newsfirstkannada.com

ಕಾವೇರಿ ನೀರಿಗಾಗಿ ದೆಹಲಿಯಲ್ಲಿ ಡಿ.ಕೆ ಶಿವಕುಮಾರ್ ತಂತ್ರಗಾರಿಕೆ; ಅಹೋರಾತ್ರಿ ಧರಣಿ ಕೂತ ಶಾಸಕ ದರ್ಶನ್ ಪುಟ್ಟಣ್ಣಯ್ಯ..!

Share :

31-08-2023

    KRS ನೀರಿನ ಮಟ್ಟ ಕುಸಿತ.. ಡ್ಯಾಂ ಬರಿದಾಗುವ ಆತಂಕ

    ಸರ್ಕಾರಕ್ಕೆ ಎರಡು ದಿನಗಳ ಡೆಡ್​ಲೈನ್ ಕೊಟ್ಟ ಜೆಡಿಎಸ್

    ಈಗಾಗಲೇ ನಾಟಿ ಮಾಡಿರುವ ಬೆಳೆಗೆ ನೀರು ಬೇಕಾಗುತ್ತದೆ

ತುಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿರೋದ್ರಿಂದ ಕೆಆರ್​ಎಸ್​ ಡ್ಯಾಮ್​ನ ನೀರಿನ ಮಟ್ಟ ದಿನೇ ದಿನೇ ಕಡಿಮೆಯಾಗುತ್ತಿದೆ. ಈಗಾಗಲೇ ನೀರಿನಮಟ್ಟ 100 ಅಡಿಗೆ ಕಡಿಮೆಯಾಗಿದೆ. ಕಾವೇರಿ ನಿರ್ವಹಣಾ ಪ್ರಾಧಿಕಾರ ಆದೇಶದ ಪ್ರಕಾರ 15 ದಿನ ತಮಿಳುನಾಡಿಗೆ ನೀರನ್ನ ಕೊಟ್ರೆ ಡ್ಯಾಮ್​ನ ನೀರಿನ ಮಟ್ಟ 90 ಅಡಿಗೆ ಕುಸಿಯುತ್ತದೆ. ಹೀಗೆ ಮುಂದಿವರಿದ್ರೆ ಸಂಪೂರ್ಣವಾಗಿ ಕೆ.ಆರ್.ಎಸ್ ಡ್ಯಾಂ ಬರಿದಾಗುವ ಆತಂಕ ಮೂಡಿದೆ. ಸದ್ಯ ಕೆಆರ್​ಎಸ್ ಡ್ಯಾಂನಲ್ಲಿ ಉಳಿಯೋದು ಕೇವಲ 11 ಟಿಎಂಸಿ ನೀರು. ಈ 11 ಟಿಎಂಸಿ ನೀರನ್ನ ಉಳಿಸಿಕೊಂಡರೇ ಮಾತ್ರ ಕುಡಿಯುವ ನೀರು ಪೂರೈಕೆಯಾಗುತ್ತೆ. ಇಲ್ಲವೆಂದರೆ ಅದರಲ್ಲೂ ಮತ್ತೆ ನೀರು ಬಿಡಲು ಆದೇಶಿಸಿದ್ರೆ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಉದ್ಭವವಾಗುವ ಸಾಧ್ಯತೆ ಇದೆ.

DCM ಡಿ.ಕೆ ಶಿವಕುಮಾರ್

ಕಾವೇರಿ ಪ್ರಾಧಿಕಾರದ ಆದೇಶ ಪಾಲನೆ ಕಷ್ಟ

ಇನ್ನೂ ಕಾವೇರಿ ಬಗ್ಗೆ ನಾಳೆ ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಜಲಸಂಪನ್ಮೂಲ ಸಚಿವರೂ ಆಗಿರೋ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು​ ದೆಹಲಿಗೆ ತೆರಳಿ ಇಂದು ಕಾನೂನು ತಂಡದ ಜೊತೆ ಸಭೆ ನಡೆಸಲಿದ್ದಾರೆ. ಈಗಾಗ್ಲೇ ದಿನಕ್ಕೆ 5 ಸಾವಿರದ ಕ್ಯೂಸೆಕ್ ನೀರನ್ನ ತಮಿಳುನಾಡಿಗೆ ಬಿಡುಗಡೆಗೆ ಮಾಡಬೇಕು ಎಂದು ಪ್ರಾಧಿಕಾರ ಆದೇಶ ಮಾಡಿದೆ. ಆದ್ರೆ, ಕಾವೇರಿ ಪ್ರಾಧಿಕಾರದ ಆದೇಶ ಪಾಲನೆ ಕಷ್ಟವೆಂದು ರಾಜ್ಯ ಸರ್ಕಾರ ಹೇಳಿದೆ. ಇನ್ನು ಆದೇಶ ಪಾಲನೆ ಮಾಡದಿದ್ರೆ ಕೋರ್ಟ್​ನಲ್ಲಿ ಸಂಕಷ್ಟ ಎದುರಾಗಬಹುದು. ಹೀಗಾಗಿ ರಾಜ್ಯದ ಜಲಾಶಯಗಳ ಪ್ರಸಕ್ತ ಸ್ಥಿತಿ ಹಾಗೂ ಮಳೆ ಕೊರತೆ ಬಗ್ಗೆ ಕೋರ್ಟ್​ಗೆ ಮನವರಿಕೆ ಮಾಡುವ ಕುರಿತು ಡಿ.ಕೆ ಶಿವಕುಮಾರ್ ರಾಜ್ಯದ ವಕೀಲರೊಂದಿಗೆ ಚರ್ಚೆ ಮಾಡಲಿದ್ದಾರೆ.

ಮೌನ ಮುರಿದ ಮಂಡ್ಯ ಜೆಡಿಎಸ್ ನಾಯಕರು

ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸರ್ಕಾರದ ವಿರುದ್ಧ ಕೊನೆಗೂ ಮಂಡ್ಯ ಜೆಡಿಎಸ್ ನಾಯಕರು ಮೌನ ಮುರಿದಿದ್ದಾರೆ. ಇಷ್ಟುದಿನ ಸೈಲೆಂಟ್ ಆಗಿದ್ದ ಜೆಡಿಎಸ್ ನಾಯಕರು ಇದೀಗ ರೊಚ್ಚಿಗೆದ್ದಿದ್ದು, ಸರ್ಕಾರಕ್ಕೆ ಇಂದು ಮತ್ತು ನಾಳೆ ಡೆಡ್​ಲೈನ್ ನೀಡಿದ್ದಾರೆ. ಈ 2 ದಿನದದಲ್ಲಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡ್ತಿರೋದನ್ನು ನಿಲ್ಲಿಸದಿದ್ರೆ ಸೆ.02 ರಂದು ಶನಿವಾರ ಬೀದಿಗಿಳಿದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಶಾಸಕ ದರ್ಶನ್ ಪುಟ್ಟಣ್ಣಯ್ಯ

ಕಾವೇರಿ ನೀರು ಬಿಡುಗಡೆಗೆ ಖಂಡಿಸಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ನಿನ್ನೆಯಿಂದ ಕೆ.ಆರ್‌.ಎಸ್‌. ಅಣೆಕಟ್ಟೆ ಬಳಿ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಮುಂಜಾನೆಯು ಹೋರಾಟ ಮುಂದುವರೆಸಿರೋ ಹೋರಾಟಗಾರರು ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ನೀರು ಹರಿಸಿದರೆ 15 ದಿನದಲ್ಲೇ ಡ್ಯಾಂ ಖಾಲಿ

ಇನ್ನೂ ವೇಳೆ ಮಾತನಾಡಿದ ಶಾಸಕ ದರ್ಶನ್​ ಪುಟ್ಟಣಯ್ಯ, ಹೀಗೆ ನೀರು ಹರಿಸಿದರೆ 15 ದಿನದಲ್ಲೇ ಡ್ಯಾಂ ಖಾಲಿಯಾಗಲಿದೆ. ಪ್ರತಿಯೊಬ್ಬರು ಕೂಡ ಹೋರಾಟದಲ್ಲಿ ಭಾಗಿಯಾಗಿ ಕುಡಿಯುವ ನೀರಿನ ಉದ್ದೇಶಕ್ಕೆ ನೀರು ಉಳಿಸಿಕೊಳ್ಳಬೇಕಿದೆ. 2 ಕೋಟಿ ಜನ ಕೆಆರ್​ಎಸ್​ ಅನ್ನು ನಂಬಿಕೊಂಡಿದ್ದಾರೆ. ಅಲ್ಲದೇ ಈಗಾಗಲೇ ನಾಟಿ ಮಾಡಿರುವ ಬೆಳೆಗೆ ನೀರು ಬೇಕಾಗುತ್ತದೆ. ಬೆಂಗಳೂರಿಗರು ಈ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಬೇಕು. ನಮ್ಮ ಭಾಗದ ನಾಯಕರನ್ನ ಪಕ್ಷಾತೀತವಾಗಿ ಹೋರಾಟಕ್ಕೆ ಆಹ್ವಾನಿಸುತ್ತೇವೆ. ಎಲ್ಲರೂ ಒಟ್ಟಾಗಿ ಇದಕ್ಕೆ ಕೈ ಜೋಡಿಸಬೇಕು ಎಂದು ಹೇಳಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾವೇರಿ ನೀರಿಗಾಗಿ ದೆಹಲಿಯಲ್ಲಿ ಡಿ.ಕೆ ಶಿವಕುಮಾರ್ ತಂತ್ರಗಾರಿಕೆ; ಅಹೋರಾತ್ರಿ ಧರಣಿ ಕೂತ ಶಾಸಕ ದರ್ಶನ್ ಪುಟ್ಟಣ್ಣಯ್ಯ..!

https://newsfirstlive.com/wp-content/uploads/2023/08/DARSHAN_PUTTANAIAH.jpg

Load More