newsfirstkannada.com

ಮತ್ತಿನ ಖಜಾನೆಯನ್ನೇ ಬೇಟೆಯಾಡಿ ಬೆಂಗಳೂರು ಕ್ರೈಂ ಬ್ರ್ಯಾಂಚ್; 1MLಗೆ ಹತ್ತು ಸಾವಿರ.. ಸಿರೀಂಜ್​ ಬಳಸಿ ವ್ಯವಹಾರ!

Share :

Published September 17, 2023 at 6:22am

    ಬೃಹತ್ ಆಪರೇಷನ್, ಮತ್ತಿನ ಖಜಾನೆ ಭೇದಿಸಿದ ಸಿಸಿಬಿ

    ರಾಜಧಾನಿಯಲ್ಲಿ ನೈಜೀರಿಯಾ ವ್ಯಕ್ತಿಯ ಡ್ರಗ್ಸ್​ ಜಾಲ!

    ಹೋಲ್​ಸೇಲ್​ನಲ್ಲಿ ಡ್ರಗ್ಸ್​ ಮಾರುತ್ತಿದ್ದವರಿಗೂ ಖೆಡ್ಡಾ!

ಬೆಂಗಳೂರು: ಡ್ರಗ್ ಮಾಫಿಯಾ ವಿರುದ್ದ ಕಣ್ಣಿಟ್ಟಿರೋ ಬೆಂಗಳೂರಿನ ಸೆಂಟ್ರಲ್ ಕ್ರೈಂ ಬ್ರ್ಯಾಂಚ್ ಮತ್ತಿನ ಖಜಾನೆಯನ್ನೇ ಬೇಟೆಯಾಡಿದೆ. ಏಳು ಪ್ರತ್ಯೇಕ ಕೇಸ್​ಗಳನ್ನ ಭೇದಿಸಿದ ಸಿಸಿಬಿ ಡ್ರಗ್ಸ್​ ದಂಧೆಯ ತಿಮಿಂಗಿಲಗಳನ್ನ ಬಲೆಗೆ ಬೀಳಿಸಿದೆ. ಕಿರಾತಕರ ಖಜಾನೆಯಲ್ಲಿ ಪತ್ತೆಯಾದ ಕೋಟಿ ಕೋಟಿ ಮೌಲ್ಯದ ಮಾದಕ ವಸ್ತುಗಳ ಬಂಡಾರ ಬೆಂಗಳೂರನ್ನೇ ಬೆಚ್ಚಿಬೀಳಿಸಿದೆ. ಮಾಯಾಲೋಕದಲ್ಲಿ ಮತ್ತಿನ ಘಾಟನ್ನ ಹರಡಿ, ಯುವ ಸಮುದಾಯದ ಹಾದಿ ತಪ್ಪಿಸಿ, ಸಮಾಜದ ಸ್ವಾಸ್ಥ್ಯ ಹಾಳು ಮಾಡೋ ಹುನ್ನಾರ ನಡೆಸೋ ಕ್ರಿಮಿಗಳ ಕಾಟ ರಾಜ್ಯ ರಾಜಧಾನಿಯಲ್ಲಿ ಹೆಚ್ಚಾಗತೊಡಗಿದೆ. ಕಿರಾತಕರ ಕಳ್ಳಾಟ ಸಿಲಿಕಾನ್​ ಸಿಟಿಯನ್ನು ಸಂಕಷ್ಟಕ್ಕೆ ತಳ್ಳಿದೆ.

ಕೋಟಿ ಕೋಟಿ ಮೌಲ್ಯದ ಮಾದಕ ವಸ್ತು ವಶಕ್ಕೆ!

ಕಳೆದ ಮೂರು ವರ್ಷಗಳಿಂದ ಬೆಂಗಳೂರಿನ ಸಿಸಿಬಿ ಟೀಂ ಡ್ರಗ್ ಮಾಫಿಯಾ ಕಂಟ್ರೋಲ್​ಗೆ ಪಡೆಯೋದ್ರಲ್ಲಿ ಸಕ್ಸಸ್ ಆಗ್ತಿದ್ದಾರೆ. ಪೆಡ್ಲರ್​ಗಳ ಮೇಲೆ ಕಣ್ಣಿಟ್ಟಿರೋ ಸಿಸಿಬಿ ತಿಮಿಂಗಿಲಗಳಂತ ಪೆಡ್ಲರ್ ಗಳನ್ನ ಹುಡುಕಿ ಹೆಡೆಮುರಿಕಟ್ಟಿದ್ದಾರೆ. ಇತ್ತೀಚೆಗೆ ಬೃಹತ್‌ ಕಾರ್ಯಾಚರಣೆ ನಡೆಸಿದ್ದ ಸಿಸಿಬಿ ಟೀಂ ಏಳು ಪ್ರತ್ಯೇಕ ಕೇಸ್​ಗಳನ್ನ ಪತ್ತೆ ಮಾಡಿದ್ದು 17 ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತರಿಂದ 7ಕೋಟಿ 8 ಲಕ್ಷದ 83 ಸಾವಿರ ಮೌಲ್ಯದ ಎಂಟು ಮಾದರಿಯ ಮಾದಕ ವಸ್ತುಗಳನ್ನ ಜಪ್ತಿ ಮಾಡಲಾಗಿದೆ.

1MLಗೆ ಹತ್ತು ಸಾವಿರ.. ಸಿರೀಂಜ್​ ಬಳಸಿ ವ್ಯವಹಾರ!

ಬೆಂಗಳೂರಿನ ಬಂಡೆಪಾಳ್ಯದ ಮನೆಯೊಂದಕ್ಕೆ ಎಂಟ್ರಿಕೊಟ್ಟಿದ್ದ ಸಿಸಿಬಿ ಪೊಲೀಸರ ಮುಂದೆ ಮತ್ತಿನ ಖಜಾನೆಯೇ ಓಪನ್​ ಆಗಿದೆ. ಇಂಜೆಕ್ಷನ್‌ ಟ್ಯೂಬ್​ನಲ್ಲಿ ಹಾಶ್ ಆಯಿಲ್ ಕಂಡ ಸಿಸಿಬಿ ಟೀಂ ಒಮ್ಮೆ ದಂಗಾಗಿ ಹೋಗಿದೆ. ಆಂಧ್ರದಿಂದ ಹಾಶ್ ಆಯಿಲ್ ತರಿಸಿ, ಬಂಡೆ ಪಾಳ್ಯದ ಮನೆಯಲ್ಲಿ ಇಂಜೆಕ್ಷನ್‌ ಸಿರೀಂಜ್​ನಲ್ಲಿ ಆಯಿಲ್ ಪ್ಯಾಕ್ ಮಾಡಿ ಖದೀಮರು ದಂಧೆ ನಡೆಸುತ್ತಿರೋದು ತಿಳಿದು ಬಂದಿದೆ. 1MLಗೆ ಹತ್ತು ಸಾವಿರದ ತನಕ ಇವರು ಮಾರಾಟ ಮಾಡಿ ಡೀಲ್​ ಗಿಟ್ಟಿಸಿಕೊಳ್ತಿದ್ರು ಅಂತ ಹೇಳಲಾಗ್ತಿದೆ. ಈ ಖತರ್ನಾಕ್ ಜಾಲದ ಕತೃಗಳಾದ ಓರಿಸ್ಸಾ ಮೂಲದ ಸುರೇಶ್, ಕರ್ನಾಟಕದ ಅಕ್ಷಯ್, ಆದಿತ್ಯ ಮತ್ತು ಸಾಯಿ ಚೈತನ್ಯ ಸೇರಿ ನಾಲ್ವರನ್ನ ಸಿಸಿಬಿ ಟೀಂ ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಹ್ಯಾಶಿಷ್ ಆಯಿಲ್ ಜಪ್ತಿ ಮಾಡಲಾಗಿದೆ.

ಬೆಂಗಳೂರಲ್ಲಿ ಮೊದಲ ಬಾರಿಗೆ ‘ಮೆಫೆಡ್ರೌನ್’ ಪತ್ತೆ!

ಖದೀಮರ ಬಳಿಯಿದ್ದ ಮತ್ತಿನ ಖಜಾನೆಗೆ ಕೈ ಹಾಕಿದ ಸಿಸಿಬಿ ಟೀಂಗೆ ಶಾಕ್​ ಒಂದು ಎದುರಾಗಿತ್ತು. ಬೆಂಗಳೂರಿನಲ್ಲಿ ಮೊದಲ ಬಾರಿಗೆ ಮೆಫೆಡ್ರೌನ್ ಎಂಬ ಡ್ರಗ್ಸ್ ಕಿರಾತಕರ ಖಜಾನೆಯಲ್ಲಿ ಅಡಗಿತ್ತು. ಖದೀಮರ ಬಳಿಯಿದ್ದ 1,800 ಗ್ರಾಂ ಮೆಫೆಡ್ರೌನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸರ ಕೈಗೆ ಬಂಡೆಪಾಳ್ಯದಲ್ಲಿ ತಗಾಲಾಕಿಕೊಂಡ ಫ್ರಾನ್ಸಿಸ್ ಎಂಬಾತ ಮೂಲತಃ ನೈಜೀರಿಯಾದವನಾಗಿದ್ದು, ಬೆಂಗಳೂರಿನಲ್ಲಿ 2012ರಿಂದ ವಾಸವಿದ್ದಾನೆ. ಈ ಒಬ್ಬನ ಬಳಿಯಲ್ಲೇ 3 ಕೋಟಿ 80 ಲಕ್ಷ ಮೌಲ್ಯದ ಡ್ರಗ್ಸ್ ಪತ್ತೆಯಾಗಿದೆ. ಈತ ಐರನ್​ ಟೇಬಲ್​ಲ್ಲಿ ಸ್ಮಗಲ್ ಮಾಡುತ್ತಿದ್ದ ಅಂತ ತಿಳಿದುಬಂದಿದೆ. ಒಮ್ಮೆಲೇ ಐದಾರು ಟೇಬಲ್​ಗಳನ್ನ ಆರ್ಡರ್ ಮಾಡ್ತಿದ್ದ ಈತ, ನಂತರ ಐರನ್ ಟೇಬಲ್ ಪೈಕಿ ಒಂದನ್ನು ಆಲ್ಟರ್ ಮಾಡಿ, ಅದರ ಒಳಗೆ ಡ್ರಗ್ಸ್​ ಪ್ಯಾಕ್ ಮಾಡಿ ಮತ್ತೆ ಹೊಸಾ ರೀತಿ ಪಿನ್ ಮಾಡಿ​ ಕಳಿಸುತಿದ್ದ.

ರಾಜಧಾನಿಯಲ್ಲಿ ಹೋಲ್ ಸೇಲ್ ಆಗಿ ಗಾಂಜಾ ಮಾರಾಟ ಮಾಡ್ತಿದ್ದ ಮೂರು ಜನ ಅರೋಪಿಗಳನ್ನೂ ಸಿಸಿಬಿ ಟೀಂ ಬಂಧಿಸಿದೆ. ಕುನ್ನಾ ಸುನ್ನಾ, ಜಲಂದರ್, ಜಗದೀಶ್ ಬಂಧಿತ ಅರೋಪಿಗಳಾಗಿದ್ದಾರೆ. ಓರಿಸ್ಸಾದಿಂದ ಬೆಂಗಳೂರಿಗೆ ಗಾಂಜಾ ತಂದು ಹೋಲ್ ಸೇಲ್ ರೀತಿಯಲ್ಲಿ ತರುತ್ತಿದ್ದ ಇವರು ನಗರದ ಪೆಡ್ಲರ್ಸ್​ಗಳಿಗೆ ಮಾರಾಟ ಮಾಡ್ತಿದ್ರು ಅನ್ನೋದು ತನಿಖೆ ವೇಳೆ ಗೊತ್ತಾಗಿದೆ. ಕಾರಿನಲ್ಲಿ ಗಾಂಜಾ ಸಾಗಿಸುವಾಗಲೇ ಅರೋಪಿಗಳನ್ನ ಅಡ್ಡಗಟ್ಟಿ ಸಿಸಿಬಿ ಟೀಂ ಅರೆಸ್ಟ್ ಮಾಡಿದೆ.

ಅಲ್ಲದೇ ವಿದ್ಯಾಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಕೋಟಿಗೂ ಅಧಿಕ ಮೌಲ್ಯದ MDMA ಕ್ರಿಸ್ಟಲ್ ಅನ್ನ ಮನೆಯಲ್ಲೇ ಇಟ್ಕೊಂಡಿದ್ದ ತೋರು ಮುಸ್ತಫಾ, ಎನಿಮೋ ಪೀಟರ್​ನನ್ನ ಬಂಧಿಸಿ ಮಾದಕ ವಸ್ತುಗಳನ್ನ ಜಪ್ತಿ ಮಾಡಲಾಗಿದೆ. ಡ್ರಗ್ ಮಾಫಿಯಾ ವಿರುದ್ಧ ಸತತ ಹೋರಾಟ ಮಾಡ್ತಿರೋ ಸಿಸಿಬಿ ಟೀಂ ಮೂರು ವರ್ಷಗಳಿಂದ ಖದೀಮರ ಕಳ್ಳಾಟವನ್ನ ಕಂಟ್ರೋಲ್ ಮಾಡೋದರಲ್ಲಿ ಅಲರ್ಟ್​ ಆಗಿದೆ. ಸಿಸಿಬಿ ಪೊಲೀಸರ ಮಿಂಚಿನ ಕಾರ್ಯಾಚರಣೆ ಬೆಂಗಳೂರು ನಗರದಲ್ಲಿ ಹಬ್ಬಿರೋ ಡ್ರಗ್ಸ್​ ಜಾಲದ ಬೇರುಗಳನ್ನ ಕಿತ್ತು, ಕಿರಾತಕರನ್ನ ಹಡೆಮುರಿ ಕಟ್ಟಲು ಕಾರಣವಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತಿನ ಖಜಾನೆಯನ್ನೇ ಬೇಟೆಯಾಡಿ ಬೆಂಗಳೂರು ಕ್ರೈಂ ಬ್ರ್ಯಾಂಚ್; 1MLಗೆ ಹತ್ತು ಸಾವಿರ.. ಸಿರೀಂಜ್​ ಬಳಸಿ ವ್ಯವಹಾರ!

https://newsfirstlive.com/wp-content/uploads/2023/09/DRUGE.jpg

Load More