newsfirstkannada.com

ವಿಪಕ್ಷ ನಾಯಕನಿಲ್ಲದೆ ಅನಾಥವಾದ ಕರ್ನಾಟಕ ಬಿಜೆಪಿ; ಅಸಲಿ ಕಾರಣವೇನು?

Share :

04-07-2023

    ವಿಪಕ್ಷ ನಾಯಕನಿಲ್ಲದೆ ಕರ್ನಾಟಕ ಬಿಜೆಪಿ ಅನಾಥ

    ಕರ್ನಾಟಕ ಬಿಜೆಪಿ ಬಗ್ಗೆ ಕೇಂದ್ರ ನಾಯಕರಿಗೆ ನಿರ್ಲಕ್ಷ್ಯ

    ಸದನವೂ ವಿಪಕ್ಷ ನಾಯಕನಿಲ್ಲದೆ ಫುಲ್​ ಖಾಲಿ ಖಾಲಿ

ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ಬದಲಾಗಿ 52 ದಿನಗಳು ಕಳೆಯಿತು. ಸಿದ್ದು ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳು ಉರುಳಿದೆ. ಈಗಾಗಲೇ ಬಜೆಟ್‌ ಅಧಿವೇಶನವೂ ಪ್ರಾರಂಭವಾಗಿದೆ. ಆದ್ರೆ, ಬಿಜೆಪಿಗೆ ಇನ್ನು ಶಾಸಕಾಂಗ ಪಕ್ಷದ ನಾಯಕನೇ ಸಿಕ್ಕಿಲ್ಲ. ಪ್ರತಿಪಕ್ಷ ನಾಯಕನ ಸ್ಥಾನ ಅಲಂಕರಿಸುವ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮತ್ತಷ್ಟು ಕಗ್ಗಂಟಾಗಿದೆ. ಅಧಿವೇಶನ ಆರಂಭಕ್ಕೂ ಮುನ್ನ ವಿಪಕ್ಷ ನಾಯಕನ ಆಯ್ಕೆ ಆಗುತ್ತದೆ ಎಂಬ ನಿರೀಕ್ಷೆ ಸುಳ್ಳಾಗಿದೆ.

ವಿಪಕ್ಷ ನಾಯಕನ ಆಯ್ಕೆಯಲ್ಲಿ ಸಸ್ಪೆನ್ಸ್‌ ಕಂಟಿನ್ಯೂ ಆಗಿದೆ. ಚುನಾವಣೆಯಲ್ಲಿ ಸೋತ ಬಿಜೆಪಿ, ಈಗ ವಿಪಕ್ಷ ನಾಯಕನ ಆಯ್ಕೆಯಲ್ಲೂ ಸೋತಿದೆ. ಈಗಾಗಲೇ ಬಜೆಟ್ ಅಧಿವೇಶನ ಆರಂಭ ಆಗಿದ್ದು, ಜನರ ಆಶೋತ್ತರಗಳ ಪರ ವಕಾಲತ್ತು ವಹಿಸುವ ವಿಪಕ್ಷ ನಾಯಕನ ಆಯ್ಕೆ ಕಗ್ಗಂಟಾಗಿದೆ. ಇತ್ತೀಚೆಗೆ ದೆಹಲಿ ದೊರೆಗಳ ಮನೆಯಲ್ಲಿ ಸುಮಾರು ಹೊತ್ತು ಸಭೆ ನಡೆದರೂ ನಿರ್ಧಾರ ಕೈಗೊಳ್ಳಲಾಗದೆ ಕೈಗಳು ಸೋತಿವೆ. ಬಿಜೆಪಿ ನಡೆ ಪ್ರಜಾಪ್ರಭುತ್ವವನ್ನೇ ಅಣಕಿಸುವಂತಿದೆ.

ವಿಪಕ್ಷ ನಾಯಕನ ಆಯ್ಕೆ ಕಗ್ಗಂಟಾಗಿರೋದು ಯಾಕೆ?

ಅಧಿವೇಶನ ಆರಂಭವಾಯ್ತು. ಸದನದಲ್ಲಿ ರಾಜ್ಯಪಾಲರ ಭಾಷಣವೂ ಮುಗಿದೋಯ್ತು. ಆದ್ರೆ, ಬಿಜೆಪಿಯಲ್ಲಿನ ಗೊಂದಲ ಮಾತ್ರ ಬಗೆಹರಿಯುವ ಲಕ್ಷಣ ಕಾಣಿಸ್ತಿಲ್ಲ. ಪಕ್ಷದ ಲೀಡರ್ ಇಲ್ಲದೆಯೇ ಅಧಿವೇಶನಕ್ಕೆ ಅವಮಾನದಿಂದಲೇ ಹಾಜರಾತಿ ಹಾಕಿದ ಬಿಜೆಪಿ ಪಡೆ, ಕಾಂಗ್ರೆಸ್​​ನ ಅಪಹಾಸ್ಯಕ್ಕೆ ಗುರಿ ಆಗಿದೆ. ಅಷ್ಟಕ್ಕೂ ವಿಪಕ್ಷ ನಾಯಕರ ಆಯ್ಕೆ ಇಷ್ಟೊಂದು ಕಗ್ಗಂಟಾಗಿದ್ದು ಯಾಕೆ ಅಂತ ಶೋಧಕ್ಕಿಳಿದ್ರೆ, ಮತ್ತದೇ ಬಣ ರಾಜಕಾರಣವೇ ವಿಜೃಂಭಿಸುತ್ತಿದೆ.

ರಾಜ್ಯಪಾಲರು ಜಂಟಿ ಸದನ ಉದ್ದೇಶಿಸಿ ಭಾಷಣ ಮುಗಿಸಿದ್ದಾರೆ. ಬಳಿಕ ಮೃತ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಕೆ ಆಗಿದೆ. ಆದ್ರೆ, ಅಧಿವೇಶನದ ಅಧಿಕೃತ ಕಾರ್ಯಕಲಾಪಗಳು ಇಂದು ಆರಂಭವಾಗ್ತಿದ್ದು, ವಿಪಕ್ಷ ನಾಯಕನ ಆಯ್ಕೆ ಮಾಡದೆ ಪರಿಸ್ಥಿತಿ ಮುಜುಗರಕ್ಕೆ ತಳ್ಳಿದೆ. ಇಷ್ಟಕ್ಕೆಲ್ಲಾ ಮಹಾರಾಷ್ಟ್ರದ ಕ್ಷಿಪ್ರ ಘಟನೆಗಳು ಕಾರಣ ಅಂತ ಹೇಳಲಾಗ್ತಿದ್ರು, ಒಂದು ಸ್ಥಾನಕ್ಕೆ ಇಷ್ಟು ಸಮಯಬೇಕಾ ಅನ್ನೋ ಪ್ರಶ್ನೆ ಎದ್ದಿದೆ.

ರಾಜ್ಯ ಬಿಜೆಪಿ ಬಗ್ಗೆ ಕಮಲ ಹೈಕಮಾಂಡ್​​ ದಿವ್ಯ ನಿರ್ಲಕ್ಷ್ಯ ತೋರ್ತಿದ್ಯಾ?

ವಿಪಕ್ಷ ನಾಯಕರ ಆಯ್ಕೆಗೆ ಇಬ್ಬರು ನಾಯಕರನ್ನ ನೇಮಕ ಮಾಡಿರುವ ಬಿಜೆಪಿ ಹೈಕಮಾಂಡ್, ಇದಕ್ಕೆಲ್ಲ ಎರಡು ದಿನ ಕಾಲಾವಕಾಶ ಬೇಕಾಗುತ್ತೆ ಎಂದು ಹೇಳಿದೆ. ಅಚ್ಚರಿ ಅಂದ್ರೆ ಈಗಾಗಲೇ ಆಗಮಿಸಿದ್ದ ವೀಕ್ಷಕರು ಇಂದು ಆಗಮಿಸುತ್ತಿದ್ದಾರೆ. ಶಾಸಕಾಂಗ ಪಕ್ಷ ಸಭೆ ನಡೆಸಿ, ಶಾಸಕರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಆ ಬಳಿಕ ವರಿಷ್ಠರಿಗೆ ಇಬ್ಬರೂ ವೀಕ್ಷಕರು ವರದಿ ನೀಡಲಿದ್ದಾರೆ. ನಂತರ ಆ ವರದಿ ಆಧಾರದ ಮೇಲೆ ವಿಪಕ್ಷ ನಾಯಕ ತೀರ್ಮಾನ ಆಗಲಿದೆ ಎಂದು ಗೊತ್ತಾಗಿದೆ.

ಭಾನುವಾರ ರಾತ್ರಿ ಅಮಿತ್​​​ ಶಾ, ನಡ್ಡಾ ಜೊತೆ ನಡೆಸಿದ್ದ ಮಾಜಿ ಸಿಎಂ ಯಡಿಯೂರಪ್ಪ ಈಗ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ವೇಳೆ ಮಾತನಾಡಿರುವ ಬಿಎಸ್​​ವೈ, ಯಾವುದೇ ಗೊಂದಲಗಳಿಲ್ಲ. ಸದ್ಯದಲ್ಲೇ ವಿಪಕ್ಷ ನಾಯಕನ ಆಯ್ಕೆ ತೀರ್ಮಾನ ಆಗುತ್ತೆ ಎಂದು ಹಳೇ ಮಾತಿಗೆ ಒಗ್ಗರಣೆ ಹಾಕಿದ್ದಾರೆ.

ವಿಪಕ್ಷ ನಾಯಕನ ವಿಳಂಬಕ್ಕೆ ಕಾಂಗ್ರೆಸ್​​ ಲೇವಡಿ!

ವಿರೋಧ ಪಕ್ಷದ ನಾಯಕನ ಸ್ಥಾನದ ವಿಚಾರವನ್ನ ಕಾಂಗ್ರೆಸ್ ಅಸ್ತ್ರವನ್ನಾಗಿ ಬಳಸಿಕೊಂಡಿದೆ. ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಟ್ವೀಟ್‌ ಮಾಡಿ ಕಾಂಗ್ರೆಸ್‌ ಲೇವಡಿ ಮಾಡಿದೆ.

‘ಸರ್ಕಾರ ರಚನೆ ಆಯ್ತು, ನಮ್ಮ ಸರ್ಕಾರ ಟೆಕಾಫ್ ಆಗಿ ಹಲವು ದಿನಗಳಾಯ್ತು. ನಮ್ಮ ಗ್ಯಾರಂಟಿ ಯೋಜನೆಗಳ ಜಾರಿಯೂ ಆಯ್ತು. ಡಿಯರ್​ ಕರ್ನಾಟಕ ಬಿಜೆಪಿ ಸದನವೂ ಪ್ರಾರಂಭವಾಯ್ತು. ಎಲ್ಲಿ ನಿಮ್ಮ ವಿರೋಧ ಪಕ್ಷದ ನಾಯಕ? ಬಿಜೆಪಿಗೆ ವಿರೋಧ ಪಕ್ಷದ ನಾಯಕನ ಗ್ಯಾರಂಟಿಯನ್ನೂ ಕೊಡಲಾಗುತ್ತಿಲ್ಲ ಎಂದರೆ ಎಂತಹ ಹಿನಾಯ ಸ್ಥಿತಿಯಲ್ಲಿದೆ’ ಎಂದು ಕಾಂಗ್ರೆಸ್​ ವ್ಯಂಗ್ಯವಾಡಿದೆ.

ಒಟ್ಟಾರೆ, ವಿಪಕ್ಷ ನಾಯಕನ ಆಯ್ಕೆಗೆ ಬಿಜೆಪಿ ನಾಯಕತ್ವ ಒದಾಡುತ್ತಿರುವುದು ವಿಪರ್ಯಾಸ. ಬಲಿಷ್ಠ ಹೈಕಮಾಂಡ್​ ಹೊಂದಿರುವ ಬಿಜೆಪಿ, ನಿತ್ಯವೂ ಕಥೆ ಕಟ್ಟುತ್ತಿದೆ. ಬಿಜೆಪಿ ಅಸಹಾಯಕತೆ ಕಾಂಗ್ರೆಸ್​​ಗೆ ಅಸ್ತ್ರವಾಗಿದೆ. ಅಷ್ಟಕ್ಕೂ ಪ್ರಜಾಪ್ರಭುತ್ವದ ಸೊಗಸೇ ಸದನ ನಾಯಕ ಮತ್ತು ವಿಪಕ್ಷ ನಾಯಕ. ಆದ್ರೆ, ಬಿಜೆಪಿಯ ವಿಳಂಬ ನೀತಿ, ಈ ಸೊಗಸನ್ನೇ ಹಾಳು ಗೆಡವಿದೆ ಎಂಬ ಮಾತು ಕೇಳಿ ಬರ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಪಕ್ಷ ನಾಯಕನಿಲ್ಲದೆ ಅನಾಥವಾದ ಕರ್ನಾಟಕ ಬಿಜೆಪಿ; ಅಸಲಿ ಕಾರಣವೇನು?

https://newsfirstlive.com/wp-content/uploads/2023/07/BSY_Bommai.jpg

Load More