ತಮಿಳುನಾಡಿಗೆ ನೀರು ಬಿಡಲು ಕಾವೇರಿ ನಿರ್ವಹಣಾ ಪ್ರಾಧಿಕಾರ ಸೂಚನೆ
2.5 ಸಾವಿರ ಕ್ಯೂಸೆಕ್ ನೀರು ಬಿಡಲು ಮಾತ್ರ ಸಾಧ್ಯ ಎಂದ ಕರ್ನಾಟಕ
CWMA ಸೂಚನೆಗೆ ಬೇಸರ ವ್ಯಕ್ತಪಡಿಸಿದ ಕರ್ನಾಟಕ ಸರ್ಕಾರ
ನವದೆಹಲಿ: ರಾಜ್ಯದ ಕಾವೇರಿ ಅಚ್ಚುಕಟ್ಟು ಜಲಾಶಯಗಳಿಂದ ಮುಂದಿನ ಹದಿನೈದು ದಿನಗಳ ಕಾಲ ನಿತ್ಯ 5 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWRC) ಕರ್ನಾಟಕಕ್ಕೆ ಆದೇಶ ಮಾಡಿದೆ. ಈ ನಿರ್ಧಾರಕ್ಕೆ ಕರ್ನಾಟಕ ಆಕ್ಷೇಪ ವ್ಯಕ್ತಪಡಿಸಿದೆ.

ತಮಿಳುನಾಡಿನ 10 ದಿನಗಳ ಕಾಲ 24,000 ಕ್ಯೂಸೆಕ್ ಹರಿಸುವ ಬೇಡಿಕೆ ಬದಲು 7,200 ಕ್ಯೂಸೆಕ್ ಹರಿಸಲು ಒತ್ತಾಯ ಮಾಡಿಕೊಂಡಿತ್ತು. ಇದಕ್ಕೆ ಕರ್ನಾಟಕ ಒಪ್ಪದಿದ್ದ ಕಾರಣ 5,000 ಕ್ಯೂಸೆಕ್ 15 ದಿನಗಳ ಕಾಲ ಬಿಡುವಂತೆ ಶಿಫಾರಸು ಮಾಡಿತು. ಆದರೆ ಕಾವೇರಿ ಕೊಳ್ಳದ ಜಲಾಶಯಗಳ ಒಡಲು ಬರಿದಾಗಿವೆ. ಮಳೆ ಇಲ್ಲದೇ ಬೆಳೆಗಳು ಒಣಗುತ್ತಿವೆ. ನೀರಿಲ್ಲದಿದ್ರೂ ನೀರು ಕೇಳುತ್ತಿದೆ ತಮಿಳುನಾಡು.
ಇದನ್ನು ಓದಿ: ಕರ್ನಾಟಕಕ್ಕೆ ಅತೃಪ್ತಿ, ತಮಿಳುನಾಡಿಗೆ 15 ದಿನ ನೀರು ಹರಿಸುವಂತೆ ಶಿಫಾರಸು; ಸೆ.1ರಂದು ಸುಪ್ರೀಂಕೋರ್ಟ್ ವಿಚಾರಣೆ
ಹೀಗಾಗಿ ಇಂದು ನಡೆದ ವರ್ಚ್ಯುವಲ್ ಸಭೆಯಲ್ಲಿ ತಮಿಳುನಾಡಿಗೆ, ಕರ್ನಾಟಕ 2.5 ಸಾವಿರ ಕ್ಯೂಸೆಕ್ ನೀರು ಬಿಡಲು ಒಪ್ಪಿಗೆ ಸೂಚಿಸಿದೆ. ಈ ಆದೇಶವನ್ನ ಯಾವ ಮಾನದಂಡದ ಅಡಿ ಸೂಚನೆ ನೀಡಿದ್ದೀರಿ. ಈ ಬಗ್ಗೆ ನಮಗೆ ವಿಸ್ತೃತವಾಗಿ ದಾಖಲೆ ಮೂಲಕ ವರದಿ ನೀಡಿ ಎಂದು ತಮಿಳುನಾಡು ಸರ್ಕಾರ ಪ್ರಶ್ನೆ ಮಾಡಿದೆ. ಸೆಪ್ಟೆಂಬರ್ 1ರಂದು ಈ ವರದಿ ಆಧರಿಸಿ ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ. ಸದ್ಯ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಎರಡು ರಾಜ್ಯಗಳ ಈ ಆದೇಶವನ್ನು ಒಪ್ಪಿಕೊಳ್ಳುತ್ತಾ ಎಂದು ಕಾದು ನೋಡಬೇಕಿದೆ.
ಕೆಆರ್‌ಎಸ್ ನೀರಿನ ಮಟ್ಟ!
ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 101.00 ಅಡಿಗಳು
ಒಳ ಹರಿವು – 1,378 ಕ್ಯೂಸೆಕ್
ಹೊರ ಹರಿವು – 2,345 ಕ್ಯೂಸೆಕ್
ಕೆಆರ್‌ಎಸ್ ಜಲಾಶಯದ ಗರಿಷ್ಠ ಮಟ್ಟ – 124.80 ಅಡಿಗಳಿದ್ದು ಇಂದಿನ ಮಟ್ಟ – 101.00 ಅಡಿಗಳಿಗೆ ಕುಸಿದಿದೆ.. ಒಳ ಹರಿವು – 1,378 ಕ್ಯೂಸೆಕ್ ಇದ್ದು, ಹೊರ ಹರಿವು – 2,345 ಕ್ಯೂಸೆಕ್ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ