರಳಿ ಡ್ಯಾಂನ ಹಿನ್ನೀರಿನಲ್ಲಿ ಬಗೆದಿರುವ ಗುಂಡಿಯನ್ನ ಮುಚ್ಚುವಂತೆ ತಾಕೀತು ಮಾಡಿದ್ದಾರೆ. ಅಧಿಕಾರಿಗಳ ಎಚ್ಚರಿಕೆ ಹಾಗೂ ನ್ಯೂಸ್ ಫಸ್ಟ್ ವರದಿಗೆ ಬೆಚ್ಚಿದ ತೋಟದ ಮಾಲೀಕ ಭೂ ಒತ್ತುವರಿಗಾಗಿ ತೆಗೆದಿದ್ದ ಗುಂಡಿಯನ್ನ ತಾನೇ ಸ್ವತಃ ಜೆಸಿಬಿ ಮೂಲಕ ಮುಚ್ಚಿಸಿದ್ದಾನೆ.

ಇದನ್ನೂ ಓದಿ: LK Advani : ಬಿಜೆಪಿ ಹಿರಿಯ ನಾಯಕ, ಭಾರತ ರತ್ನ ಪುರಸ್ಕೃತ ಅಡ್ವಾಣಿ ತಡರಾತ್ರಿ ಆಸ್ಪತ್ರೆಗೆ ದಾಖಲು

ಭೂಗಳ್ಳನ ಆಟಾಟೋಪಕ್ಕೆ ನ್ಯೂಸ್ ಫಸ್ಟ್ ಬ್ರೇಕ್ ಹಾಕಿದೆ. ಕಣ್ಣು ಮುಚ್ಚಿ ಕುಳಿತಿದ್ದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳನ್ನೂ ಎಚ್ಚರಿಸುವ ಕೆಲಸ ಮಾಡಿದೆ. ಆ ಮೂಲಕ ಕನ್ನಡ ನಾಡಿನ ಜೀವನದಿಯ ಭೂಮಿ ಲೂಟಿಕೋರರ ಪಾಲಾಗದಂತೆ ತಡೆದಿದೆ. ಈ ಮೂಲಕ ನಿರ್ಭೀತಿಯಿಂದ ನಿಮ್ಮ ಪರವಾಗಿ ಎಂಬ ಧ್ಯೇಯವನ್ನ ಪಾಲಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾವೇರಿ ಒಡಲು ಬಗೆದು ಲೂಟಿಗೆ ಸ್ಕೆಚ್​.. ನ್ಯೂಸ್​ ಫಸ್ಟ್​ ವರದಿ ಬೆನ್ನಲ್ಲೇ ಅಧಿಕಾರಿಗಳು ಅಲರ್ಟ್​, ಭೂಗಳ್ಳ ಶಾಕ್..!

https://newsfirstlive.com/wp-content/uploads/2024/06/CAUVERI_OTTUVARI_2.jpg

Load More