newsfirstkannada.com

ವಾಹನ ಮಾಲೀಕರಿಗೆ ಬಿಗ್​​ ಶಾಕ್; ಕೇಂದ್ರದಿಂದ ಹೊಸ ರೂಲ್ಸ್​; ಫಾಲೋ ಮಾಡದಿದ್ರೆ ಬೀಳುತ್ತೆ ದಂಡ

Share :

Published September 14, 2023 at 6:12am

Update September 14, 2023 at 6:18am

    ಹಳೇ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯ

    ನ.17ಕ್ಕೆ ಡೆಡ್​ಲೈನ್​ ಕೊಟ್ಟಿರೋ ರಾಜ್ಯ ಸಾರಿಗೆ ಇಲಾಖೆ

    OME ಗೆ ನಂಬರ್​ ಪ್ಲೇಟ್​ ತಯಾರಿಸಲು ಪರ್ಮಿಷನ್​

ಬೆಂಗಳೂರು: ಹೈ ಸೆಕ್ಯೂರಿಟಿ ನಂಬರ್​ ಪ್ಲೇಟ್​. ಇದನ್ನು ಪ್ರತಿ ವಾಹನ ಮಾಲೀಕರು ಕಡ್ಡಾಯವಾಗಿ ಬಳಸಿಕೊಳ್ಳಲೇಬೇಕು. ಇಲ್ಲದೇ ಹೋದ್ರೆ ಇದಕ್ಕೆ ಭಾರೀ ದಂಡ ಕೊಡಲೇಬೇಕು. ಆದರೆ, ಈಗ ಕರ್ನಾಟಕ ವಾಹನ ನಂಬರ್ ಪ್ಲೇಟ್ ತಯಾರಕರು ಮತ್ತು ಮಾರಾಟಗಾರರ ಸಂಘ ಸಿಡಿದೆದ್ದಿದೆ.

ಯಾರೇ ಆಗ್ಲಿ ರಸ್ತೆ ಮೇಲೆ ತಮ್ ತಮ್ ವಾಹನಗಳನ್ನ ತರಬೇಕು ಅಂದ್ರೆ ಮೊದಲು ಆರ್ಟಿಒನಲ್ಲಿ ರಿಜಿಸ್ಟ್ರೇಷನ್ ಮಾಡಿಸಿ ನಂಬರ್ ಪ್ಲೇಟ್ ಹಾಕಿಸಿಕೊಳ್ಳಬೇಕು. ಆದ್ರೆ ಈಗ ಈ ನಂಬರ್ ಪ್ಲೇಟ್ ವಿಚಾರ ಒಂದಷ್ಟು ಗೊಂದಲಗಳಿಗೆ ಕಾರಣವಾಗಿದೆ.
ಹಳೆಯ ವಾಹನಗಳಿಗೆ ಅಂದ್ರೆ ಏಪ್ರಿಲ್ 1, 2019ಕ್ಕೂ ಮುನ್ನ ನೋಂದಣಿ ಆಗಿರುವ ವಾಹನಗಳಿಗೆ HSRP ನಂಬರ್ ಪ್ಲೇಟ್ ಹಾಕಬೇಕು ಅಂತ ಕೇಂದ್ರ ಸರ್ಕಾರ ಆದೇಶ ಮಾಡಿದೆ.

ಈ ಬಗ್ಗೆ ರಾಜ್ಯ ಸಾರಿಗೆ ಇಲಾಖೆಯೂ ಆದೇಶ ಮಾಡಿದ್ದು ನವೆಂಬರ್ 17ಕ್ಕೆ ಡೆಡ್ ಲೈನ್ ನೀಡಿದೆ. ಆದ್ರೆ ಈ ನಂಬರ್ ಪ್ಲೇಟ್ ತಯಾರಿಸಲು OEM ಅಂದ್ರೆ original equipment manufacturers ಬಳಿ ಹಾಗೇ ಅವರ ಡೀಲರ್ಸ್ ಹತ್ತಿರ ಮಾತ್ರ ನಂಬರ್ ಪ್ಲೇಟ್ ಹಾಕಲು ಅವಕಾಶವನ್ನ ನೀಡಿದೆ. ಸದ್ಯ ಇಲಾಖೆಯ ಈ ನಿರ್ಧಾರ ನಂಬರ್ ಪ್ಲೇಟ್ ತಯಾರಕರು ಮತ್ತು ಮಾರಾಟಗಾರರ ಸಂಘ ಸಿಡಿಮಿಡಿ ಗೊಳ್ಳುವಂತೆ ಮಾಡಿದ್ದು, ಇದ್ರಿಂದ ಸುಮಾರು 25 ಸಾವಿರ ಕುಟುಂಬಗಳು ಬೀದಿಗೆ ಬರುವ ಸಾಧ್ಯತೆ ಇದೆ ಅಂತ ನಂಬರ್ ಪ್ಲೇಟ್ ತಯಾರಕರು ಆತಂಕ ವ್ಯಕ್ತಪಡಿಸ್ತಿದ್ದಾರೆ.

ಏನಿದು HSRP?

HSRP ಅಂದ್ರೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಎಂದರ್ಥ. ವಾಹನಗಳ ನಂಬರ್ ಪ್ಲೇಟ್ನಲ್ಲೇ ಈ ತಂತ್ರಜ್ಞಾನ ಅಳವಡಿಕೆ ಮಾಡಲಾಗುತ್ತೆ. ಈ ತಂತ್ರಜ್ಞಾನದಿಂದ ವಾಹನ ಕಳ್ಳತನ, ಕದ್ದ ವಾಹನ ಬಳಸಿ ಮಾಡೋ ಕೃತ್ಯಗಳನ್ನು ತಡೆಯಲು ಸಹಾಯವಾಗುತ್ತೆ. ಜೊತೆಗೆ ಕಾನೂನು ಉಲ್ಲಂಘನೆ ಪ್ರಕರಣಗಳನ್ನು ಬೇಧಿಸಲು ಅನುಕೂಲಗಲಿದೆ. HSRP ನಂಬರ್ ಪ್ಲೇಟ್ ಶಾಶ್ವತ ಗುರುತಿನ ನಂಬರ್ ಒದಗಿಸುತ್ತದೆ. ಇನ್ನೂ ಈ ತಂತ್ರಜ್ಞಾನ ಅಳವಡಿಸಿರೋ ವಾಹನ ರಸ್ತೆಯಲ್ಲಿ ಸಂಚರಿಸುವಾಗಲೇ ವಾಹನವನ್ನು ಗುರುತಿಸಬಹುದು. ಇನ್ನೂ ಈ ನಂಬರ್‌ ಪ್ಲೇಟ್‌ಗಳಲ್ಲಿ ಲೇಸರ್ ತಂತ್ರಜ್ಞಾನದ ಅಳವಡಿಕೆಯೂ ಮಾಡಲಾಗಿರುತ್ತದೆ.

ನವೆಂಬರ್ ಒಳಗಡೆ HSRP ಅಳವಡಿಕೆ ಮಾಡದೇ ಇದ್ರೆ ದಂಡಾಸ್ತ್ರ ಪ್ರಯೋಗ ಮಾಡ್ತೀವಿ ಅಂತ ಸಾರಿಗೆ ಇಲಾಖೆ ತಿಳಿಸಿದೆ. ಆದ್ರೆ ಈ ಪ್ಲೇಟ್ಗಳ ತಯಾರಿಕೆಗೆ ಮಾತ್ರ ಕೆಲವೇ ಕೆಲವು ಕಂಪನಿಗಳಿಗೆ ಅನುಮತಿ ಕೊಟ್ಟಿರೋದು ಎಷ್ಟು ಸರಿ ಅನ್ನೋದು ನಂಬರ್ ಪ್ಲೇಟ್ ತಯಾರಕರ ಪ್ರಶ್ನೆ. ಇದಕ್ಕೆ ಸರ್ಕಾರದ ಉತ್ತರ ಏನಾಗಿರುತ್ತೆ ಅನ್ನೋದನ್ನ ಕಾದು ನೋಡ್ಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾಹನ ಮಾಲೀಕರಿಗೆ ಬಿಗ್​​ ಶಾಕ್; ಕೇಂದ್ರದಿಂದ ಹೊಸ ರೂಲ್ಸ್​; ಫಾಲೋ ಮಾಡದಿದ್ರೆ ಬೀಳುತ್ತೆ ದಂಡ

https://newsfirstlive.com/wp-content/uploads/2023/07/Traffic_1.jpg

Load More