ನಾಯಕನಾಗಿ ಚಹಲ್ ಬೆನ್ನಿಗೆ ನಿಲ್ಲಲಿಲ್ವಾ ವಿರಾಟ್..?
2021ರ ಟಿ20 ವಿಶ್ವಕಪ್ನಲ್ಲಿ ಸ್ಥಾನ ಸಿಗದಕ್ಕೆ ಚಹಲ್ ಕಿಡಿ
ಕೊಹ್ಲಿಯ ಬಲಗೈ ಬಂಟ ಈಗ ಟೀಕೆ ಮಾಡ್ತಿರೋದೇಕೆ..?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ವಿರುದ್ಧ ಕಿಡಿಕಾರಿದ್ದ ಯಜುವೇಂದ್ರ ಚಹಲ್, ಇವತ್ತು ವಿರಾಟ್ ಕೊಹ್ಲಿ ವಿರುದ್ಧ ಗುಡುಗಿದ್ದಾರೆ. ಚಹಲ್ ಟೀಕೆಯ ಬೆನ್ನಲ್ಲೇ ಫ್ಯಾನ್ಸ್ ಕೂಡ ಕಳ್ಳನ ನಂಬಿದ್ರೂ, ಕುಳ್ಳನ ನಂಬದ್ರೂ ಎಂಬ ನಾಣ್ಣುಡಿ ಹೇಳ್ತಿದ್ದಾರೆ.
ಯಜುವೇಂದ್ರ ಚಹಲ್. ಟೀಮ್ ಇಂಡಿಯಾದ ಸಕ್ಸಸ್ಫುಲ್ ಸ್ಪಿನ್ನರ್ಗಳಲ್ಲಿ ಒಬ್ಬರು. ಇದಕ್ಕಿಂತ ಮಿಲಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಮ್ಯಾಚ್ ವಿನ್ನರ್. 8 ವರ್ಷಗಳ ಕಾಲ ಆರ್ಸಿಬಿ ಪರವಾಗಿ ಆಡಿದ್ದ ಈ ಲೆಗ್ ಸ್ಪಿನ್ನರ್. ಈಗ ಆರ್ಸಿಬಿ ವಿರುದ್ಧವೇ ನಾಲಗೆ ಹರಿಬಿಟ್ಟಿದ್ದಾರೆ. ರಿಟೈನ್ ವಿಚಾರದಲ್ಲಿ ಫ್ರಾಂಚೈಸಿಯ ನಡೆಯ ಬಗ್ಗೆ ಕಿಡಿಕಾರಿದ್ದ ಯಜುವೇಂದ್ರ ಚಹಲ್, ಈಗ ವಿರಾಟ್ ಕೊಹ್ಲಿಯ ವಿರುದ್ದವೂ ಕೆಂಡಕಾಡಿದ್ದಾರೆ. ಅದು ಕೂಡ ಟೀಮ್ ಇಂಡಿಯಾದಲ್ಲಿನ ಸ್ಥಾನದ ವಿಚಾರವಾಗಿ.
ಟಿ20 ವಿಶ್ವಕಪ್ನಲ್ಲಿ ಸ್ಥಾನ ಸಿಗದಕ್ಕೆ ಚಹಲ್ ಕೆಂಡ..!
ಅದು 2021ರ ಟಿ20 ವಿಶ್ವಕಪ್. ಈ ಮೆಗಾ ಟಿ20 ವಿಶ್ವಕಪ್ನಲ್ಲಿ ಸ್ಥಾನ ಪಡೆಯೋ ಫಸ್ಟ್ ಚಾಯ್ಸ್ ಸ್ಪಿನ್ನರ್ ಯಜುವೇಂದ್ರ ಚಹಲ್ ಆಗಿದ್ದರು. ಅದರಲ್ಲೂ ದುಬೈ ಕ್ಲೈಮೆಟ್ನಲ್ಲಿ ಅದ್ಬುತ ದಾಖಲೆ ಹೊಂದಿದ್ದ ಯಜುವೇಂದ್ರ ಚಹಲ್, ನಿಜಕ್ಕೂ ಮ್ಯಾಚ್ ವಿನ್ನರ್ ಪ್ಲೇಯರ್. ಹೀಗಾಗಿ ಟಿ20 ವಿಶ್ವಕಪ್ನಲ್ಲಿ ಸ್ಥಾನ ಪಡೆಯೋದು ಬಹುತೇಕ ಕನ್ಫರ್ಮ್ ಆಗಿತ್ತು. ಆದ್ರೆ, ಸೆಲೆಕ್ಷನ್ ಕಮಿಟಿಯ ಅವರಕೃಪೆಗೆ ಒಳಗಾಗಿದ್ದ ಚಹಲ್ಗೆ ಶಾಕ್ ಕಾದಿತ್ತು.
ಹೌದು! ಯಜುವೇಂದ್ರ ಚಹಲ್ಗೆ ಕಡೆಗಣಿಸಿದ್ದ ಆಯ್ಕೆ ಸಮಿತಿ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿಗೆ ಮಣೆ ಹಾಕಿತ್ತು. ಈ ಬ್ಲಂಡರ್ ಮಿಸ್ಟೇಕ್ಗೆ ಟೀಮ್ ಇಂಡಿಯಾ ಟಿ20 ವಿಶ್ವಕಪ್ನಲ್ಲಿ ಭಾರೀ ಬೆಲೆಯನ್ನೇ ತೆತ್ತಿತ್ತು. ಆದರೀಗ ಇದೇ ವಿಚಾರವಾಗಿ ಯಜುವೇಂದ್ರ ಚಹಲ್, ವಿರಾಟ್ ಕೊಹ್ಲಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದು ಕೂಡ ಬರೋಬ್ಬರಿ 2 ವರ್ಷಗಳ ಬಳಿಕ.
ಸಾಮರ್ಥ್ಯ ಗೊತ್ತಿದ್ದು ಚಹಲ್ನ ಕಡೆಗಣಿಸಿದ್ರಾ ಕೊಹ್ಲಿ..?
ಟಿ20 ವಿಶ್ವಕಪ್ಗೂ ಮುನ್ನ ನಡೆದಿದ್ದ ಐಪಿಎಲ್ ಸೀಸನ್ನಲ್ಲಿ ಬೊಂಬಾಟ್ ಪ್ರದರ್ಶನ ನೀಡಿದ್ದ ಚಹಲ್, ಮೆಗಾ ಟೂರ್ನಿಯಲ್ಲಿ ಆಡೋ ಕನಸು ಕಂಡಿದ್ದರು. ಫ್ಯಾನ್ಸ್ ಕೂಡ ಇದೇ ನಿರೀಕ್ಷೆಯಲ್ಲಿದ್ರು. ಆದ್ರೀಗ ಚಾನ್ಸ್ ಸಿಗದ ಬಗ್ಗೆ ಅಂದಿನ ನಾಯಕರಾಗಿದ್ದ ವಿರಾಟ್ ಕೊಹ್ಲಿಯ ಅಸಮಾಧಾನ ಹೊರಹಾಕಿದ್ದಾರೆ. ನನ್ನ ಸಾಮರ್ಥ್ಯ ಗೊತ್ತಿದ್ದು ಬೆಂಬಲಕ್ಕೆ ನಿಲ್ಲದ ಬಗ್ಗೆ ಬೇಸರ ಹೊರಹಾಕಿದ್ದಾರೆ.
ನನಗೆ ವಿಚಿತ್ರ ಎನಿಸಿತ್ತಿತ್ತು. ಏಕೆಂದರೆ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಕ್ಯಾಪ್ಟನ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನೂ ಮುನ್ನಡೆಸುತ್ತಿದ್ದರು. ಆದರೆ, ನಾನು ನನ್ನನ್ನ ಯಾಕೆ ಟಿ20 ವಿಶ್ವಕಪ್ಗೆ ಆಯ್ಕೆ ಮಾಡಲಿಲ್ಲ ಎಂದು ಯಾರನ್ನೂ ಕೇಳಲಿಲ್ಲ.
ಯಜುವೇಂದ್ರ ಚಹಲ್, ಟೀಮ್ ಇಂಡಿಯಾ ಆಟಗಾರ
ಬಾತ್ ರೂಮ್ನಲ್ಲಿ ಕಣ್ಣೀರು ಹಾಕಿದ್ರಂತೆ ಚಹಲ್..!
2021ರ ಟಿ20 ವಿಶ್ವಕಪ್ಗೆ ಆಯ್ಕೆಯಾಗದಕ್ಕೆ ಭಾರೀ ನಿರಾಸೆಗೊಂಡಿದ್ದ ಚಹಲ್, ಒಬ್ಬೊಂಟಿಯಾಗೇ ಕಣ್ಣೀರು ಹಾಕಿದ್ರಂತೆ. ಈ ವೇಳೆ ತಮ್ಮ ಬೆಂಬಲಕ್ಕೆ ನಿಂತಿದ್ದು ತಮ್ಮ ಪತ್ನಿ ಮಾತ್ರ ಅನ್ನೋ ವಿಚಾರವನ್ನೂ ಬಹಿರಂಗ ಪಡಿಸಿದ್ದಾರೆ.
ನಾನು 2021ರ ಟಿ20 ವಿಶ್ವಕಪ್ನಲ್ಲಿ ಸ್ಥಾನ ಪಡೆಯದಾಗ ಚ್ಚು ಬೇಸರಗೊಂಡಿದ್ದೆ. ನಾನು ಒಬ್ಬೊಂಟಿಯಾಗಿ ಬಾಥ್ ರೂಮ್ನಲ್ಲಿ ಅಳುತ್ತಿದೆ. ಆ ಕಷ್ಟಕರ ಸಮಯದಲ್ಲಿ ಓವರ್ಕಮ್ ಮಾಡಲು ಸಹಾಯ ಮಾಡಿದ್ದೇ ನನ್ನ ಪತ್ನಿ. ನಿಜಕ್ಕೂ ನಾನು ಆ ಸಮಯಲ್ಲಿ ನಾನು ತುಂಬಾ ಕೋಪಗೊಂಡಿದ್ದೆ.
ಯಜುವೇಂದ್ರ ಚಹಲ್, ಟೀಮ್ ಇಂಡಿಯಾ ಆಟಗಾರ
ಯಜುವೇಂದ್ರ ಚಹಲ್ ಬೇಸರದಲ್ಲಿ ಒಂದು ಅರ್ಥವೂ ಇದೆ. ಯಾಕಂದ್ರೆ, 2020 ಹಾಗೂ 2021ರ ಐಪಿಎಲ್ನಲ್ಲಿ ಚಹಲ್ ಅದ್ಬುತ ಪ್ರದರ್ಶನವನ್ನೇ ನೀಡಿದ್ದರು. ಟೀಮ್ ಇಂಡಿಯಾ ಪರವೂ ಕಮಾಲ್ ಮಾಡಿದ್ದರು. ಆದ್ರೆ, ನಾಯಕನಾಗಿ ವಿರಾಟ್ ಕೊಹ್ಲಿ, ತಮ್ಮ ಬೆಂಬಲಕ್ಕೆ ನಿಲ್ಲಲಿಲ್ಲ ಅನ್ನೋದನ್ನ ಆರ್ಸಿಬಿ ತೊರದ ಬಳಿಕವೇ ದೂರುತಿದ್ದಾರೆ.
ಅದೇನೇ ಆಗಲಿ. 2021ರ ಟಿ20 ವಿಶ್ವಕಪ್ನಲ್ಲಿ ಚಹಲ್ ಅವಶ್ಯಕತೆ ಇತ್ತು ನಿಜ. ಆದ್ರೆ, ನಾಯಕನಾಗಿ ಕೊಹ್ಲಿ ಬೆಂಬಲಿಸಲಿಲ್ಲ ಎಂಬ ಆರೋಪ ನಿಜಕ್ಕೂ ಸುಳ್ಳು. ಯಾಕಂದ್ರೆ, ಎಲೆಮರಿ ಕಾಯಿಯಾಗಿದ್ದ ಚಹಲ್ರನ್ನ ವಿಶ್ವ ಕ್ರಿಕೆಟ್ಗೆ ಪರಿಚಯಿಸಿದ ಶ್ರೇಯ ವಿರಾಟ್ ಕೊಹ್ಲಿಗೇ ಸೇರುತ್ತೆ. ಅಂದು ಕೊಹ್ಲಿ ಬಲಗೈ ಬಂಟನಾಗಿ ಗುಣಗಾನ ಮಾಡ್ತಿದ್ದ ಚಹಲ್, ಈಗ ಕೊಹ್ಲಿಗೆ ನಾಯಕತ್ವದ ಪಟ್ಟ ಇಲ್ಲ ಎಂಬ ಬೆನ್ನಲ್ಲೇ ಟೀಕೆ ಮಾಡ್ತಿರೋದು ನಿಜಕ್ಕೂ ವಿಪರ್ಯಾಸವೇ ಸರಿ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ