newsfirstkannada.com

ಬೆಂಗಳೂರಿನ ಫೇಮಸ್ ಸೆಲೆಬ್ರೆಟಿ ಶ್ವಾನ ಇದು.. ಬರೋಬ್ಬರಿ 20 ಕೋಟಿ ರೂ. ಬೆಲೆ ಬಾಳುವ ಇದರ ಸ್ಪೆಷಾಲಿಟಿ ಏನು?

Share :

26-06-2023

    ಇದು ವಿಶ್ವದ ದುಬಾರಿ ಶ್ವಾನ.. ಇದರ ಹೆಸರೇನು ಗೊತ್ತಾ..?

    ಐಷಾರಾಮಿ ಪ್ರೊಗ್ರಾಂಗೆ ಹೋದರೆ ಸ್ಪೆಷಲ್‌ ಗೆಸ್ಟ್ ಇದೇ

    ಜನರಿಗೆ ಈ ಡಾಗ್ ಮೇಲಿನ​​ ಕ್ರೇಜ್​ ಎಂಥದ್ದು ಗೊತ್ತಾ..?

ಬೆಂಗಳೂರು: ವಿಶ್ವದ ದುಬಾರಿ ಡಾಗ್‌ ಎಂದೇ ಫೇಮಸ್‌ ಆಗಿರೋ ಇದರ ಹೆಸರು ಕಡಬಸ್‌ ಹೈದರ್‌. ಈ ಶ್ವಾನವನ್ನ ಸೋಷಿಯಲ್‌ ಮೀಡಿಯಾಗಳಲ್ಲಿ ನೀವು ನೋಡಿರ್ತೀರಾ. ಕಾಶಿಯನ್‌ ಶೆಫರ್ಡ್ ಜಾತಿಗೆ ಸೇರಿದ ಈ ದುಬಾರಿ ಶ್ವಾನ ಈಗ ಸೆಲೆಬ್ರೆಟಿಯಾಗಿಬಿಟ್ಟಿದೆ. ಬೆಂಗಳೂರಿನ ಯಾವುದೇ ಐಷಾರಾಮಿ ಪ್ರೊಗ್ರಾಂಗೆ ಹೋದರೂ ಈ ಶ್ವಾನ ಸ್ಪೆಷಲ್‌ ಗೆಸ್ಟ್. ಇಂದು ಕೂಡ ಮಲ್ಲೇಶ್ವರಂನ ಖಾಸಗಿ ಕಾರ್ಯಕ್ರಮದಲ್ಲಿ ಈ ದುಬಾರಿ ಶ್ವಾನ ಗೆಸ್ಟ್ ಆಗಿ ಎಂಟ್ರಿ ಕೊಟ್ಟು ಕಮಾಲ್‌ ಮಾಡಿದೆ.

ಸುಮಾರು 20 ಕೋಟಿ ಬೆಲೆ ಬಾಳುತ್ತೆ ಅಂತಾ ಹೇಳಲಾಗ್ತಿರೋ ಈ ಶ್ವಾನಕ್ಕೆ ಎಲ್ಲೇ ಹೋದ್ರು ಭರ್ಜರಿ ಸ್ವಾಗತ ಸಿಗ್ತಿದೆ. ಕೇಕ್‌ ಕತ್ತರಿಸೋದು, ಹಾರ ಹಾಕೋದು ಅಲ್ಲದೇ ಜನರು ಸೆಲ್ಫಿ ತೆಗೆದುಕೊಳ್ಳೋಕೇ ಮುಗಿಬೀಳೋ ರೇಂಜ್‌ಗೆ ಈ ಡಾಗ್‌ ಕ್ರೇಜ್‌ ಸೃಷ್ಟಿಸಿದೆ.

ಈ ಮೊದಲು ದುಬಾರಿ ಬೆಲೆಯ ಶ್ವಾನ ಅಂತಾ ಹವಾ ಸೃಷ್ಟಿಸಿದ್ದ ಹೈದರ್‌, ಈಗ ಸಿಲಿಕಾನ್‌ ಸಿಟಿಯಲ್ಲಿ ಸೆಲೆಬ್ರೆಟಿಯಾಗಿ ಮಿಂಚುತ್ತಿದ್ದಾನೆ. ದೇಶ-ವಿದೇಶಗಳಲ್ಲಿ ಡಿಮ್ಯಾಂಡ್‌ ಪಡೆದಿರೋ ಹೈದರ್‌ ಯಾರೇ ಫೋಟೋ ತೆಗೆದುಕೊಂಡೂ ಯಾರೇ ಮೈ ಸವರಿದ್ರು ಚೂರು ಬೇಜಾರ್‌ ಮಾಡಿಕೊಳ್ಳದೇ ಫೋಸ್‌ ಕೊಡೋ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿನ ಫೇಮಸ್ ಸೆಲೆಬ್ರೆಟಿ ಶ್ವಾನ ಇದು.. ಬರೋಬ್ಬರಿ 20 ಕೋಟಿ ರೂ. ಬೆಲೆ ಬಾಳುವ ಇದರ ಸ್ಪೆಷಾಲಿಟಿ ಏನು?

https://newsfirstlive.com/wp-content/uploads/2023/06/dog-bangaluru-2.jpg

Load More