newsfirstkannada.com

ಇನ್ನೂ ನಿಲ್ಲದ ಕಾವೇರಿ ಹೋರಾಟ; ಸರ್ಕಾರದ ವಿರುದ್ಧ ಮುಂದುವರಿದ ರೈತರ ಧರಣಿ

Share :

03-09-2023

    ಸಂಕಷ್ಟ ಬಗೆಹರಿಸುವಂತೆ ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಮನವಿ

    ಜಲಸಂಪನ್ಮೂಲ ಸಚಿವರ ವಿರುದ್ಧ ಹೆಚ್​ಡಿ ದೇವೇಗೌಡ ಕಿಡಿ

    ಕಾವೇರಿ ನಮ್ಮದು ಎಂದು ಪ್ರತಿಭಟನೆಯಲ್ಲಿ ಹೆಜ್ಜೆ ಹಾಕಿದ ಶ್ವಾನ!

ಬೆಂಗಳೂರು: ಹೊಟ್ಟೆಗೆ ಹಿಟ್ಟಿಲ್ಲದಿದ್ರು ಜುಟ್ಟಿಗೆ ಮಲ್ಲಿಗೆ ಹೂವು ಎನ್ನುವಂತಾಗಿದೆ ಕರುನಾಡಿನ ಪಾಡು. ರಾಜ್ಯಕ್ಕೆ ನೀರಿಲ್ಲದಿದ್ದರೂ ಪಕ್ಕದ ರಾಜ್ಯಕ್ಕೆ ನೀರುಣಿಸಿ ಕೋರ್ಟ್​ ಆದೇಶವನ್ನ ಕಾವೇರಿ ಪ್ರಾಧಿಕಾರ ಪಾಲನೆ ಮಾಡ್ತಿರೋದು ಅನ್ನದಾತರನ್ನ ಕೆರಳಿಸಿದೆ. ಈ ಮಧ್ಯೆ ಅವರು ಚೆನ್ನಾಗಿರಲಿ, ಇವರು ಚೆನ್ನಾಗಿರಲಿ ಅಂತ ಕಾವೇರಿ ನೀರು ಹರಿಸಿದ್ದರೆ, ನಾವು ಚೆನ್ನಾಗಿರೋದು ಯಾವಾಗ ಅಂತ ರೈತರು ಕಂಗಾಲಾಗಿದ್ದಾರೆ.

ರಾಜ್ಯದ ಅನ್ನದಾತರ ಪಾಲಿನ ಅಕ್ಷಯ ಪಾತ್ರೆಯಂತಿದ್ದ ಕಾವೇರಿಗೆ ಕಂಟಕ ಎದುರಾಗಿದೆ. ವರುಣನಿಂದ ಓಡಲು ತುಂಬಿಕೊಂಡು ಬೋರ್ಗರೆಯಬೇಕಿದ್ದ ಕಾವೇರಮ್ಮ ಈ ಬಾರಿ ಬಣಗುಟ್ಟುತ್ತಿದ್ದಾಳೆ. ಕರುನಾಡಿಗೆ ವರುಣ ಕೃಪಾಕಟಾಕ್ಷ ತೋರದೇ ಇರೋದು ಕಾವೇರಿ ಕೊಳ್ಳದ ಅನ್ನದಾತರನ್ನ ಕಂಗಾಲಾಗಿಸಿದೆ. ಈ ಮಧ್ಯೆ ನೆರೆ ರಾಜ್ಯದ ಕಾಟಕ್ಕೆ ಕಾವೇರಿ ಗಡಿದಾಟುತ್ತಿರೋದು ರೈತರನ್ನ ಕೆರಳಿಸಿದೆ. ಕಾವೇರಿಯನ್ನ ಉಳಿಸಿಕೊಳ್ಳಲು ಇಂದು ಸಹ ಪ್ರತಿಭಟನಾ ಕಹಳೆ ಮೊಳಗಿದೆ.

ಸಕ್ಕರೆ ನಾಡಲ್ಲಿ ಕಿಚ್ಚು ಹೊತ್ತಿಸಿದ ಅನ್ನದಾತರ ಆಕ್ರೋಶ!
‘ಕಾವೇರಿ’ದ ಪ್ರತಿಭಟನೆಯಲ್ಲಿ.. ದಳಪತಿಗಳ ಕಹಳೆ!

ಸಂಕಷ್ಟದ ಮಧ್ಯೆಯೂ ತಮಿಳುನಾಡಿಗೆ ಕಾವೇರಿ ಪ್ರಾಧಿಕಾರ ನೀರು ಹರಿಸುತ್ತಿರೋದು ಅನ್ನದಾತರ ಕೆಂಗಣ್ಣಿಗೆ ಗುರಿಯಾಗಿದೆ. ಈವರೆಗೆ ಮಂಡ್ಯದಲ್ಲಿ ನಡೆಯುತ್ತಿದ್ದ ಕಾವೇರಿ ಪ್ರತಿಭಟನೆಯ ಕಿಚ್ಚು ಮತ್ತೊಂದು ಮಜಲು ಪಡೆದುಕೊಂಡಿತ್ತು. ಕಾವೇರಿ ಹೋರಾಟದಲ್ಲಿ ಕಹಳೆ ಮೊಳಗಿಸಲು ದಳಪತಿಗಳು ಫೀಲ್ಡ್​​ಗೆ ಇಳಿದಿದ್ದರು. ಮಂಡ್ಯದ ಸಿಲ್ವರ್ ಜುಬಿಲಿ ಪಾರ್ಕ್​ನಲ್ಲಿ ಪ್ರತಿಭಟನೆ ಆರಂಭಿಸಿದ ಜೆಡಿಎಸ್​ ನಾಯಕರು ಬೃಹತ್​ ಱಲಿ ನಡೆಸಿದ್ದರು. ಡಿಸಿ ಕಚೇರಿ ತಲುಪಿದ ಪ್ರತಿಭಟನಾ ಮೆರವಣಿಗೆ ದಳಪತಿಗಳ ವಿರಾವೇಷಕ್ಕೆ ಸಾಕ್ಷಿಯಾಯ್ತು. ಡಿಸಿ ಕಚೇರಿ ಮುಂಭಾಗ ರಾಜ್ಯ ಸರ್ಕಾರದ ಮೇಲೆ ಮಾತಿನ ದಾಳಿ ನಡೆಸಿದ ನಾಯಕರು, ಕಾವೇರಿ ನೀರು ಹರಿಸೋದನ್ನ ನಿಲ್ಲಿಸುವಂತೆ ಆಗ್ರಹಿಸಿ ಸರ್ಕಾರಕ್ಕೆ ಎರಡು ದಿನಗಳ ಡೆಡ್​ಲೈನ್​ ಸಹ ನೀಡಿದ್ದರು. ಮಂಡ್ಯದಲ್ಲಿ ನಡೆದ ಕಾವೇರಿ ಉಳಿಸಿ ಪ್ರತಿಭಟನಾ ಮೆರವಣಿಗೆಯಲ್ಲಿ ಶ್ವಾನವೊಂದು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಕಾವೇರಿ ನಮ್ಮದು ಎಂಬ ಪೋಸ್ಟರ್​ ಹಿಡಿದು ಬಂದ ಶ್ವಾನ ಮೆರವಣಿಗೆಯಲ್ಲಿ ಹೆಜ್ಜೆಹಾಕಿತು.

ಕಾವೇರಿ ನದಿಗಿಳಿದು ರೈತ ಸಂಘದ ಪ್ರತಿಭಟನೆ

ಕಳೆದ ನಾಲ್ಕು ದಿನಗಳಿಂದ ಕಾವೇರಿ ನೀರಿಗಾಗಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಮುಂದುವರೆದಿದೆ. ಕೆಆರ್​ಎಸ್​ ಸಮೀಪದ ಕಾವೇರಿ ನದಿಗಿಳಿದು ರೈತ ಸಂಘದ ಸದ್ಯಸರು ಆಕ್ರೋಶ ಹೊರಹಾಕಿದ್ದಾರೆ. ರೈತ ಸಂಘದ ಹೋರಾಟಕ್ಕೆ ಮುಖ್ಯಮಂತ್ರಿ ಚಂದ್ರು ಬೆಂಬಲ ಸೂಚಿಸಿದ್ದು, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಕಾವೇರಿ ಸಂಕಷ್ಟ ಬಗೆಹರಿಸುವಂತೆ ಕೇಂದ್ರಕ್ಕೆ ಸಿಎಂ ಮನವಿ
ಜಲಸಂಪನ್ಮೂಲ ಸಚಿವರ ವಿರುದ್ಧ ಹೆಚ್​ಡಿಡಿ ಅಸಮಾಧಾನ

ರಾಜ್ಯದಲ್ಲಿ ನಡೆಯುತ್ತಿರೋ ಕಾವೇರಿ ನೀರಿನ ಹಗ್ಗಜಗ್ಗಾಟದ ಬಗ್ಗೆ ಸಿಎಂ ಸಿದ್ದರಾಮಯ್ಯ ಬಳ್ಳಾರಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡ್ಬೇಕು, ಕಾವೇರಿ ವಾಟರ್ ಮ್ಯಾನೇಜ್ಮೆಂಟ್ ಈ ಬಗ್ಗೆ ಸೂಕ್ತ ತಿರ್ಮಾನ ತಗೋಬೇಕು ಅಂತ ತಿಳಿಸಿದ್ದರು. ಇನ್ನು ಕಾವೇರಿ ನೀರಿನ ಹೋರಾಟದ ವಿಚಾರವಾಗಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರು ಅಸಮಾಧಾನ ಹೊರಹಾಕಿದ್ದರು. ನೀರಾವರಿಗೆ ಸಂಬಂಧಪಟ್ಟ ಮಂತ್ರಿಗಳು ಒಂದೊಂದು ಸಾರಿ ಒಂದೊಂದು ಹೇಳಿಕೆಗಳನ್ನು ಕೊಡ್ತಾರೆ ಅಂತ ಕಿಡಿಕಾರಿದ್ದರು.

ದಿನೇ ದಿನೇ ಬರಿದಾಗುತ್ತಿದೆ ಕಾವೇರಿ ಒಡಲು!

ತಮಿಳುನಾಡಿಗೆ ನೀರು ಹರಿಸುತ್ತಿರೋ ಹಿನ್ನೆಲೆ ಕಾವೇರಿ ಒಡಲಿನಲ್ಲಿ ಜೀವಜಲ ದಿನೇ ದಿನೇ ನೆಲ ಕಚ್ಚುತ್ತಿದೆ. 99 ಅಡಿಗೆ ಕೆಆರ್​ಎಸ್​ ಡ್ಯಾಂ ನೀರಿನ ಮಟ್ಟ ಕುಸಿತಗೊಂಡಿದೆ. ಕಳೆದ 4 ದಿನಗಳಲ್ಲಿ 2 ಟಿಎಂಸಿ ನೀರು ಜಲಾಶಯದಲ್ಲಿ ಖಾಲಿಯಾಗಿದೆ. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆಆರ್​ಎಸ್​ ಜಲಾಶಯದಲ್ಲಿ ಸದ್ಯ ನೀರಿನ ಮಟ್ಟ 99.86 ಅಡಿ ಇದೆ. 49.452 ಟಿಎಂಸಿ ಗರಿಷ್ಠ ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಇಂದು 22.700 ಟಿಎಂಸಿ ನೀರಿನ ಸಂಗ್ರಹವಿದೆ. ಜಲಾಶಯಕ್ಕೆ 2870 ಕ್ಯೂಸೆಕ್ ಒಳಹರಿವಿದ್ದು, ಹೊರ ಹರಿವು 7128 ಕ್ಯೂಸೆಕ್ ಇದೆ. ಒಟ್ಟಿನಲ್ಲಿ ನೆರೆ ರಾಜ್ಯದ ಕಾಟ, ಮಳೆರಾಯನ ಕಳ್ಳಾಟ ಕಾವೇರಿ ಒಡಲನ್ನ ಖಾಲಿ ಖಾಲಿ ಮಾಡ್ತಿದೆ. ಇನ್ನೂ ಮುಂದೆಯೂ ರಾಜ್ಯದ ಗಡಿದಾಟಿ ತಮಿಳುನಾಡನ್ನ ತಣ್ಣಗಾಗಿಸಲು ಕಾವೇರಿ ಮುಂದಾದ್ರೆ ರಾಜ್ಯಕ್ಕೆ ಜಲಕ್ಷಾಮ ಕಟ್ಟಿಟ್ಟ ಬುತ್ತಿಯಂತಾಗುತ್ತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇನ್ನೂ ನಿಲ್ಲದ ಕಾವೇರಿ ಹೋರಾಟ; ಸರ್ಕಾರದ ವಿರುದ್ಧ ಮುಂದುವರಿದ ರೈತರ ಧರಣಿ

https://newsfirstlive.com/wp-content/uploads/2023/09/CAUVERY-WATER-PROTEST-3.jpg

Load More