ಮೆಟ್ಟೂರು ಡ್ಯಾಂನಿಂದ ಬಿಡುಗಡೆಯಾಗಿರುವ ನೀರಿನ ದಾಖಲೆ ಸಲ್ಲಿಕೆ
ನಾಳೆ ಸುಪ್ರೀಂಕೋರ್ಟ್‌ನಲ್ಲಿ ಕಾವೇರಿ ನೀರು ಬಿಡುಗಡೆಯ ವಿಚಾರಣೆ
ಕರ್ನಾಟಕ ಸರಿಯಾಗಿ ಆದೇಶ ಪಾಲನೆ ಮಾಡಿದೆ ಎಂದ ಪ್ರಾಧಿಕಾರ
ನವದೆಹಲಿ: ಕೆಆರ್‌ಎಸ್ ಜಲಾಶಯದಲ್ಲಿ ನೀರು ಖಾಲಿಯಾಗುತ್ತಿದ್ದಂತೆ ಕಾವೇರಿಗಾಗಿ ನಡೆಯುತ್ತಿರೋ ಹೋರಾಟ ತೀವ್ರಗೊಂಡಿದೆ. ಮಂಡ್ಯದಲ್ಲಿ ರೈತರು ಅಹೋರಾತ್ರಿ ಪ್ರತಿಭಟನೆ ಮಾಡುತ್ತಿದ್ರೆ ರಾಜ್ಯ ಸರ್ಕಾರ ತಮಿಳುನಾಡಿನ ವಿರುದ್ಧ ಕಾನೂನು ಹೋರಾಟ ಮುಂದುವರಿಸಿದೆ. ನಾಳೆ ಕಾವೇರಿ ನೀರು ಬಿಡುಗಡೆಯ ಈ ವಿವಾದದ ಹಿನ್ನೆಲೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ಸುಪ್ರೀಂಕೋರ್ಟ್ ವಿಚಾರಣೆಯ ಹಿನ್ನೆಲೆ ಇಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ತನ್ನ ಅಫಿಡವಿಟ್ ಸಲ್ಲಿಸಿದೆ.
ಸುಪ್ರೀಂಕೋರ್ಟ್‌ಗೆ ಇಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಅಫಿಡವಿಟ್ ಸಲ್ಲಿಸಿದೆ. ಅಫಿಡವಿಟ್‌ನಲ್ಲಿ ಕರ್ನಾಟಕವು ಸರಿಯಾದ ರೀತಿಯಲ್ಲಿ ಆದೇಶ ಪಾಲನೆ ಮಾಡಿದೆ. ಆದರೆ ತಮಿಳುನಾಡು ಸಂಕಷ್ಟದ ಪರಿಸ್ಥಿತಿಯನ್ನು ಪರಿಗಣಿಸಬೇಕಿತ್ತು. ತಮಿಳುನಾಡು ವಿವೇಚನಾಯುತವಾಗಿ ನೀರು ಬಳಸಿದ್ದರೆ ದೀರ್ಘಾವಧಿಗೆ ಮತ್ತಷ್ಟು ನೀರು ಬಳಕೆಗೆ ಲಭ್ಯವಾಗುತ್ತಿತ್ತು ಎಂದಿದೆ. ಕರ್ನಾಟಕ, ತಮಿಳುನಾಡು ಕಾವೇರಿ ನೀರಿಗಾಗಿ ಅರ್ಜಿ ಸಲ್ಲಿಸಿದ್ದು, ನಾಳೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ.
CWMA ಅಫಿಡವಿಟ್‌ನಲ್ಲಿ ಏನೇನಿದೆ?
ಮೆಟ್ಟೂರು ಡ್ಯಾಂನಿಂದ ಬಿಡುಗಡೆಯಾಗಿರುವ ನೀರಿನ ದಾಖಲೆ
ತಮಿಳುನಾಡಿಗೆ ಹರಿದು ಹೋಗಿರುವ ಕಾವೇರಿ ನೀರಿನ ಮಾಹಿತಿ
ಈ ವರ್ಷದಲ್ಲಿ ಮೆಟ್ಟೂರು ಡ್ಯಾಂನಿಂದ ಹೆಚ್ಚಿನ ಪ್ರಮಾಣದ ನೀರು
ತಮಿಳುನಾಡು ರಾಜ್ಯ ಸಂಕಷ್ಟದ ಪರಿಸ್ಥಿತಿಯನ್ನು ಪರಿಗಣಿಸಬೇಕಿತ್ತು
ತಮಿಳುನಾಡು ವಿವೇಚನಾಯುತವಾಗಿ ಕಾವೇರಿ ನೀರು ಬಳಸಬೇಕಿತ್ತು
ಸರಿಯಾಗಿ ನೀರು ಬಳಸಿದ್ರೆ ದೀರ್ಘಾವಧಿಗೆ ಮತ್ತಷ್ಟು ನೀರು ಲಭ್ಯವಾಗ್ತಿತ್ತು
ಇನ್ನು, ಕಳೆದ ಆಗಸ್ಟ್ 11ರಂದು ನಡೆದ ಕಾವೇರಿ ನೀರು ನಿರ್ವಹಣಾ ಆಯೋಗದ ಸಭೆಯಲ್ಲಿ ಕರ್ನಾಟಕ, ತಮಿಳುನಾಡು ಎರಡೂ ರಾಜ್ಯದ ವಾದವನ್ನು ಆಲಿಸಲಾಗಿತ್ತು. ಆಗಸ್ಟ್ 28ರಂದು ತುರ್ತು ಸಭೆ ನಡೆಸಿದ್ದು ಆಗಸ್ಟ್ 29ರಿಂದ ಸೆಪ್ಟೆಂಬರ್ 12ರವರೆಗೆ 15 ದಿನಗಳ ಕಾಲ ಸೆಕೆಂಡಿಗೆ 5000 ಕ್ಯೂಬಿಕ್ ಅಡಿಯಂತೆ ಕಾವೇರಿಯಿಂದ ನೀರು ಬಿಡುವಂತೆ ಆದೇಶ ಹೊರಡಿಸಲಾಗಿದೆ. ಕರ್ನಾಟಕ ಸರ್ಕಾರವು ಆಗಸ್ಟ್ 12ರಿಂದ 27ರವರೆಗೆ ತಮಿಳುನಾಡಿಗೆ 154281 ಘನ ಮೀಟರ್ ನೀರನ್ನು ಅಂದ್ರೆ 13,328 ಟಿಎಂಸಿ ನೀರನ್ನು ಬಿಡುಗಡೆ ಮಾಡಿದೆ. 10000 ಕ್ಯೂಬಿಕ್ ನೀರು ಪ್ರತಿದಿನ ಬಿಡುಗಡೆ ಮಾಡಿದೆ. ಪ್ರಸಕ್ತ ನೀರಾವರಿ ವರ್ಷದಲ್ಲಿ ಕರ್ನಾಟಕ ರಾಜ್ಯದ ನಾಲ್ಕು ಗೊತ್ತುಪಡಿಸಿದ ಜಲಾಶಯಗಳಲ್ಲಿ ನೀರಿನ ಒಳಹರಿವು 51.22% ಕೊರತೆಯಾಗಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ಇದನ್ನೂ ಓದಿ: ಮತ್ತೆ ಕಾವೇರಿ ನೀರು ಬಿಡುಗಡೆಗೆ ಆದೇಶ; ಸುಪ್ರೀಂ ಕೋರ್ಟ್ನಲ್ಲಿ ತಮಿಳುನಾಡಿಗೆ ಸೆಡ್ಡು ಹೊಡೆಯುತ್ತಾ ಕರ್ನಾಟಕ?
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಮಿಳುನಾಡು ಮೆಟ್ಟೂರು ಜಲಾಶಯದ ನೀರನ್ನು ಈ ವರ್ಷ ಬಿಡುಗಡೆ ಮಾಡಿರುವುದರ ದಾಖಲೆಯನ್ನು ಸಲ್ಲಿಸಿದೆ. ಅದರಲ್ಲಿ ಮೆಟ್ಟೂರು ಡ್ಯಾಂ ನೀರು ಬಿಡುಗಡೆ ಈ ಜಲ ವರ್ಷದಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಸಂಕಷ್ಟದ ಪರಿಸ್ಥಿತಿಯನ್ನು ಪರಿಗಣಿಸಿ ತಮಿಳುನಾಡು ವಿವೇಚನಾಯುತವಾಗಿ ನೀರನ್ನು ಬಳಸಿದ್ದರೆ ದೀರ್ಘ ಅವಧಿಗೆ ನೀರು ಬಳಕೆಗೆ ಲಭ್ಯವಾಗುತ್ತಿತ್ತು ಅನ್ನೋದನ್ನು ಸ್ಪಷ್ಟಪಡಿಸಲಾಗಿದೆ. ಈ ವರದಿಯಿಂದಾಗಿ ನಾಳೆ ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕದ ವಾದಕ್ಕೆ ಹೆಚ್ಚಿನ ಮನ್ನಣೆ ಸಿಗುವ ನಿರೀಕ್ಷೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ