newsfirstkannada.com

×

ಡಿಸಿಎಂ ಡಿ.ಕೆ ಶಿವಕುಮಾರ್ ಕುಟುಂಬಕ್ಕೆ ಮತ್ತೆ ಬಿಗ್‌ ಶಾಕ್ ಕೊಟ್ಟ ಸಿಬಿಐ

Share :

Published January 1, 2024 at 1:04pm

    ಡಿಸಿಎಂ ಡಿಕೆ ಶಿವಕುಮಾರ್‌ ಕುಟುಂಬಕ್ಕೆ ನೋಟಿಸ್ ನೀಡಿರುವ ಸಿಬಿಐ

    ಮಲೆಯಾಳಂ ಸುದ್ದಿ ವಾಹಿನಿ ಜೈ ಹಿಂದ್‌ ಎಂಡಿಗೂ ಸಿಬಿಐ ನೋಟಿಸ್

    ಜನವರಿ 11ರ ಒಳಗೆ ವಿಚಾರಣೆಗೆ ಹಾಜರಾಗಿ ಮಾಹಿತಿ ನೀಡಲು ಸೂಚನೆ

ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಡಿಕೆಶಿ ಕುಟುಂಬಕ್ಕೆ ನೋಟಿಸ್ ನೀಡಿರುವ ಸಿಬಿಐ, ಹೂಡಿಕೆ ಮಾಡಿರೋ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದೆ.

ಮಲೆಯಾಳಂ ಸುದ್ದಿ ವಾಹಿನಿ ಜೈ ಹಿಂದ್‌ ಎಂಡಿ ಬಿ.ಎಸ್ ಶಿಜುಗೆ ಸಿಬಿಐ ನೋಟಿಸ್ ಜಾರಿ ಮಾಡಿದೆ. ಈ ಸುದ್ದಿ ಸಂಸ್ಥೆಯಲ್ಲಿ ಡಿ.ಕೆ ಶಿವಕುಮಾರ್ ಕೂಡ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಎಂಡಿ ಬಿ.ಎಸ್ ಶಿಜುಗೆ ಚಾನೆಲ್‌ನಲ್ಲಿ ಹೂಡಿಕೆ ಮಾಡಿರುವ ಬಗ್ಗೆ ಮಾಹಿತಿ ನೀಡುವಂತೆ CRPC ಸೆಕ್ಷನ್ 91ರ ಅಡಿಯಲ್ಲಿ ನೋಟಿಸ್ ನೀಡಲಾಗಿದೆ. ಈ ನೋಟಿಸ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಎಂಡಿ ಬಿ.ಎಸ್ ಶಿಜು ಅವರು ಜನವರಿ 11ಕ್ಕೆ ಸಿಬಿಐ ವಿಚಾರಣೆಗೆ ಹಾಜರಾಗಬೇಕಿದೆ.

ಇದನ್ನೂ ಓದಿ: WATCH: ‘ಅವ್ರು ಮಾಡಿದ್ರೆ ಕರೆಕ್ಟ್‌, ನಾವು ಮಾಡಿದ್ರೆ ತಪ್ಪಾ’- ಬಿಜೆಪಿ ನಾಯಕರಿಗೆ ಡಿಕೆ ಶಿವಕುಮಾರ್ ಚೆಕ್‌ಮೇಟ್‌

2013-18ರ ಅವಧಿಯ ಸಿಬಿಐ ಪ್ರಕರಣದ ಇದಾಗಿದ್ದು, ಜೈ ಹಿಂದ್ ಸಂಸ್ಥೆಯ ಎಂಡಿ ಶಿಜು ಅವರಿಗೆ ನೋಟಿಸ್ ನೀಡಲಾಗಿದೆ. ಈ ಬಗ್ಗೆ ನಾವು ಕಾನೂನು ಹೋರಾಟ ಮಾಡುತ್ತೆೇವೆ ಎಂದು ಶಿಜು ಅವರು ಹೇಳಿದ್ದಾರೆ. ಇದೇ ಪ್ರಕರಣದಲ್ಲಿ ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ಕುಟುಂಬಕ್ಕೂ ಸಿಬಿಐ ನೋಟಿಸ್ ನೀಡಿದೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಿಸಿಎಂ ಡಿ.ಕೆ ಶಿವಕುಮಾರ್ ಕುಟುಂಬಕ್ಕೆ ಮತ್ತೆ ಬಿಗ್‌ ಶಾಕ್ ಕೊಟ್ಟ ಸಿಬಿಐ

https://newsfirstlive.com/wp-content/uploads/2023/12/DKS-12.jpg

Load More