ಅಭ್ಯಾಸ ಪಂದ್ಯದ ಜರ್ಸಿ ಕೇಸರಿ ಬಣ್ಣದ್ದಾಗಿದೆ
‘ಆಟಗಾರರು ನೀಲಿ ಬಟ್ಟೆ ಧರಿಸಲು ಹೋರಾಡಿದ್ದರು’
ವಿಶ್ವಕಪ್ ವಿನ್ನರ್ ಬಗ್ಗೆ ಭವಿಷ್ಯ ನುಡಿದ ದೀದಿ
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಭಾರತೀಯ ಪುರುಷರ ಕ್ರಿಕೆಟ್ ತಂಡದ ಅಭ್ಯಾಸದ ವೇಳೆ ತೊಡುವ ಜೆರ್ಸಿಯನ್ನು ಕೇಸರಿಕರಣ ಮಾಡುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಕೋಲ್ಕತ್ತಾದ ಪೋಸ್ಟಾ ಬಜಾರ್‌ನಲ್ಲಿ ಜಗದ್ಧಾತ್ರಿ ಪೂಜೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಬಿಜೆಪಿಯವರು ಎಲ್ಲವನ್ನೂ ಕೇಸರಿ ಬಣ್ಣವಾಗಿ ಪರಿವರ್ತಿಸುತ್ತಿದ್ದಾರೆ. ನಮ್ಮ ಕ್ರಿಕೆಟ್ ಆಟಗಾರರ ಬಗ್ಗೆ ನಮಗೆ ಹೆಮ್ಮೆ ಇದೆ. ಅವರು ಈ ಬಾರಿ ವಿಶ್ವ ಚಾಂಪಿಯನ್ ಆಗುತ್ತಾರೆ ಎಂಬ ನಂಬಿಕೆ ನನಗಿದೆ. ಆದರೆ ಆಟಗಾರರ ಅಭ್ಯಾಸದ ಬಟ್ಟೆ ಕೇಸರಿ ಬಣ್ಣದಿಂದ ಕೂಡಿದೆ. ಆಟಗಾರರು ನೀಲಿ ಬಣ್ಣದ ಬಟ್ಟೆಯನ್ನು ಧರಿಸಲು ಹೋರಾಟ ನಡೆಸಿದ್ದರು ಎಂದು ಆರೋಪಿಸಿರುವ ಮಮತಾ ಬ್ಯಾನರ್ಜಿ ಹೊಸ ವಿವಾದಕ್ಕೆ ಕಾರಣವಾಗಿದ್ದಾರೆ.
ವಿಶ್ವಕಪ್ ಪಂದ್ಯದ ಅವಧಿಯಲ್ಲಿ ಬಿಸಿಸಿಐ ಅಭ್ಯಾಸ ಪಂದ್ಯದ ಜರ್ಸಿಯನ್ನು ಬದಲಾವಣೆ ಮಾಡಿದೆ. ಇನ್ನು ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಭಾರತದ ತಂಡ, ನಾಳೆ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್