newsfirstkannada.com

ಲಂಚ ಪಡೆಯುತ್ತಾ ರೆಡ್​ ಹ್ಯಾಂಡ್ ಆಗಿ​ ಸಿಕ್ಕಿಬಿದ್ದ ಅಧಿಕಾರಿ.. ಭ್ರಷ್ಟನ ಮನೆಯಲ್ಲಿ ಕೋಟಿ, ಕೋಟಿ.!

Share :

13-09-2023

  ರೈಲ್ವೆ ಅಧಿಕಾರಿ ಮನೆಯಲ್ಲಿ 2.61 ಕೋಟಿ ರೂಪಾಯಿ ನಗದು ವಶ

  ಅಧಿಕಾರಿ ಮನೆಯಲ್ಲಿ ಬಾರೀ ಪ್ರಮಾಣದ ಹಣ ವಶಕ್ಕೆ ಪಡೆದ ಸಿಬಿಐ

  ಕಂಪನಿಯ ಮಾಲೀಕ ಪ್ರಣವ್​ ತ್ರಿಪಾಠಿಯಿಂದ ಪ್ರಕರಣ ದಾಖಲು

ಲಕ್ನೋ: ಈಶಾನ್ಯ ರೈಲ್ವೆ ಇಲಾಖೆಯ ಪ್ರಧಾನ ವಸ್ತು ವ್ಯವಸ್ಥಾಪಕರಾದ ಕೆ.ಸಿ ಜೋಶಿ ಅವರು 3 ಲಕ್ಷ ರೂಪಾಯಿ ಲಂಚ ಪಡೆಯುವಾಗ ರೆಡ್​ ಹ್ಯಾಂಡ್ ಆಗಿ ಸಿಬಿಐ ಅಧಿಕಾರಿಗಳು ಹಿಡಿದು, ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಸಿಬಿಐ ವಶಕ್ಕೆ ಪಡೆದ ಹಣ

ಸದ್ಯ ಸಿಬಿಐ ಅಧಿಕಾರಿಗಳು ಅರೆಸ್ಟ್ ಮಾಡಿರುವ ಆರೋಪಿ ಕೆ.ಸಿ ಜೋಶಿಯವರ ಗೋರಖ್​ಪುರ ಮತ್ತು ನೋಯ್ಡಾದಲ್ಲಿರುವ ಮನೆ, ಕಚೇರಿ ಮೇಲೆ ದಾಳಿ ಮಾಡಲಾಗಿದ್ದು ಒಟ್ಟು 2 ಕೋಟಿ 61 ಸಾವಿರ ರೂಪಾಯಿಗಳನ್ನು ವಶಕ್ಕೆ ಪಡೆಯಲಾಗಿದೆ. ಇವರ ವಿರುದ್ಧ ಗೋರಖ್​​ಪುರದ ಖಾಸಗಿ ಕಂಪನಿಯ ಮಾಲೀಕ ಪ್ರಣವ್​ ತ್ರಿಪಾಠಿ ಎನ್ನುವರು ಪ್ರಕರಣ ದಾಖಲಿಸಿದ್ದರು. ಇದರ ಆಧಾರದ ಮೇಲೆ ಇಂದು ಸಿಬಿಐ ಅಧಿಕಾರಿಗಳು ಜೋಶಿಯನ್ನು ರೆಡ್​ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇನ್ನು ರೈಲ್ವೆ ಇಲಾಖೆಯಲ್ಲಿ 1988 ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.

ಜೋಶಿ ಒಟ್ಟು 7 ಲಕ್ಷ ರೂಪಾಯಿಗಳನ್ನು ನೀಡುವಂತೆ ಪ್ರಣವ್​ ತ್ರಿಪಾಠಿ ಬಳಿ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದರೇ ರಿಜಿಸ್ಟ್ರೇಶನ್ ಕ್ಯಾನ್ಸಲ್ ಮಾಡುವುದಾಗಿ ಹೇಳಿದ್ದರಿಂದ 3 ಲಕ್ಷ ರೂ.ಗಳನ್ನು ಲಂಚ ನೀಡುವಾಗ ಮೊದಲೇ ತಿಳಿಸಿದಂತೆ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಂಚ ಪಡೆಯುತ್ತಾ ರೆಡ್​ ಹ್ಯಾಂಡ್ ಆಗಿ​ ಸಿಕ್ಕಿಬಿದ್ದ ಅಧಿಕಾರಿ.. ಭ್ರಷ್ಟನ ಮನೆಯಲ್ಲಿ ಕೋಟಿ, ಕೋಟಿ.!

https://newsfirstlive.com/wp-content/uploads/2023/09/UP_RAID_1.jpg

Load More