newsfirstkannada.com

ಮತ್ತೆ ಕಾವೇರಿ ನೀರು ಬಿಡುಗಡೆಗೆ ಆದೇಶ; ಸುಪ್ರೀಂ ಕೋರ್ಟ್​​ನಲ್ಲಿ ತಮಿಳುನಾಡಿಗೆ ಸೆಡ್ಡು ಹೊಡೆಯುತ್ತಾ ಕರ್ನಾಟಕ?

Share :

30-08-2023

    ಕಾವೇರಿ ಪ್ರಾಧಿಕಾರದ ಆದೇಶಕ್ಕೆ ಕರ್ನಾಟಕ ಕೂಡ ಬೇಸರ

    ವಿಸ್ತೃತ ದಾಖಲೆ ಮೂಲಕ ವರದಿ ನೀಡಿ ಎಂದ ತಮಿಳುನಾಡು

    ಯಾವ ಮಾನದಂಡದಡಿ ಆದೇಶ ಎಂದು ತಮಿಳುನಾಡು ಪ್ರಶ್ನೆ

ನವದೆಹಲಿ: ಕಾವೇರಿ ನದಿ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ನಿರಾಸೆ ಅನ್ನೋದು ಯಾವಾಗ್ಲೂ ಕಟ್ಟಿಟ್ಟ ಬುತ್ತಿ. ಮೊನ್ನೆ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಅಂತ ಕಾವೇರಿ ನಿಯಂತ್ರಣ ಸಮಿತಿ ನೀಡಿದ್ದ ಶಿಫಾರಸುಗಳನ್ನು ಇವತ್ತು ಕಾವೇರಿ ಪ್ರಾಧಿಕಾರ ಕೂಡ ಎತ್ತಿ ಹಿಡಿದಿದೆ. ಆದ್ರೆ ಪ್ರಾಧಿಕಾರದ ಆದೇಶ ಕರ್ನಾಟಕದ ಪಾಲಿಗೆ ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತಾಗಿದೆ. ಹಳೇ ಮೈಸೂರು ಭಾಗದಲ್ಲಿ ಬರದ ಛಾಯೆ ಆವರಿಸಿದೆ. ಮಳೆ ಇಲ್ಲದೇ ಪರಿಸ್ಥಿತಿ ಅಯೋಮಯ ಆಗುವಂತಿದೆ. ಜಲಾಶಯಗಳು, ಕೆರೆ-ಕಟ್ಟೆಗಳು ಬರಿದಾಗಿವೆ.. ಈ ನಡುವೆ ಕಾವೇರಿ ಪ್ರಾಧಿಕಾರದ ಆದೇಶ ಗಾಯದ ಮೇಲೆ ಬರೆ ಎಳೆದಿದೆ.

ಆದೇಶ ಎತ್ತಿ ಹಿಡಿದ ಕಾವೇರಿ ನೀರು ಪ್ರಾಧಿಕಾರ!
ಎರಡೂ ರಾಜ್ಯಗಳ ಮನವಿ ತಿರಸ್ಕರಿಸಿದ ಕಾವೇರಿ ಪ್ರಾಧಿಕಾರ!

ಕಳೆದ 25ರಂದು ಕಾವೇರಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್​​ ನೀರು ಬಿಡಬೇಕೇ, ಬೇಡ್ವೇ ಎಂಬ ಹೊಣೆಯ ನಿರ್ಧಾರವನ್ನ ಪ್ರಾಧಿಕಾರದ ಹೆಗಲಿಗೆ ಹಾಕಿತ್ತು. ಅದರಂತೆ ಕಾವೇರಿ ನೀರು ನಿಯಂತ್ರಣಾ ಸಮಿತಿ ಸಭೆ ನಡೆಸಿ ತಮಿಳುನಾಡಿಗೆ ಮುಂದಿನ 15 ದಿನ ನೀರು ಹರಿಸುವಂತೆ ಶಿಫಾರಸು ಮಾಡಿತ್ತು. ಆದ್ರೆ ಸಮಿತಿಯ ಶಿಫಾರಸುಗಳನ್ನು ತಿರಸ್ಕರಿಸಿದ್ದ ಕರ್ನಾಟಕ ಪ್ರಾಧಿಕಾರದ ಸಭೆಯಲ್ಲಿ ಪ್ರಶ್ನಿಸಿತು. ಆದ್ರೆ ನಿಯಂತ್ರಣ ಸಮಿತಿಯ ಶಿಫಾರಸುಗಳನ್ನೇ ಎತ್ತಿ ಹಿಡಿದ ಪ್ರಾಧಿಕಾರ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಿಗೆ ಶಾಕ್ ನೀಡಿದೆ.

ಕಾವೇರಿ ನಿಯಂತ್ರಣ ಮಂಡಳಿ ಶಿಫಾರಸುಗಳನ್ನೇ ಕಾವೇರಿ ಪ್ರಾಧಿಕಾರ ಎತ್ತಿ ಹಿಡಿದಿದೆ. ಮುಂದಿನ 15 ದಿನಗಳು ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಿದೆ. ಆದ್ರೆ ಕಾವೇರಿ ನೀರು ಪ್ರಾಧಿಕಾರದ ಆದೇಶಕ್ಕೆ ಕರ್ನಾಟಕ ಆಕ್ಷೇಪ ವ್ಯಕ್ತಪಡಿಸಿದ್ದು 2.5 ಸಾವಿರ ಕ್ಯೂಸೆಕ್ ನೀರು ಬಿಡಲು ಒಪ್ಪಿದೆ. ಇದೇ ವೇಳೆ ತಮಿಳುನಾಡು ಸರ್ಕಾರ 7.5 ಕ್ಯೂಸೆಕ್ ನೀರು ಹರಿಸುವಂತೆ ಮನವಿ ಮಾಡಿದೆ. ಆದ್ರೆ ಎರಡೂ ರಾಜ್ಯಗಳ ಮನವಿಗಳನ್ನ ಪ್ರಾಧಿಕಾರ ತಿರಸ್ಕರಿಸಿದೆ. ಯಾವ ಮಾನದಂಡದ ಅಡಿ ಈ ಆದೇಶ ನೀಡಿದ್ದೀರಿ ಅಂತ ತಮಿಳುನಾಡು ಸರ್ಕಾರ ಪ್ರಶ್ನೆ ಮಾಡಿದೆ. ವಿಸ್ತೃತ ದಾಖಲೆ ಮೂಲಕ ವರದಿ ಕೇಳಿದೆ.. ಇತ್ತ ಕಾವೇರಿ ಪ್ರಾಧಿಕಾರದ ಆದೇಶಕ್ಕೆ ಕರ್ನಾಟಕ ಕೂಡ ಬೇಸರ ವ್ಯಕ್ತಪಡಿಸಿದೆ. ಇನ್ನು ರಾಜ್ಯದ ವಾಸ್ತವ ಸ್ಥಿತಿ ಬಗ್ಗೆ ಕರ್ನಾಟಕ ವಾದ ಮಂಡಿಸಿದ್ರೂ ಪ್ರಾಧಿಕಾರ ತಿರಸ್ಕರಿಸೋದು ಅಚ್ಚರಿ ಮೂಡಿಸಿದೆ.. ನಿಯಂತ್ರಣ ಸಮಿತಿಯ ಶಿಫಾರಸುಗಳು ಹಾಗೂ ನಿರ್ಧಾರಗಳನ್ನು ಪ್ರಾಧಿಕಾರ ಸುಪ್ರೀಂಕೋರ್ಟ್​ಗೆ ಸಲ್ಲಿಸಲಿದೆ.. ಸೆಪ್ಟೆಂಬರ್ 1ರಂದು ಈ ವರದಿಗಳನ್ನ ಆಧರಿಸಿ ಸುಪ್ರೀಂಕೋರ್ಟ್​ ವಿಚಾರಣೆ ನಡೆಸಲಿದೆ..

ನೀರು ಬಿಡುಗಡೆಗೆ ಜಲ ಸಂರಕ್ಷಣಾ ಸಮಿತಿ ವಿರೋಧ!
ನಮ್ಮ ಜಲ – ನಮ್ಮದು ಎಂಬ ಘೋಷವಾಕ್ಯದೊಂದಿಗೆ ಸಭೆ

ಸರ್ವಪಕ್ಷಗಳ ಬೆನ್ನಲ್ಲೇ ಬೆಂಗಳೂರಲ್ಲಿ ಜಲ ಸಂರಕ್ಷಣಾ ಸಮಿತಿ ಕರ್ನಾಟಕ ಕೂಡ ಕಾವೇರಿ ಸಭೆ ನಡೆಸಿದೆ.. ನಮ್ಮ ಜಲ – ನಮ್ಮದು ಎಂಬ ಘೋಷವಾಕ್ಯದೊಂದಿಗೆ ಕಾವೇರಿ ದುಂಡು ಮೇಜಿನ ಸಭೆ ನಡೆಸಿದೆ. ಆಪ್ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು, ರೈತ ಮುಖಂಡ ಕುರುಬೂರು ಶಾಂತಕುಮಾರ್ ಸೇರಿ ನೀರಾವರಿ ತಜ್ಞರು ಸಭೆಯಲ್ಲಿ ಭಾಗಿಯಾಗಿ ಚರ್ಚಿಸಿದ್ದಾರೆ.. 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಆದೇಶಿಸಿರುವ ಪ್ರಾಧಿಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಪ್ರಾಧಿಕಾರದ ಆದೇಶ ಕರ್ನಾಟಕಕ್ಕೆ ನುಂಗಲಾರದ ತುತ್ತಾಗಿದ್ದು, ಸುಪ್ರೀಂಕೋರ್ಟ್​​ನಲ್ಲಿ ವಾದ ಮಂಡಿಸಲಿದೆ. ಆದ್ರೆ ಸುಪ್ರೀಂಕೋರ್ಟ್ ಪ್ರಾಧಿಕಾರದ ಆದೇಶವನ್ನೇ ಎತ್ತಿ ಹಿಡಿಯುತ್ತಾ ಇಲ್ಲಾ ನೀರು ಹರಿಸುವ ಪ್ರಮಾಣ ಕಡಿಮೆ ಮಾಡುತ್ತಾ ಅನ್ನೋದು ಕುತೂಹಲ ಮೂಡಿಸಿದೆ. ಆದ್ರೆ ಮಳೆ ಮಾಯವಾಗಿರುವ ಹೊತ್ತಲ್ಲಿ ರಾಜ್ಯಕ್ಕೆ ಪದೇ ಪದೇ ಹಿನ್ನಡೆ ಆಗ್ತಿರೋದು ಕಾವೇರಿಕೊಳ್ಳದ ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತೆ ಕಾವೇರಿ ನೀರು ಬಿಡುಗಡೆಗೆ ಆದೇಶ; ಸುಪ್ರೀಂ ಕೋರ್ಟ್​​ನಲ್ಲಿ ತಮಿಳುನಾಡಿಗೆ ಸೆಡ್ಡು ಹೊಡೆಯುತ್ತಾ ಕರ್ನಾಟಕ?

https://newsfirstlive.com/wp-content/uploads/2023/08/caveri-1.jpg

Load More