ಬೆಳಗ್ಗೆಯಿಂದ ಸಂಜೆಯವರೆಗೆ ಒಂದು ವಿದ್ಯುತ್ ದರ ನಿಗದಿ ಆಗುತ್ತೆ
ಸಂಜೆಯಿಂದ ನಾಳೆ ಬೆಳಗ್ಗೆಯವರೆಗೆ ಮತ್ತೊಂದು ಕರೆಂಟ್ ರೇಟ್ ನಿಗದಿ
ಕಣ್ಣಾಮುಚ್ಚಾಲೆಯ ಈ ವ್ಯವಸ್ಥೆ ಜಾರಿಯಾದ್ರೆ ಕರೆಂಟ್ ಬಿಲ್ ಹೆಚ್ಚಾಗುತ್ತಾ?
ನವದೆಹಲಿ: ರಾಜ್ಯದಲ್ಲಿ ಕರೆಂಟ್ ಬಿಲ್ ಹೆಚ್ಚಳ ಸಾಮಾನ್ಯ ಜನರಿಗೆ ಅಕ್ಷರಶಃ ಶಾಕ್ ಆಗುವಂತೆ ಮಾಡಿದೆ. ಡಬಲ್ ರೇಟ್‌ನ ಬಿಲ್ ನೋಡಿ ಹೇಗಪ್ಪಾ ಕಟ್ಟೋದು ಅಂತಾ ಚಿಂತೆ ಮಾಡುತ್ತಿದ್ದಾರೆ. ಈ ಕರೆಂಟ್ ಶಾಕ್‌ನ ಬೆನ್ನಲ್ಲೇ ದೇಶದ ವಿದ್ಯುತ್ ದರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗ್ತಿದೆ. ಹಗಲಿಗೊಂದು ವಿದ್ಯುತ್ ದರ, ರಾತ್ರಿಗೊಂದು ಕರೆಂಟ್ ರೇಟ್ ಅನ್ನು ಫಿಕ್ಸ್ ಮಾಡಲು ಕೇಂದ್ರ ಸರ್ಕಾರ ಮೆಗಾ ಪ್ಲಾನ್ ಮಾಡಿದೆ.
ಏನಿದು ಹಗಲು, ರಾತ್ರಿಯ ದರ?
ದೇಶದ ವಿದ್ಯುತ್ ದರ ವ್ಯವಸ್ಥೆಯಲ್ಲಿ ಎರಡು ಮಹತ್ವದ ಬದಲಾವಣೆ ಮಾಡಲಾಗ್ತಿದೆ. ದೇಶಾದ್ಯಂತ ಟೈಮ್ ಆಫ್ ಡೇ ದರ ವ್ಯವಸ್ಥೆ ಜಾರಿಗೆ ತರಲಾಗ್ತಿದ್ದು, ಇನ್ಮುಂದೆ ದಿನಪೂರ್ತಿ ಒಂದೇ ವಿದ್ಯುತ್ ದರ ಇರಲ್ಲ. ಅಂದ್ರೆ ಹಗಲಿಗೊಂದು ವಿದ್ಯುತ್ ದರ, ಸಂಜೆಯಿಂದ ನಾಳೆ ಬೆಳಗಾಗುವರೆಗೂ ಮತ್ತೊಂದು ದರ ನಿಗಧಿಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ.
ದಿನದ ಸಮಯದ ಆಧಾರದ ಮೇಲೆ ವಿದ್ಯುತ್ ದರ ನಿಗದಿ ಮಾಡಲಾಗ್ತಿದೆ. ಅಂದರೆ ಬೆಳಗ್ಗೆಯಿಂದ ಸಂಜೆಯವರೆಗೆ ಸಾಮಾನ್ಯ ದರಕ್ಕಿಂತ ಶೇಕಡಾ 10-20 ರಷ್ಟು ಕಡಿಮೆ ದರ ನಿಗದಿಯಾಗಲಿದೆ. ಪೀಕ್ ಸಮಯದಲ್ಲಿ ಅಂದ್ರೆ ಸಂಜೆಯ ಬಳಿಕ ಶೇಕಡಾ 10 ರಿಂದ 20 ರಷ್ಟು ಹೆಚ್ಚಿನ ದರ ನಿಗದಿಯಾಗಲಿದೆ.
ಬೆಳಗ್ಗೆಯಿಂದ ಸಂಜೆವರೆಗೂ ಸೋಲಾರ್ ವಿದ್ಯುತ್ ಉತ್ಪಾದನೆಗೆ ಅವಕಾಶ ಇರುತ್ತದೆ. ಹೀಗಾಗಿ ಸೋಲಾರ್ ವಿದ್ಯುತ್ ಉತ್ಪಾದನೆಯ ಅವಧಿಯಲ್ಲಿ ಕಡಿಮೆ ವಿದ್ಯುತ್ ದರ ನಿಗದಿ ಮಾಡಲಾಗ್ತಿದೆ. ನಾನ್ ಸೋಲಾರ್ ವಿದ್ಯುತ್ ಉತ್ಪಾದನೆ ಅವಧಿ ಅಂದ್ರೆ ಕತ್ತಲಾಗುತ್ತಿದ್ದಂತೆ ಥರ್ಮಲ್, ಹೈಡ್ರೋ ಪವರ್‌ನಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತೆ. ಹೀಗಾಗಿ ಹಗಲಿಗೊಂದು ವಿದ್ಯುತ್ ದರ, ಸಂಜೆಯಿಂದ ನಾಳೆ ಬೆಳಗಾಗುವರೆಗೂ ಮತ್ತೊಂದು ದರ ನಿಗಧಿಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಹೊಸ ವಿದ್ಯುತ್ ದರ ವ್ಯವಸ್ಥೆಯು ಗ್ರಾಹಕರು ಹಾಗೂ ವಿದ್ಯುತ್ ವ್ಯವಸ್ಥೆ ಇಬ್ಬರಿಗೂ ಅನುಕೂಲವಾಗಲಿದೆ.
ಹೊಸ ವಿದ್ಯುತ್ ದರ ಜಾರಿ ಯಾವಾಗ?
ವಿದ್ಯುತ್ ದರ ವ್ಯವಸ್ಥೆಯಲ್ಲಿ ತಂದಿರುವ ಈ ಕ್ರಾಂತಿಕಾರಕ ಬದಲಾವಣೆ ಈಗಲೇ ಜಾರಿಗೆ ಬರುತ್ತಿಲ್ಲ. ಕೇಂದ್ರದ ಇಂಧನ ಖಾತೆ ಸಚಿವ ಆರ್.ಕೆ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 2024ರ ಏಪ್ರಿಲ್ 1ರಿಂದ ಹೊಸ ದರ ವ್ಯವಸ್ಥೆ ಜಾರಿಯಾಗ್ತಿದೆ. ಕಮರ್ಷಿಯಲ್, ಕೈಗಾರಿಕಾ ವಿದ್ಯುತ್ ಬಳಕೆದಾರರಿಗೆ 2024 ರ ಏಪ್ರಿಲ್ 1ರಿಂದ ಜಾರಿಯಾಗ್ತಿದೆ. ಗೃಹ ವಿದ್ಯುತ್ ಬಳಕೆದಾರರಿಗೆ ಏಪ್ರಿಲ್ 1, 2025 ರಿಂದ ಹೊಸ ದರ ಜಾರಿ ಆಗುತ್ತಿದೆ. ಸ್ಮಾರ್ಟ್ ಮೀಟರ್ ಆಳವಡಿಸಿಕೊಂಡವರಿಗೆ ತಕ್ಷಣದಿಂದಲೇ ಜಾರಿ ಆಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
Central Government Amends Electricity (Rights of Consumers) Rules, 2020 by Introducing Time of Day (ToD) Tariff and Simplification of Smart Metering rules
Power Tariff to be 20% less during Solar Hours, 10%-20% Higher during Peak Hours; Consumers to benefit from effective…
— PIB India (@PIB_India) June 23, 2023