ವೆಸ್ಟ್ ಇಂಡೀಸ್ಗೆ ಟೀಂ ಇಂಡಿಯಾ ಪ್ರವಾಸ..!
ಟೀಂ ಇಂಡಿಯಾದಲ್ಲಿ ಆಡಲು ಸಿಗುತ್ತಿಲ್ಲ ಚಾನ್ಸ್
ಈ ಬಗ್ಗೆ ಸ್ಟಾರ್ ಬೌಲರ್ ಚಹಾಲ್ ಹೇಳಿದ್ದೇನು?
ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲು ಅವಕಾಶ ಸಿಗದೆ ಟೀಂ ಇಂಡಿಯಾದ ಸ್ಟಾರ್ ಬೌಲರ್ ಚಹಾಲ್ ಸಂಪೂರ್ಣ ಬೆಂಚ್ ಕಾದಿದ್ದರು. ಒಂದೇ ಒಂದು ಏಕದಿನ ಪಂದ್ಯದಲ್ಲೂ ಚಹಾಲ್ಗೆ ಆಡಲು ಅವಕಾಶ ಸಿಕ್ಕಿರಲಿಲ್ಲ. ಆದರೀಗ ಕೊನೆಗೂ ವಿಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಆಡಲು ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಚಹಾಲ್ ಮಾತಾಡಿದ್ದಾರೆ.
ನಾವು ತಂಡದ ಪ್ಲಾನ್ ಪ್ರಕಾರ ಆಡುತ್ತಿದ್ದೇವೆ. ಟೀಂ ಇಂಡಿಯಾದ ಪ್ಲಾನ್ ಅನುಷ್ಠಾನ ಮಾಡುವುದೇ ಮೊದಲ ಆದ್ಯತೆ. ಇದು ಹೊಸದೇನಲ್ಲ. 7ನೇ ಕ್ರಮಾಂಕದಲ್ಲಿ ರವೀಂದ್ರ ಜಡಾಜಾ, ಅಕ್ಷರ್ ಪಟೇಲ್ ಆಡುವುದು ಸಾಮಾನ್ಯ. ಪಿಚ್ ಸ್ಪಿನರ್ಸ್ಗೆ ಸಪೋರ್ಟಿವ್ ಆಗಿದ್ದಾಗ ಮಾತ್ರ ಮೂವರು ಆಡಬಹುದು. ಸದ್ಯ ಕುಲ್ದೀಪ್ ಚೆನ್ನಾಗಿ ಆಡುತ್ತಿದ್ದಾರೆ. ಹೀಗಾಗಿ ಅವರ ಬೆಂಬಲಕ್ಕೆ ಟೀಂ ನಿಂತಿದೆ ಎಂದರು.
ನಾನು ನೆಟ್ಸ್‌ನಲ್ಲಿ ಬಹಳ ಶ್ರಮ ಹಾಕುತ್ತಿದ್ದೇನೆ. ಐಪಿಎಲ್ ಬಳಿಕ ಇದೇ ಮೊದಲ ಬಾರಿಗೆ ಟೀಂ ಇಂಡಿಯಾದ ಪರ ಆಡುತ್ತಿದ್ದೇನೆ. ಇದು ನನ್ನ ಪ್ರಿಪರೇಷನ್ ಭಾಗ. ಎಲ್ಲರಿಗೂ ಯಾವಾಗಲೂ ನೀಲಿ ಜರ್ಸಿಯಲ್ಲಿ ಆಡಲೇಬೇಕು ಎಂದು ಇರುತ್ತದೆ. ನಾನೇನು ಸುಮ್ಮನೇ ಕೂತಿಲ್ಲ. ತಂಡದೊಂದಿಗೆ ಜರ್ನೀ ಮಾಡುತ್ತಲೇ ಇದ್ದೇನೆ ಎಂದರು.
ಏನಂದ್ರು ಚಹಾಲ್..?
ಐದು ಟಿ20 ಪಂದ್ಯಗಳಲ್ಲೂ ಅವಕಾಶ ಸಿಗುವ ಸಾಧ್ಯತೆ ಇದೆ. ತಂಡವನ್ನು ಗೆಲ್ಲಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ಟೀಂ ಇಂಡಿಯಾಗೆ ನನ್ನ ಕೈಯಲ್ಲಾದ ಕೊಡುಗೆ ನೀಡುವುದೇ ಮೊದಲ ಆದ್ಯತೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ