ಶಂಕಿತ ಉಗ್ರರ ಬಂಧನದ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ನ್ಯೂಸ್
ಬೆಂಗಳೂರಿನ 2 ಮನೆಗಳಲ್ಲಿ ಭಾರೀ ಪ್ರಮಾಣದ ಸ್ಫೋಟಕ ಪತ್ತೆ..!
ಸಿಸಿಬಿ ಪೊಲೀಸ್ ಕಾರ್ಯಾಚರಣೆ ವೇಳೆ ಪತ್ತೆಯಾದ ಸ್ಫೋಟಕ
ಬೆಂಗಳೂರು: ಕಳೆದ ವಾರವಷ್ಟೇ ಸಿಸಿಬಿ ಪೊಲೀಸರು ಭರ್ಜರಿ ಭೇಟೆಯಾಡಿ ಐವರು ಶಂಕಿತ ಉಗ್ರರನ್ನ ಅರೆಸ್ಟ್ ಮಾಡಿದ್ರು. ಸಿಲಿಕಾನ್ ಸಿಟಿ ಉಗ್ರರ ಟಾರ್ಗೆಟ್ ಆಗಿತ್ತು ಅನ್ನೋ ಸುದ್ದಿ ಕೇಳಿ ಸಿಟಿ ಮಂದಿ ಬೆಚ್ಚಿ ಬಿದ್ದಿದ್ರು. ಉಗ್ರರ ಬಂಧನದಿಂದ ಭಾರೀ ಅನಾಹುತ ತಪ್ಪಿತಪ್ಪಾ ಎಂದು ನಿಟ್ಟುಸಿರು ಬಿಡೋ ಅಷ್ಟರಲ್ಲೇ ಶಾಕಿಂಗ್ ಸುದ್ದಿಯೊಂದು ಹೊರ ಬಿದ್ದಿದೆ. ಅಪಾರ ಪ್ರಮಾಣದ ಸ್ಫೋಟಕ ವಸ್ತು ಪತ್ತೆಯಾಗಿದೆ.
ಕಲ್ಲುಗುಡ್ಡದಹಳ್ಳಿ ಮನೆಯಲ್ಲಿದ್ದ ಸ್ಫೋಟಕ
ಕಲ್ಲುಗುಡ್ಡದಹಳ್ಳಿ ಮನೆಯಲ್ಲಿ ಕೆಜಿಗಟ್ಟಲೇ ಸ್ಫೋಟಕ ಸಾಮಗ್ರಿ ಪತ್ತೆಯಾಗಿದೆ. ಎರಡೂವರೆ ಕೆಜಿ ಸಲ್ಫರ್ ಪೌಡರ್, 250 ಗ್ರಾಂ ಎಕ್ಸ್‌ಪ್ಲೋಸಿವ್ ಜೆಲ್, 45 ಕೆಜಿ ಪೊಟಾಶಿಯಂ ನೈಟ್ರೇಟ್ ವೈಟ್ ಪೌಡರ್ ಹಾಗೂ ಸ್ಫೋಟಕ ಮದ್ದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಷ್ಟು ಪ್ರಮಾಣದ ಸ್ಫೋಟಕ ವಸ್ತುಗಳು ಪತ್ತೆಯಾಗಿರೋದು ಹೆಸರುಘಟ್ಟದ ಕಲ್ಲುಗುಡ್ಡದಹಳ್ಳಿಯಲ್ಲಿ. ಶಂಕರ್ ಹಾಗೂ ಕುಮಾರ್ ಅನುಮತಿಯಿಲ್ಲದೆ ಮನೆಯಲ್ಲಿ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿದ್ರು. ಸೋಲದೇವನಹಳ್ಳಿ ಪೊಲೀಸರ ದಾಳಿ ನಡೆಸಿ ಸ್ಫೋಟಕ ವಶಕ್ಕೆ ಪಡೆದಿದ್ದಾರೆ.
ಅದೇ ರೀತಿ ದಾಸೇನಹಳ್ಳಿಯ ರಾಘವೇಂದ್ರ ಲೇಔಟ್‌ನ ಮನೆ ಮೇಲೂ ಪೊಲೀಸರು ದಾಳಿ ನಡೆಸಿದ್ದಾರೆ. ಶ್ರೀನಿವಾಸ್ ಎಂಬಾತನ ಬಾಡಿಗೆ ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲೂ ಕೆಜಿಗಟ್ಟಲೇ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ.
ದಾಸೇನಹಳ್ಳಿ ಮನೆಯಲ್ಲಿದ್ದ ಸ್ಫೋಟಕ
ದಾಸೇನಹಳ್ಳಿಯ ಮನೆಯಲ್ಲಿ 1.860 ಕೆಜಿ ತೂಕದ ಎಕ್ಸ್‌ಪ್ಲೋಸಿವ್ ಜೆಲ್, 1.950 ಗ್ರಾಂ ತೂಕದ ಕಾರ್ಕೋಲ ಫೌಡರ್, 7.850 ಗ್ರಾಂ ಸಲ್ಫರ್ ಫೌಡರ್, 13 ಕೆಜಿ ಪೊಟಾಶಿಯಂ ನೈಟ್ರೇಟ್ ಪತ್ತೆಯಾಗಿದೆ.
ಸದ್ಯ ಎರಡು ಮನೆಯಲ್ಲಿ ಕೆಜಿಗಟ್ಟಲೇ ಸ್ಫೋಟಕ ವಸ್ತುಗಳನ್ನ ಜಪ್ತಿ ಮಾಡಿದ ಪೊಲೀಸರು, ಈ ಬಗ್ಗೆ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶ್ರೀನಿವಾಸ್, ಕುಮಾರ್ ಮತ್ತು ಶಂಕರ್ ಅನ್ನು ವಶಕ್ಕೆ ಪಡೆದು ವಿಚಾರಣೆ ಶುರುವಾಗಿದೆ. ಈ ಹಿಂದೆ ಗ್ರೆನೇಡ್ ಸಿಕ್ಕ ಪ್ರಕರಣಗಳಿಗೆ ಹೋಲಿಕೆ ಮಾಡಿ ಸಿಸಿಬಿ ತನಿಖೆ ಚುರುಕುಗೊಂಡಿದೆ.
ಗ್ರೆನೇಡ್ಗಳ ಬೆನ್ನು ಬಿದ್ದ ಸಿಸಿಬಿ
ಗ್ರೆನೇಡ್ಗಳ ಬೆನ್ನು ಬಿದ್ದ ಸಿಸಿಬಿ ತನಿಖಾ ತಂಡ, ಈ ಹಿಂದೆ ಪತ್ತೆಯಾದ ಗ್ರೆನೇಡ್ಗಳ ಮಾಹಿತಿ ಸಂಗ್ರಹಕ್ಕೆ ಮುಂದಾಗಿದೆ. ಬೆಂಗಳೂರಿನಲ್ಲಿ 2007ರಲ್ಲಿ ಪತ್ತೆಯಾದ ಗ್ರೆನೇಡ್, ಹೈದರಾಬಾದ್ನಲ್ಲಿ ಪತ್ತೆಯಾಗಿದ್ದ ನಾಲ್ಕು ಗ್ರೆನೇಡ್, ಮಾದರಿಗಳ ಮಾಹಿತಿ ಪರಿಶೀಲನೆಗೆ ಮುಂದಾಗಿದ್ದಾರೆ. ಗ್ರೆನೇಡ್ ಮಾದರಿ, ತಯಾರಾದ ಮೂಲದ ಪರಿಶೀಲನೆ ಮಾಡಲಿದ್ದಾರೆ. ಗ್ರೆನೇಡ್ ಪೋಟೋ, ಹಳೆ ಕಡತಗಳ ಪರಿಶೀಲನೆಗೆ ಸಿಸಿಬಿ ಮುಂದಾಗಿದೆ.
ಬಂಧಿತರಿಂದಲೂ ಗ್ರೆನೇಡ್ ವಿಚಾರವಾಗಿ ಬಾಯಿ ಬಿಡಿಸುವ ಪ್ರಯತ್ನ ನಡೆಯುತ್ತಿದೆ. ಆದ್ರೆ ಆರೋಪಿಗಳು ಮಾತ್ರ ಕಲ್ಲು ಕ್ವಾರಿಗಾಗಿ ಸಂಗ್ರಹ ಮಾಡಿದ್ದಾಗಿ ಹೇಳುತ್ತಿದ್ದಾರೆ. ಸತ್ಯಾಸತ್ಯತೆ ತನಿಖೆಯಲ್ಲಿ ಹೊರಬರಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ