newsfirstkannada.com

278 ಪ್ರಯಾಣಿಕರ ಬಲಿ ಪಡೆದ ಕೇಸ್; ಸಿಬಿಐ FIRನಲ್ಲಿರುವ ಮಾಹಿತಿ ಬಹಿರಂಗ..!

Share :

07-06-2023

    ಅಗತ್ಯ ದಾಖಲೆ, ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆದ ಸಿಬಿಐ

    ತ್ರಿವಳಿ ರೈಲು ದುರಂತದಲ್ಲಿ 1100ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

    ರೈಲ್ವೇ ಮಂತ್ರಿ ಅಶ್ವಿನಿ ವೈಷ್ಣವ್ ಅವರಿಂದ ಸಿಬಿಐ ತನಿಖೆಗೆ ಆದೇಶ

ನವದೆಹಲಿ: 278 ಪ್ರಯಾಣಿಕರ ಬಲಿ ಪಡೆದ ಒಡಿಶಾ ತ್ರಿವಳಿ ರೈಲು ದುರಂತ ಪ್ರಕರಣದ ತನಿಖೆಗೆ ಸಿಬಿಐ (ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್) ನಿನ್ನೆ ಅಧಿಕೃತವಾಗಿ ಇಳಿದಿದೆ. ಖುದ್ದು ಘಟನಾ ಸ್ಥಳಕ್ಕೆ ಭೇಟಿ ಕೊಟ್ಟಿರುವ ಸಿಬಿಐ, ಅಗತ್ಯ ದಾಖಲೆ ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಪಡೆದುಕೊಂಡಿದೆ.

ಐಪಿಸಿ ಸೆಕ್ಷನ್ 337 , 338, 304 A, 34 ಅಡಿಯಲ್ಲಿ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ರೈಲ್ವೇ ಆ್ಯಕ್ಟ್​ನಡಿ ಒಡಿಶಾ ಪೊಲೀಸರು ದಾಖಲಿಸಿರುವ ಕೇಸ್​ಗಳ ಬಗ್ಗೆಯೂ ಮಾಹಿತಿ ಪಡೆದು ಕೇಸ್ ದಾಖಲಿಸಿಕೊಂಡಿದ್ದಾರೆ. ಕಳೆದ ಭಾನುವಾರ, ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ್ದರು.

ಏನ್ ಹೇಳುತ್ವೆ ಸೆಕ್ಸನ್​..?

  • IPC 337 – ಅಜಾಗರೂಕತೆಯಿಂದ, ನಿರ್ಲಕ್ಷ್ಯದಿಂದ ವ್ಯಕ್ತಿಗೆ ನೋವು ಸಹಿತ ಅಪಾಯವನ್ನುಂಟು ಮಾಡುವುದು
  • IPC -334 ಇತರೆ ವ್ಯಕ್ತಿಗಳ ಜೀವಕ್ಕೆ ತೊಂದರೆಯನ್ನುಂಟು ಮಾಡುವುದು
  • IPC -304 ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವುದು
  • 34 – ಕೃತ್ಯದಲ್ಲಿ ಸಾಮಾನ್ಯ ಉದ್ದೇಶ ಹೊಂದಿರುವುದು

ರೈಲ್ವೇ ಆ್ಯಕ್ಟ್​ ಅಡಿಯಲ್ಲಿ ಬರುವ ಉದ್ದೇಶ ಪೂರ್ವಕ ವೇಗದ ಚಲಾವಣೆ ಮತ್ತು ನಿರ್ಲಕ್ಷ್ಯ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಾಗಿದೆ. ಜೊತೆಗೆ ಬೇರೆಯವರ ಜೀವನನ್ನು ಅಪಾಯಕ್ಕೆ ತಳ್ಳುವ ಅಂಶಗಳ ಬಗ್ಗೆಯೂ ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ. ಒಂದು ಗೂಡ್ಸ್​ ಟ್ರೈನ್ ಹಾಗೂ ಎರಡು ಪ್ಯಾಸೇಂಜರ್ ರೈಲುಗಳ ಮಧ್ಯೆ ಡಿಕ್ಕಿ ಸಂಭವಿಸಿ ಭಾರೀ ಅನಾಹುತ ಸೃಷ್ಟಿಯಾಗಿದೆ. ಈ ದುರ್ಘಟನೆಯಲ್ಲಿ 1100 ಪ್ರಯಾಣಿಕರು ಗಾಯಗೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

278 ಪ್ರಯಾಣಿಕರ ಬಲಿ ಪಡೆದ ಕೇಸ್; ಸಿಬಿಐ FIRನಲ್ಲಿರುವ ಮಾಹಿತಿ ಬಹಿರಂಗ..!

https://newsfirstlive.com/wp-content/uploads/2023/06/BJP.jpg

Load More