newsfirstkannada.com

ಕಾವೇರಿದ ಕಾವೇರಿ ಕಿಚ್ಚು; ನಾಳೆ ಬಂದ್​​; ಕಾಂಗ್ರೆಸ್​ ಸರ್ಕಾರದ ವಿರುದ್ಧ ಬೀದಿಗಿಳಿದ ಸುಮಲತಾ ಅಂಬರೀಶ್​

Share :

Published August 20, 2023 at 6:30am

    ಜುಲೈ ತಿಂಗಳಲ್ಲಿ ಭರ್ತಿಯಾಗಿದ್ದ ಕಬಿನಿ ಈಗ ಖಾಲಿ ಖಾಲಿ!

    ಕಪಿಲಾ ಜಲಾಶಯದಲ್ಲಿ ಕಾಣುತ್ತಿಲ್ಲ ಜೀವಜಲದ ಕಲರವ!

    ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟನೆಗೆ ಬಿಜೆಪಿ ರೂಪುರೇಷೆ

ಮೈಸೂರು: ಕಾವೇರಿಗಾಗಿ ಪಂಚೆ ಕಟ್ಟಿ ಮೇಕೆದಾಟಿನಿಂದ ಪಾದಯಾತ್ರೆ ಮಾಡಿದ್ದ ಕಾಂಗ್ರೆಸ್​​ಗೆ ಈಗ ಅದು ಗತಿಸಿದ ಇತಿಹಾಸದಂತೆ ಕಾಣಿಸ್ತಿದೆ. ಗದ್ದುಗೆ ಹಿಡಿದ ಮೂರೇ ತಿಂಗಳಲ್ಲಿ ಕಾವೇರಿ ನೀರು ಹಿಡಿದಿಡಲು ಯಾವುದೇ ಕ್ರಮ ಕೈಗೊಳ್ಳದೇ ರೈತರ ಹಿತಾಸಕ್ತಿಗೆ ತಿಲಾಂಜಲಿ ನೀಡಿದೆ. ಸದ್ಯ ಕಬಿನಿ ಖಾಲಿ ಆಗ್ತಿದ್ದು, ಉಳಿದಿದ್ದು, ಜೀವನಾಡಿ ಕನ್ನಂಬಾಡಿ ಮಾತ್ರ ಬಾಕಿ. ಇತ್ತ, ಕಾವೇರಿ ಸೀಮೆಯಲ್ಲಿ ಪ್ರತಿಭಟನೆ ಕಿಚ್ಚು ಕೂಡ ಹೊತ್ತಿಕೊಳ್ತಿದೆ. ಇತ್ತ ಸರ್ಕಾರ ಕೈಕಟ್ಟಿ ಕುಳಿತಿದೆ.

ಜುಲೈ ಉತ್ತರಾರ್ಧದಲ್ಲಿ ಅರ್ಧ ತುಳುಕಿದ ಕಬಿನಿ, ಈಗ ಇಬ್ಬನಿಯ ರೀತಿ ಆವಿ ಆಗುತ್ತಿದೆ. ನೆರೆಯ ತಮಿಳುನಾಡಿಗೆ 7,200 ಕ್ಯೂಸೆಕ್​​​ ನೀರು ಹರಿದು ಹೂಗುತ್ತಿದೆ. ತುಂಬಿದ್ದ ಆಣೆಕಟ್ಟೆಯನ್ನ ಸರ್ಕಾರ ಖಾಲಿ ಮಾಡ್ತಿದೆ. ಜುಲೈ ತಿಂಗಳಿಂದ ಈವರಗೆ ನಿತ್ಯ ಸಾವಿರಾರು ಕ್ಯೂಸೆಕ್ಸ್ ನೀರು ಹರಿದು ಹೋಗಿದೆ. ಸದ್ಯ 77 ಅಡಿಗೆ ಡ್ಯಾಂನ ನೀರಿನ‌ಮಟ್ಟ ಕುಸಿದಿದೆ. ಕೇವಲ 15 ದಿನದ ಒಳಗೆ 7 ಅಡಿ ನೀರು ಖಾಲಿ ಆಗಿದೆ. ರೈತರ ಬೆಳೆಗಳಿಗೆ ನೀರು ಬಿಡುಗಡೆ ಅಸಾಧ್ಯ ಎಂದಿದೆ.

ತಮಿಳುನಾಡಿಗೆ ನೀರು, ರಾಜ್ಯದ ಅನ್ನದಾತನಿಗೆ ಕಣ್ಣೀರು!
ಟಿ.ನರಸೀಪುರದಲ್ಲಿ ರೈತರನ್ನ ವಶಕ್ಕೆ ಪಡೆದ ಪೊಲೀಸರು

ತಮಿಳುನಾಡಿಗೆ ನೀರು ಹರಿಸ್ತಿರೋದಕ್ಕೆ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗ್ತಿದೆ. ತಿ.ನರಸೀಪುರದಲ್ಲಿ ಹೆದ್ದಾರಿ ತಡೆದು ರೈತರು ಪ್ರತಿಭಟಿಸಿದ್ದಾರೆ. ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಪ್ರತಿಭಟನೆ ನಡೆಸ್ತಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಇತ್ತ, ಡಿಸಿಎಂ ಡಿ‌ಕೆಶಿ ಸ್ವಕ್ಷೇತ್ರ ಕನಕಪುರದಲ್ಲೂ ಪ್ರತಿಭಟನಾ ಕಿಡಿಹಾರಿದೆ. ರಸ್ತೆ ತಡೆದು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿದೆ. ಸಿಎಂ, ಡಿಸಿಎಂ ವಿರುದ್ಧ ಘೋಷಣೆ ಮೊಳಗಿದೆ.

ಕೇಸರಿಪಡೆಯಿಂದ ಆಗಸ್ಟ್ 21ರಂದು ಹೋರಾಟಕ್ಕೆ ಕಹಳೆ

ಇನ್ನು, ಮಂಡ್ಯದಲ್ಲೂ ಸೈಲೆಂಟ್​​ ಆಗಿ ಕಾವೇರಿ ಕಿಚ್ಚು ಹಬ್ತಿದೆ. ಮಂಡ್ಯದಲ್ಲಿ ಹಳೇ ಮೈಸೂರು ಭಾಗದ ಬಿಜೆಪಿ ನಾಯಕ ಸಭೆ ಆಗಿದೆ. ಸೋಮವಾರ ಅಂದ್ರೆ ಆಗಸ್ಟ್ 21ರಂದು ಪ್ರತಿಭಟನೆಗೆ ಬಿಜೆಪಿ ಕರೆ ನೀಡಿದೆ. ಮೈಸೂರು-ಬೆಂಗಳೂರು ಹೆದ್ದಾರಿ ಬಂದ್​ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಸೋಮವಾರ ಬೆಳಗ್ಗೆ ಇಂಡುವಾಳು ಬಳಿ ಮೈಸೂರು-ಬೆಂಗಳೂರು ಹೆದ್ದಾರಿ ಬಂದ್ ಆಗಲಿದೆ. ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ಬೆಂಗಳೂರು ಗ್ರಾಮಾಂತರ ಜಿಲ್ಲೆ ರೈತರು ಈ ಪ್ರತಿಭಟನೆಗೆ ಸಾಥ್​​​ ನೀಡಲಿದ್ದಾರೆ. ಬಂದ್​​ಗೆ ಬೆಂಬಲಿಸುವಂತೆ ರೈತ ಸಂಘಟನೆ, ಕನ್ನಡಪರ ಸಂಘಟನೆ, ಆಟೋ ಚಾಲಕರಿಗೆ ಕೋರಲಾಗಿದೆ. ಹೋರಾಟದ ನೇತೃತ್ವವನ್ನ ಮಂಡ್ಯ ಸಂಸದೆ ಸುಮಲತಾ ವಹಿಸಲಿದ್ದಾರೆ. ಅಲ್ಲದೆ, ಹೋರಾಟಕ್ಕೆ ಯಡಿಯೂರಪ್ಪರನ್ನ ಕರೆತರಲು ಯತ್ನ ನಡೆದಿದೆ.

ರಾಜಕೀಯ ಬಿಟ್ಟು ರೈತರ ಪರ ನಿಲ್ಲಬೇಕಿದೆ. ಬಿಜೆಪಿ ಮಾತ್ರ ಅಲ್ಲ ಹೋರಾಟಕ್ಕೆ ಯಾರೆಲ್ಲಾ ಬರ್ತಾರೆ ಅವರನ್ನು ಸೇರಿಸಿಕೊಳ್ಳಬೇಕು. ಕೇಂದ್ರ-ರಾಜ್ಯ ಸರ್ಕಾರ ಒಟ್ಟಾಗಿ ಧ್ವನಿ ಎತ್ತಬೇಕು.

-ಸಂಸದೆ ಸುಮಲತಾ ಅಂಬರೀಶ್

ಒಟ್ಟಾರೆ, ಈ ಬಾರಿ ಮಳೆ ಕೊರತೆ ಎದುರಾಗಿದ್ದು, ನೆರೆಯ ತಮಿಳುನಾಡು ಸ್ವಾರ್ಥಕ್ಕಿಳಿದಿದೆ. ಕಸಿದು ತಿನ್ನುವ ದಾರ್ಷ್ಟ್ಯಕ್ಕೆ ಮುಂದಾಗಿದ್ದು, ಸುಪ್ರೀಂಕೋರ್ಟ್​​ ಕದ ತಟ್ಟಿದೆ. ಇತ್ತ, ರಾಜ್ಯ ಸರ್ಕಾರ ಯಾವುದೇ ತಯಾರಿ ಇಲ್ಲದೇ, ನೀರು ಬಿಡುಗಡೆಯೇ ಪರಿಹಾರ ಅಂತ ತಿಳಿದಿದ್ದು, ರಾಜ್ಯದ ರೈತರನ್ನ ಕಡೆಗಣಿಸಿದೆ.. ಸದ್ಯ ಸೋಮವಾರ ಬಿಜೆಪಿ ಪ್ರತಿಭಟನೆಗೆ ಸಜ್ಜಾಗಿದ್ದು, ಸರ್ಕಾರದ ನಿಲುವು ಹೇಗಿರಲಿದೆ ಅನ್ನೋದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾವೇರಿದ ಕಾವೇರಿ ಕಿಚ್ಚು; ನಾಳೆ ಬಂದ್​​; ಕಾಂಗ್ರೆಸ್​ ಸರ್ಕಾರದ ವಿರುದ್ಧ ಬೀದಿಗಿಳಿದ ಸುಮಲತಾ ಅಂಬರೀಶ್​

https://newsfirstlive.com/wp-content/uploads/2023/08/krs-protest.jpg

Load More