newsfirstkannada.com

ಸೆಲೆಬ್ರಿಟಿಗಳಿಗೆ ಹುಲಿ ಉಗುರಿನ ಸಂಕಷ್ಟ; ಆರ್ಯವರ್ಧನ್ ಗುರೂಜಿ, ನಾಯಿ ಗಿರಿ ನಿವಾಸದಲ್ಲಿ ಸರ್ಚಿಂಗ್‌!

Share :

26-10-2023

    ಶೂಟ್ ಗಿರಿ @ ನಾಯಿ ಗಿರಿ ಪೆಂಡೆಂಟ್ ಧರಿಸಿರೋ ಫೋಟೋ ವೈರಲ್

    ಆರ್‌.ಆರ್‌ ನಗರದ ಆರ್ಯವರ್ಧನ್ ಗುರೂಜಿ ನಿವಾಸದ ಮೇಲೂ ದಾಳಿ

    ನಿರ್ಮಾಪಕ ಉಮಾಪತಿ ಗೌಡರಿಗೂ ಹುಲಿ ಉಗುರಿನ ಪೆಂಡೆಂಟ್ ಸಂಕಷ್ಟ

ಬೆಂಗಳೂರು: ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಆರೋಪದಲ್ಲಿ ಸಾಲು, ಸಾಲು ಸೆಲೆಬ್ರಿಟಿಗಳು ಸಿಕ್ಕಿ ಬೀಳುತ್ತಿದ್ದಾರೆ. ನಿನ್ನೆ ಹಲವು ಸೆಲೆಬ್ರಿಟಿಗಳು, ಗಣ್ಯರ ಮನೆಗೆ ಹೋಗಿ ಅರಣ್ಯ ಅಧಿಕಾರಿಗಳು ನೋಟಿಸ್ ಕೊಟ್ಟು ಬಂದಿದ್ದರು. ಇಂದೂ ಕೂಡ ಹುಲಿ ಉಗುರಿನ ಪೆಂಡೆಂಟ್‌ ಫೋಟೋ ವೈರಲ್ ಆದ ಮಾಹಿತಿ ಪಡೆದು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಶೂಟ್ ಗಿರಿ @ ನಾಯಿ ಗಿರಿ ಪೆಂಡೆಂಟ್ ಧರಿಸಿರೋ ಫೋಟೋವೊಂದು ವೈರಲ್ ಆಗಿತ್ತು. ಈ ಮಾಹಿತಿ ಆಧರಿಸಿ ಶೂಟ್ ಗಿರಿ ನಿವಾಸದ ಮೇಲೂ ಅರಣ್ಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿ ವೇಳೆ ಶೂಟ್ ಗಿರಿ ಅವರು ಮನೆಯಲ್ಲಿ ಇರಲಿಲ್ಲ. ಹೀಗಾಗಿ ಅರಣ್ಯ ಭವನಕ್ಕೆ ಆಗಮಿಸಿದ್ದ ಶೂಟ್ ಗಿರಿ ಅವರು ಪೆಂಡೆಂಟ್ ಅನ್ನು ಹಸ್ತಾಂತರ ಮಾಡಿ ಹೋಗಿದ್ದಾರೆ. ಈ ವೇಳೆ ಅದು ಹುಲಿ ಉಗುರಿನ ಪೆಂಡೆಂಟ್ ಆಗಿರಲಿಲ್ಲ. ಚಿನ್ನದಿಂದ ಉಗುರಿನ ಮಾದರಿಯಲ್ಲಿ ಮಾಡಲಾಗಿದ್ದ ಪೆಂಡೆಂಟ್ ಎಂದು ಅರಣ್ಯಾಧಿಕಾರಿಗಳಿಗೆ ಶೂಟ್ ಗಿರಿ ಹೇಳಿಕೆ ನೀಡಿದ್ದಾರೆ.

ಆರ್ಯವರ್ಧನ್ ಗುರೂಜಿ ಅವರ ಫೋಟೋ ಕೂಡ ವೈರಲ್ ಆಗಿತ್ತು. ಹೀಗಾಗಿ ಆರ್‌.ಆರ್‌ ನಗರದ ಆರ್ಯವರ್ಧನ್ ಗುರೂಜಿ ನಿವಾಸದ ಮೇಲೂ ಅರಣ್ಯಾಧಿಕಾರಿಗಳು ದಾಳಿ ಮಾಡಿ ಸರ್ಚಿಂಗ್ ನಡೆಸಿದ್ದಾರೆ. ಚಿತ್ರ ನಿರ್ಮಾಪಕ ಉಮಾಪತಿ ಗೌಡ ಅವರು ನ್ಯೂಸ್ ಫಸ್ಟ್ ಚಾನೆಲ್‌ಗೆ ನೀಡಿದ್ದ ಸಂದರ್ಶನದ ಫೋಟೋ ಕೂಡ ವೈರಲ್ ಆಗಿದೆ. ಕುತ್ತಿಗೆಯಲ್ಲಿ ಹುಲಿ ಉಗುರು ಧರಿಸಿರೋ ನಿರ್ಮಾಪಕ ಉಮಾಪತಿ ಗೌಡ ಅವರಿಗೂ ಅರಣ್ಯ ಇಲಾಖೆ ನೋಟಿಸ್ ನೀಡುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

ಸೆಲೆಬ್ರಿಟಿಗಳಿಗೆ ಹುಲಿ ಉಗುರಿನ ಸಂಕಷ್ಟ; ಆರ್ಯವರ್ಧನ್ ಗುರೂಜಿ, ನಾಯಿ ಗಿರಿ ನಿವಾಸದಲ್ಲಿ ಸರ್ಚಿಂಗ್‌!

https://newsfirstlive.com/wp-content/uploads/2023/10/Tiger-Nail-Case.jpg

Load More