ನಮ್ಮ ಜಲ, ನಮ್ಮ ಹಕ್ಕಿಗಾಗಿ ರಾಜ್ಯದ ಅರ್ಜಿ!
ಮಂಡ್ಯದ ರೈತರಿಗೆ ಹೆಚ್ಚಿದ ಮತ್ತಷ್ಟು ಆತಂಕ
ಕಾವೇರಿ ಕೊಳ್ಳದ ಸದ್ಯದ ಪರಿಸ್ಥಿತಿ ಹೇಗಿದೆ..?
ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ನೆರೆ ಮನೆಯ ದಾಹ ನೀಗಿಸಬೇಕಾದ ಸ್ಥಿತಿಗೆ ಕರ್ನಾಟಕ ತಲುಪಿದೆ. ಮುಂಗಾರು ಕೈಕೊಟ್ಟು ಜಲಾಶಯಗಳು ಭರ್ತಿಯಾಗಿಲ್ಲ. ಹೀಗಿರುವಾಗ ಕಾವೇರಿ ನೀರು ಹರಿಸಿ ಅಂತಾ ತಮಿಳುನಾಡು ಖ್ಯಾತೆ ತೆಗೆದಿದೆ. ಸುಪ್ರೀಂಕೋರ್ಟ್ ಕದ ತಟ್ಟಿದೆ. ಇವತ್ತು ಕಾವೇರಿ ಕದನ ಬಗ್ಗೆ ವಿಚಾರಣೆ ನಡೆಯಲಿದ್ದು, ತನ್ನ ವಾದ ಮಂಡಿಸೋಕೆ ರಾಜ್ಯ ಸಜ್ಜಾಗಿದೆ.
ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲ ಅಂತಾ ಗೊತ್ತಿದ್ರೂ ತಮಿಳುನಾಡು ಮಾತ್ರ ನೀರಿಗಾಗಿ ಖ್ಯಾತೆ ತೆಗೆಯುತ್ತಲೇ ಇದೆ. ಕಾವೇರಿ ನೀರು ಹರಿಸುವಂತೆ ತಮಿಳುನಾಡು ಸುಪ್ರೀಂ ಕೋರ್ಟ್ ಕದ ತಟ್ಟಿದೆ. ಮತ ರಾಜಕೀಯಕ್ಕಾಗಿ ಸುಪ್ರೀಂಕೋರ್ಟ್ ಹೆಬ್ಬಾಗಿಲಲ್ಲಿ ಸ್ಟಾಲಿನ್ ಸರ್ಕಾರ ವಕಾಲತ್ತಿಗೆ ನಿಂತಿದೆ. ಇಂದು ಸುಪ್ರೀಂಕೋರ್ಟ್‌ನ ಹೊಸ ತ್ರಿಸದಸ್ಯ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಯಲಿದೆ.
ಹೊಸ ತ್ರಿಸದಸ್ಯ ಪೀಠದಲ್ಲಿ ನಡೆಯಲಿದೆ ಕಾವೇರಿ ವಿಚಾರಣೆ
ಕಾವೇರಿ ಅರ್ಜಿ ವಿಚಾರಣೆ ಇಂದಿನಿಂದ ಆರಂಭ ಆಗಲಿದೆ. ಸುಪ್ರೀಂಕೋರ್ಟ್ನಿಂದ ಜಸ್ಟೀಸ್ ಬಿ.ಆರ್.ಗವಾಯಿ ನೇತೃತ್ವದಲ್ಲಿ ಜಸ್ಟೀಸ್ ಪಿ.ಎಸ್. ನರಸಿಂಹ, ಜಸ್ಟೀಸ್ ಪಿ.ಕೆ.ಮಿಶ್ರಾ ಅವರ ತ್ರಿಸದಸ್ಯ ಪೀಠ ರಚನೆ ಆಗಿದೆ. ಈ ಮಧ್ಯೆ ನ್ಯಾಯ ಪಂಚಾಯ್ತಿ ಮುಂದೆ ಕರ್ನಾಟಕ ತನ್ನ ಅಫಿಡವಿಟ್ ಸಲ್ಲಿಸಿದೆ. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ಈಗಾಗಲೇ ತಮಿಳುನಾಡಿಗೆ ನೀರು ಬಿಟ್ಟಿದೆ. ಈ ಬಾರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆ ನಡುವೆ ನೀರು ಹರಿಸಿ ಪ್ರಾಧಿಕಾರದ ಆದೇಶ ಪಾಲನೆ ಆಗಿದೆ. ಆದ್ರೂ ತಮಿಳುನಾಡು ಇನ್ನೂ ಬೇಕು ಎಂಬ ವಾದವೇ ಕಾವೇರಿ ನೀರಿನ ದುರ್ಬಳಕೆ ಅಂತ ಅರ್ಜಿಯಲ್ಲಿ ಉಲ್ಲೇಖಿಸಿದೆ. ಇನ್ನು ನ್ಯಾಯಾಲಯದಲ್ಲಿ ಕವೇರಿ ಕದನದ ಕುರಿತು ಕರ್ನಾಟಕ ಮಂಡಿಸಲಿರೋ ವಾದ ಏನು ಅಂತಾ ನೋಡೋದಾದ್ರೆ.
ಸದ್ಯದ ಪರಿಸ್ಥಿತಿ ಹೇಗಿದೆ..?
ರಾಜ್ಯದಲ್ಲಿರುವ ನೀರಿನ ಪ್ರಮಾಣ ಎಷ್ಟು.. ಸದ್ಯ ರಾಜ್ಯಕ್ಕೆ ಅಗತ್ಯವಾಗಿ ಬೇಕಾಗಿರುವ ನೀರೆಷ್ಟು ಅಂತಾ ಸುಪ್ರೀಂ ಕೋರ್ಟ್ಗೆ ಮನವರಿಕೆ ಮಾಡಲು ಕೂಡ ರಾಜ್ಯ ಸಜ್ಜಾಗಿದೆ.
ರಾಜ್ಯದ ವಾದ ಏನು?
ಒಟ್ಟಾರೆ ತಮಿಳುನಾಡಿಗೆ ನೀರು ಹರಿಸ್ತಿರೋದ್ರಿಂದ ಮಂಡ್ಯ ರೈತರಿಗೆ ಆತಂಕ ಮತ್ತಷ್ಟು ಹೆಚ್ಚಾಗ್ತಿದೆ.. ಬೆಳೆಗೆ ನೀರು ಸಿಗದ ಕಾರಣ ಬೆಳೆಯಲ್ಲ ಒಣಗ್ತಿರುವ ಚಿಂತೆ ಕಾಡ್ತಿದೆ. ಇತ್ತ, ಮುಂದಿನ ದಿನಗಳಲ್ಲಿ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಜನರ ಕುಡಿಯುವ ನೀರಿಗು ಸಮಸ್ಯೆ ಉಲ್ಬಣಿಸುವ ಸಾಧ್ಯತೆ ದಟ್ಟವಾಗ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ