ವಿಡಿಯೋ ಕಾನ್ಫರೆನ್ಸ್ ಮೂಲಕ ಸಕಾವೇರಿ ನೀರು ನಿರ್ವಹಣಾ ಸಮಿತಿ ಸಭೆ
ದೆಹಲಿಯಿಂದಲೇ ವಿಡಿಯೋ ಕಾನ್ಫರೆನ್ಸ್ ಮಾಡಲಿದ್ದಾರೆ ಸಮಿತಿ ಸದಸ್ಯರು
ಇಂದಿನ ಸಮಿತಿ ಸಭೆಯ ಮೇಲೆ ಮಂಡ್ಯ ರೈತರ ಚಿತ್ತ ನೆಟ್ಟಿದೆ
ಇಂದು ಮಧ್ಯಾಹ್ನ 2:30 ಕ್ಕೆ ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆ ನಡೆಯಲಿದೆ. ಕಾವೇರಿ ನಿಗಮದ ಹಿರಿಯ ಅಧಿಕಾರಿಗಳು ಹಾಗೂ ಎಂಜನಿಯರ್ ಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಕಾವೇರಿ ನಿರ್ವಹಣಾ ಸಮಿತಿ ಸದಸ್ಯರು ದೆಹಲಿಯಿಂದಲೇ ವಿಡಿಯೋ ಕಾನ್ಫರೆನ್ಸ್ ನಲ್ಲಿ ಕೂರಲಿದ್ದಾರೆ. ಕಳೆದ 15 ದಿನಗಳ ಕಾಲ CWMA ನೀಡಿರೋ ಆದೇಶದ ಅನ್ವಯ ನೀರು ಬಿಟ್ಟಿರೋ ಕರ್ನಾಟಕ ಪ್ರತಿದಿನ 15 ದಿನಗಳ ಕಾಲ 5000 ಕ್ಯೂಸೆಕ್ ನೀರು ಬಿಟ್ಟಿದೆ. ಆದರೆ ಇನ್ನು ಮುಂದೆ ನೀರು ಬಿಡುವುದು ಕಷ್ಟ ಸಾಧ್ಯ ಎಂದು ಕರ್ನಾಟಕ ಹೇಳಲಿದೆ.
ಕಳೆದ ಎರಡು ಬಾರಿಯೂ ಆದೇಶಗಳನ್ನು ಚಾಚು ತಪ್ಪದೇ ಕರ್ನಾಟಕ ಪಾಲಿಸಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ತೊಂದರೆ ಇದೆ. ಆದ್ದರಿಂದ ಕರ್ನಾಟಕದ ಸ್ಥಿತಿಯನ್ನು ಗಂಭೀರವಾಗಿ ಪರಿಶೀಲಿಸಬೇಕು ಎಂದು ಅಧಿಕಾರಿಗಳು ಮನವಿ ಸಲ್ಲಿಸಲಿದ್ದಾರೆ. ಅದರೊಂದಿಗೆ ಮಳೆ ಕೊರತೆ, ಡ್ಯಾಂಗಳಲ್ಲಿರುವ ನೀರಿನ ಅಂಕಿ ಅಂಶವನ್ನು ಕರ್ನಾಟಕವು ಪ್ರಾಧಿಕಾರದ ಮುಂದಿಡಲಿದೆ.
ಮತ್ತೊಂದೆಡೆ ಇಂದಿನ ಸಮಿತಿ ಸಭೆಯ ಮೇಲೆ ಮಂಡ್ಯ ರೈತರ ಚಿತ್ತ ನೆಟ್ಟಿದೆ. ಮತ್ತೆ ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ಮಾಡುತ್ತಾ ಎಂಬ ಆತಂಕದಲ್ಲಿ ರೈತರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ