ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಡೀಪ್ ಫೇಕ್ ವಿಡಿಯೋ
ಇನ್ಸ್ಟಾ, ಫೇಸ್ಬುಕ್, ಟ್ವಿಟರ್ ಮತ್ತು ಯುಟ್ಯೂಬ್ಗೆ ಖಡಕ್ ಎಚ್ಚರಿಕೆ
‘24 ಗಂಟೆಯಲ್ಲಿ ವೈರಲ್ ಆದ ವಿಡಿಯೋ ಡಿಲೇಟ್ ಆಗಬೇಕು’
ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕೇಂದ್ರ ಸರ್ಕಾರ ಸೋಷಿಯಲ್ ಮೀಡಿಯಾ ಫ್ಲಾಟ್ ಫಾರ್ಮ್ಗಳಿಗೆ ಖಡಕ್ ಎಚ್ಚರಿಕೆ ನೀಡಿದೆ. ಶೀಘ್ರವೇ ವೈರಲ್ ಆದಂತ ಡೀಪ್ ಫೇಕ್ ವಿಡಿಯೋವನ್ನು 24 ಗಂಟೆ ಒಳಗೆ ಇನ್ಸ್ಟಾ, ಫೇಸ್ಬುಕ್, ಟ್ವಿಟರ್ ಮತ್ತು ಯುಟ್ಯೂಬ್‌ಗಳಲ್ಲಿ ಡಿಲೇಟ್ ಮಾಡಬೇಕು ಎನ್ನಲಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಈ ಬಗ್ಗೆ ಅಧಿಕೃತ ಆದೇಶ ನೀಡಿದೆ.
ಸೋಷಿಯಲ್ ಮೀಡಿಯಾದಲ್ಲಿ ಡೀಪ್ ಫೇಕ್ ವಿಡಿಯೋ ವೈರಲ್ ಆದ ಬಳಿಕ ಟೆಕ್ನಾಲಜಿ ಎಷ್ಟೊಂದು ಅಪಾಯಕಾರಿ ಎನ್ನುವುದು ಮನವರಿಕೆಯಾಗಿದೆ. ರಶ್ಮಿಕಾ ವಿಡಿಯೋ ವೈರಲ್ ಬೆನ್ನಲ್ಲೇ ಅಮಿತಾಬ್ ಬಚ್ಚನ್ ಸೇರಿದಂತೆ ಪ್ರಮುಖರು ಕ್ರಮ ತೆಗೆದುಕೊಳ್ಳಿ ಎಂದು ಹೇಳಿದ್ದರು. ಕೇಂದ್ರ ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಕೂಡ ಡೀಪ್ ಫೇಕ್ ತುಂಬಾ ಅಪಾಯಕಾರಿ ಹಾಗೂ ತಪ್ಪು ಮಾಹಿತಿಯನ್ನು ಸೋಷಿಯಲ್ ಮೀಡಿಯಾದ ಮೂಲಕ ನೀಡುವ ತಂತ್ರಜ್ಞಾನವಾಗಿದೆ ಎಂದು ಹೇಳಿದ್ದರು.
ಈ ಬಗ್ಗೆ ಸ್ವತಃ ರಶ್ಮಿಕಾ ಕೂಡ ಬೇಸರ ವ್ಯಕ್ತಪಡಿಸಿ ಒಂದು ಪೋಸ್ಟ್ ಅನ್ನು ಶೇರ್ ಮಾಡಿದ್ದರು. ಇದು ಕೇವಲ ನನಗೆ ಮಾತ್ರವಲ್ಲ, ಇಡೀ ಮಹಿಳೆಯರಿಗೆ ಅಪಾಯವನ್ನು ಉಂಟು ಮಾಡಬಹುದು ಎಂದಿದ್ದರು. ಸದ್ಯ ಆರ್ಟಿಫಿಶಿಯಲ್ ಇಂಟಲಿಜೆನ್ಸ್ನಿಂದ ರೆಡಿ ಮಾಡಿದ ಡೀಪ್ ಫೇಕ್ ವಿಡಿಯೋ ಬಗ್ಗೆ ದೇಶಾದ್ಯಂತ ಭಾರೀ ಚರ್ಚೆಯಾಗುತ್ತಿದೆ. ಈ ವೈರಲ್ ವಿಡಿಯೋ ಸಂಚಲನ ಸೃಷ್ಟಿಸಿದ ಮೇಲೆ ಕೇಂದ್ರ ಸರ್ಕಾರ ಇದರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ