/newsfirstlive-kannada/media/post_attachments/wp-content/uploads/2023/08/krs-3.jpg)
ಕನ್ನಡನಾಡಿನ ಜೀವನದಿ ಕಾವೇರಿ ಅನ್ನದಾತರ ಜೀವನಾಡಿ. ಸಂಕಷ್ಟದಲ್ಲೂ ಕಾವೇರಿ ತಮಿಳುನಾಡಿಗೆ ಹರಿದು ಹೋಗ್ತಿದ್ದಾಳೆ. ಇದೇ ವೇಳೆ ಇಂದು ಪ್ರಾಧಿಕಾರ ಸಭೆ ನಡೆಸಲಿದೆ. ಸಮರ್ಥ ವಾದ ಮಂಡಿಸಲು ಸರ್ಕಾರ ಸಜ್ಜಾಗಿದೆ. ಕಾವೇರಿ ಒಡಲು ಬರಿದಾಗ್ತಿದ್ದರೂ ನೀರು ಹರಿಸ್ತಿರೋದಕ್ಕೆ ರೈತರಲ್ಲಿ ಆಕ್ರೋಶ ವ್ಯಕ್ತವಾಗ್ತಿದೆ.
ತಮಿಳುನಾಡು ಮತ್ತು ಕರ್ನಾಟಕದ ನಡುವಿನ ಕಾವೇರಿ ನದಿ ನೀರಿನ ಹಂಚಿಕೆ ವಿವಾದವು ದಶಕಗಳಿಂದಲು ಬಗೆಹರಿದಿಲ್ಲ. ಉಭಯ ರಾಜಗಳ ವಿವಾದ ಹಲವು ವರ್ಷಗಳಿಂದ ಜೀವಂತವಾಗಿದೆ. ಕಾವೇರಿ ನೀರು ಬಿಡುವಂತೆ ಸದಾ ಕ್ಯಾತೆ ತೆಗೆಯುವ ತಮಿಳುನಾಡು ಕರ್ನಾಟಕಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದರ ಜೊತೆಗೆ ಕಾವೇರಿ ನದಿ ನೀರು ಪ್ರಾಧಿಕಾರದ ಆದೇಶ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರದ ಮುಂದಿನ ಹಾದಿ ಕಠಿಣವಾಗಿದೆ.
/newsfirstlive-kannada/media/post_attachments/wp-content/uploads/2023/09/caveri-3.jpg)
ಕಾವೇರಿ ಸಮಿತಿ ಆದೇಶ ಪ್ರಶ್ನಿಸಲಿರುವ ರಾಜ್ಯ ಸರ್ಕಾರ
ಇಂದಿನಿಂದ ಮತ್ತೆ ತಮಿಳುನಾಡಿಗೆ ಪ್ರತಿದಿನ 3,000 ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನಿರ್ವಹಣಾ ಸಮಿತಿ ಸೂಚಿಸಿದ್ದು ಈ ಆದೇಶಕ್ಕೆ ತಕರಾರು ತೆಗೆದಿರುವ ಕರ್ನಾಟಕ ಪ್ರಾಧಿಕಾರದಲ್ಲಿ ಪ್ರಶ್ನಿಸಲಿದೆ. ಹೀಗಾಗಿ ಇಂದು ಕಾವೇರಿ ಪ್ರಾಧಿಕಾರ ನವದೆಹಲಿಯಲ್ಲಿ ಸಭೆ ಕರೆದಿದೆ. ಅತ್ತ ತಮಿಳುನಾಡು ಕೂಡ ಹೆಚ್ಚು ನೀರಿಗಾಗಿ ಕ್ಯಾತೆ ತೆಗೆದಿದೆ. ಕಾವೇರಿ ಸಮಿತಿ ನೀಡಿರುವ ಸಲಹೆಗಳನ್ನ ಆಧರಿಸಿ ಪ್ರಾಧಿಕಾರ ಚರ್ಚೆ ನಡೆಸಲಿದ್ದು ಬಹುತೇಕ ಸಮಿತಿಯ ಶಿಫಾರಸುಗಳನ್ನೇ ಪಾಲಿಸುವಂತೆ ಸೂಚನೆ ನೀಡುವ ಸಾಧ್ಯತೆ ಇದೆ. ಒಂದು ವೇಳೆ ಆದೇಶ ಯಥಾಪ್ರಕಾರ ಬಂದ್ರೆ ಸರ್ಕಾರ ಮತ್ತೆ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ಚಿಂತನೆ ನಡೆಸಲಿದೆ.
ನಮ್ಮ ವಾದವನ್ನು ಸಮರ್ಥವಾಗಿ ಮಂಡಿಸ್ತೀವಿ ಎಂದ ಡಿಕೆಶಿ
/newsfirstlive-kannada/media/post_attachments/wp-content/uploads/2023/08/caveri-1.jpg)
ಇಂದು ಕಾವೇರಿ ಪ್ರಾಧಿಕಾರದ ಸಭೆಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಅಧಿಕಾರಿಗಳು ಹಾಗೂ ಕಾನೂನು ತಜ್ಞರ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ. ಮುಂದಿನ ಹಾದಿ ಕುರಿತು ಚರ್ಚೆ ನಡೆಸಲಿದ್ದಾರೆ. ಇಂದು ಪ್ರಾಧಿಕಾರದಲ್ಲಿ ಸಮರ್ಥ ವಾದ ಮಂಡಿಸ್ತೀವಿ ಅಂತ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ತಮಿಳುನಾಡಿಗೆ ಇನ್ನೂ ನೀರು ನಿಲ್ಲಿಸದ ಸರ್ಕಾರ
ಸದ್ಯ ಕೆಆರ್​ಎಸ್, ಕಬಿನಿ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿದು ಹೋಗ್ತಾನೆ ಇದ್ದು ರೈತರ ಆಕ್ರೋಶ ಭುಗಿಲೆದ್ದಿದ್ರೂ ಸರ್ಕಾರ ಇನ್ನೂ ನೀರು ನಿಲ್ಲಿಸಿಲ್ಲ. ಅಗತ್ಯಕ್ಕಿಂತಲೂ ಹೆಚ್ಚು ನೀರನ್ನ ಹರಿಸ್ತಿದೆ. ಸದ್ಯ ರೈತರ ಜಮೀನುಗಳಿಗೆ ಹರಿಸುತ್ತಿದ್ದ ನೀರನ್ನು ಬಂದ್ ಮಾಡಿದ್ದು ಇನ್ನು 15 ದಿನಗಳ ಕಾಲ ರೈತರ ಬೆಳಗಳಿಗೆ ನೀರು ಇಲ್ಲದಂತಾಗಿದೆ. ಇದೇ ರೀತಿ ನೀರು ಖಾಲಿಯಾದರೆ ಇದರಿಂದ ಮುಂದಿನ ದಿನಗಳಲ್ಲಿ ಮಂಡ್ಯ, ಮೈಸೂರು, ಬೆಂಗಳೂರಿನ ಜನರಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗಲಿದೆ.
/newsfirstlive-kannada/media/post_attachments/wp-content/uploads/2023/09/MYS_KRS.jpg)
ಕಾವೇರಿ ನದಿಗೆ ಅನ್ನದಾತರ ಕಣ್ಣೀರ ಅಭಿಷೇಕ!
ನಿರಂತರ ಪ್ರತಿಭಟನೆ ಹಾಗೂ ಬಂದ್​​ ನಡೆಸಿದ್ರೂ ತಮಿಳುನಾಡಿಗೆ ಹರಿಯುತ್ತಿರುವ ನೀರು ಮಾತ್ರ ನಿಂತಿಲ್ಲ. ಇದನ್ನು ವಿರೋಧಿಸಿ ಮಂಡ್ಯ ರಕ್ಷಣಾ ವೇದಿಕೆ ವಿನೂತನ ಪ್ರತಿಭಟನೆ ನಡೆಸಿದ್ದು ಮಿನರಲ್ ವಾಟರ್ ಕಾವೇರಿ ನದಿಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದೆ. ದಯವಿಟ್ಟು ನೀರು ಕೇಳಬೇಡಿ ಅಂತ ಹೋರಾಟಗಾರರು ಕಣ್ಣೀರಿಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2023/08/krs-protest.jpg)
ನಗುವ ಮೂಲಕ ಸರ್ಕಾರಕ್ಕೆ ಕುಟುಕಿದ ರೈತರು!
ಮತ್ತೊಂದೆಡೆ ಶ್ರೀರಂಗಪಟ್ಟಣದಲ್ಲಿ ಭೂಮಿ ತಾಯಿ ಹೋರಾಟ ಸಮಿತಿ ಸದಸ್ಯರು ನಗುವಿನ ಪ್ರತಿಭಟನೆ ನಡೆಸಿದ್ರು. ಮಂಡ್ಯ ಶಾಸಕರು, ಸಂಸದರು ಎಲ್ಲಿಗೋದ್ರಪ್ಪ ಅಂತ ಘೋಷಣೆ ಕೂಗುವ ಮೂಲಕ ಸರ್ಕಾರವನ್ನ ನಗುವಿನ ಮೂಲಕ ಅಣಕಿಸಿದ್ರು. ಕಾವೇರಿ ಬರಿದಾಗುತ್ತಿರುವ ಹೊತ್ತಲ್ಲಿ ನಾಳಿನ ಪ್ರಾಧಿಕಾರದ ಸಭೆಯತ್ತ ಎಲ್ಲರ ಚಿತ್ತ ನೆಟ್ಟಿದೆ.
ಕಾವೇರಿ ವಿಚಾರದಲ್ಲಿ ಪ್ರತಿಬಾರಿ ಹಿನ್ನೆಡೆ ಅನುಭವಿಸುತ್ತಿರುವ ಕರ್ನಾಟಕಕ್ಕೆ ನೀರು ಬಿಡುವ ಸಂದಿಗ್ಧತೆ ಎದುರಾಗ್ತಿದೆ. ಈ ಬಗ್ಗೆ ರಾಜ್ಯ ಸರ್ಕಾರ ಖಡಕ್ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿರೋದು ಸ್ಪಷ್ಟವಾಗಿದೆ. ಕೇಂದ್ರ ಸರ್ಕಾರ ಕೂಡ ರಾಜಕೀಯ ಬದಿಗಿಸಿರಿ ಮಧ್ಯಸ್ಥಿಕೆ ವಹಿಸಿ ಕಾವೇರಿ ಸಮಸ್ಯೆಯನ್ನು ಬಗೆಹರಿಸಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us