/newsfirstlive-kannada/media/post_attachments/wp-content/uploads/2024/08/Timmegowda.jpg)
ಬೆಂಗಳೂರು: ಸಿಸಿಬಿ ಇನ್​​​ಸ್ಪೆಕ್ಟರ್ ತಿಮ್ಮೆಗೌಡ ಆತ್ಮಹತ್ಯೆ ಶರಣಾದ ಘಟನೆ ನಡೆದಿದೆ. ರಾಮನಗರದ ಕಗ್ಗಲಿಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್​​​ಸ್ಪೆಕ್ಟರ್ ತಿಮ್ಮೆಗೌಡ 2003ರ ಬ್ಯಾಚ್ ಆಗಿದ್ದು, ಆನೇಕಲ್ ಪಟಾಕಿ ದುರಂತದಲ್ಲಿ ಅಮಾನತು ಆಗಿದ್ದರು. ಇದರಿಂದ ಬಾರಿ ಖಿನ್ನತೆಗೆ ಒಳಗಾಗಿದ್ದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ತಿಮ್ಮೆಗೌಡರಿಗೆ ಆನೇಕಲ್ ಪಟಾಕಿ ದುರಂತದಲ್ಲಿ ಕೇಸ್​ನಲ್ಲಿ ಕ್ಲೀನ್ ಚಿಟ್ ಸಿಕ್ಕಿತ್ತು. ಅದಾದ ಬಳಿಕ ಸಿಸಿಬಿಗೆ ರಿಪೋರ್ಟ್ ಮಾಡಿಕೊಂಡಿದ್ದರು. ಆದರೀಗ ಇವರ ಸಾವಿಗೆ ಅಮಾನತು ವೇಳೆ ಕಿರುಕುಳದ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ಒಂದೇ ಕುಟುಂಬದ 16 ಮಂದಿ ಸಾವು.. ತನ್ನವರೆಲ್ಲರನ್ನು ಕಳೆದುಕೊಂಡು ಒಬ್ಬಂಟಿಯಾದ ಮನ್ಸೂರ್
ಇವರ ಹಿಂದಿನ ಇನ್​ಸ್ಪೆಕ್ಟರ್ ಪಟಾಕಿ ಅಂಗಡಿ ನಡೆಸಲು ಅವಕಾಶ ಕೊಟ್ಟಿದ್ದರು. ಸೈನ್ ಹಾಕಿ ಅಫ್ರೂವಲ್ ಮಾಡಿದ್ದರು. ಆದರೆ ತಿಮ್ಮೆಗೌಡರು ಅಪ್ರೂವಲ್ ಕೊಟ್ಟಿದ್ದರು ಅಂತ ಅಮಾನತು ಆಗಿದ್ದರು. ಹೀಗಾಗಿ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದ್ದರು.
ಇದನ್ನೂ ಓದಿ: ಭೂಕುಸಿತದಲ್ಲಿ 3 ಬಾರಿ ಮನೆ ಕಳೆದುಕೊಂಡು ಬದುಕುಳಿದ ಮೇರಿಯಮ್ಮ.. ಈ ತಾಯಿಯ ನೋವಿನ ಕತೆಯೇ ವಿಭಿನ್ನ
ಸದ್ಯ ಕ್ಲೀನ್ ಚೀಟ್ ಸಿಕ್ಕರೂ ತಿಮ್ಮೆಗೌಡರು ಖಿನ್ನತೆಯಿಂದ ಹೊರ ಬಂದಿರಲಿಲ್ಲ. ಇಂದು ಬೆಳಗ್ಗೆ ಕಗ್ಗಲಿಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಸಾವಿಗೆ ಇಲಾಖೆಯ ಹಿರಿಯ ಅಧಿಕಾರಿಗಳೇ ಕಾರಣ ಎಂದು ತಿಮ್ಮೆಗೌಡ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us