‘ಇಂದಿರಾ ಕ್ಯಾಂಟೀನ್ ಬಿಲ್ಗಾಗಿ ಈ ರೀತಿ ಷಡ್ಯಂತ್ರ’
ಇಂದಿರಾ ಕ್ಯಾಂಟೀನ್ ಬಿಲ್ಗಾಗಿ ಈ ಪ್ಲಾನ್ ಮಾಡಿದ್ರಾ!?
ಗೋವಿಂದ ಪೂಜಾರಿ ಮೇಲೆ ನೇರಾ-ನೇರ ಆರೋಪ
ಪಂಚಕೋಟಿ ಪಂಗನಾಮ ಕೇಸ್ನಲ್ಲಿ ಚೈತ್ರಾ ಕುಂದಾಪುರ ಪೊಲೀಸರ ಅತಿಥಿಯಾಗಿದ್ದಾಳೆ. ಗೋವಿಂದ ಪೂಜಾರಿಗೆ ವಂಚಿಸಿದ ಆರೋಪದಲ್ಲಿ ಪೊಲೀಸರು ಚೈತ್ರಾಳ ವಿಚಾರಣೆ ಮಾಡ್ತಿದ್ದಾರೆ. ಈ ನಡುವೆ ಕೇಸ್ಗೆ ಚೈತ್ರಾ ಸ್ಫೋಟಕ ಟ್ವಿಸ್ಟ್ ಕೊಟ್ಟಿದ್ದಾಳೆ. ಇದಕ್ಕೆಲ್ಲ ಇಂದಿರಾ ಕ್ಯಾಂಟೀನ್ ಬಿಲ್ ಪಾವತಿಯೇ ಕಾರಣ ಅನ್ನೋ ಬಾಂಬ್ ಸಿಡಿಸಿದ್ದಾರೆ. ಚೈತ್ರಾ ಕುಂದಾಪುರ ಸದ್ಯ ರಾಜ್ಯದ ದಶದಿಕ್ಕುಗಳಲ್ಲೂ ಮಾರ್ಧನಿಸುತ್ತಿರುವ ಹೆಸರು. ಹಿಂದೂ ಪರ ಭಾವೋದ್ರೇಕ ಭಾಷಣ ಮಾಡ್ಕೊಂಡಿದ್ದ ನಾಯಕಿ ಈಗ ಖಳನಾಯಕಿಯಾಗಿ ಬದಲಾಗಿದ್ದಾಳೆ. ಗೋವಿಂದ ಬಾಬು ಪೂಜಾರಿಗೆ 5 ಕೋಟಿ ನಾಮ ಹಾಕಿದ ಕೇಸ್ನಲ್ಲಿ ಎ1 ಆರೋಪಿಯಾಗಿ ಪೊಲೀಸರಿಗೆ ಲಾಕ್ ಆಗಿದ್ದಾಳೆ. ಚೈತ್ರದ ಮೋಸಾಂಜಲಿ ಆಡಿ ಒಂದು ಪಕ್ಕಾ ಸ್ಕೆಚ್ ಹಾಕಿ ವಂಚನೆಯ ಚಿತ್ರ ಮಾಡಿದ್ದ ಚೈತ್ರಾ ಈಗ ಚಿತ್ರಕ್ಕೆ ರೋಚಕ ಟ್ವಿಸ್ಟ್ ಕೊಟ್ಟಿದ್ದಾಳೆ.
ಇದನ್ನು ಓದಿ: VIDEO: ಕೋಳಿ ಕೇಳಿ ಜೈಲರ್ ಸಾಂಗ್ ಹುಟ್ಟಿದ್ಯಾ.. ಸೂಪರ್ ಸ್ಟಾರ್ ರಜಿನಿಕಾಂತ್ ‘ಹುಕುಂ’ ಸೌಂಡ್ ಹೇಗಿದೆ ನೋಡಿ!
‘ಸ್ವಾಮೀಜಿ ಅರೆಸ್ಟ್ ಆಗಲಿ, ಎಲ್ಲಾ ಸತ್ಯವೂ ಹೊರಗೆ ಬರುತ್ತೆ’
‘ಇಂದಿರಾ ಕ್ಯಾಂಟೀನ್ ಬಿಲ್ಗಾಗಿ ಈ ರೀತಿಯ ಷಡ್ಯಂತ್ರ’
ಸಿಸಿಬಿ ಪೊಲೀಸರು ಚೈತ್ರಾಳನ್ನು ಮಹಿಳಾ ಸಾಂತ್ವನ ಕೇಂದ್ರದಿಂದ ಸಿಸಿಬಿ ಕಚೇರಿಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಆದ್ರೆ ಕಾರಿನಿಂದ ಕೆಳಗೆ ಇಳಿಯುವಾಗ ಚೈತ್ರಾ ಕುಂದಾಪುರ ನೀಡಿದ ಈ ಹೇಳಿಕೆ ಸದ್ಯ ಕೇಸ್ಗೆ ರೋಚಕ ತಿರುವು ಕೊಟ್ಟಿದೆ. ಸ್ವಾಮೀಜಿ ಅರೆಸ್ಟ್ ಆಗಲಿ, ಎಲ್ಲಾ ಸತ್ಯವೂ ಹೊರಗೆ ಬರುತ್ತೆ. ದೊಡ್ಡ ದೊಡ್ಡವರ ಹೆಸರುಗಳು ಕೂಡ ಬಹಿರಂಗವಾಗಲಿದೆ. ಇಂದಿರಾ ಕ್ಯಾಂಟೀನ್ ಬಿಲ್ಗಾಗಿ ನನ್ನ ವಿರುದ್ಧ ಈ ರೀತಿಯ ಷಡ್ಯಂತ್ರ ಮಾಡಲಾಗಿದೆ ಅಂತ ಕಾರಿನಿಂದ ಇಳಿಯುವಾಗ ಚೈತ್ರಾ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇಂದಿರಾ ಕ್ಯಾಂಟೀನ್ ಬಿಲ್ ಪಾವತಿ ವಿಚಾರಕ್ಕೆ ತನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದಿರುವ ಚೈತ್ರಾ ಗೋವಿಂದ ಬಾಬು ಪೂಜಾರಿ ಮೇಲೆ ನೇರಾ-ನೇರ ಆರೋಪ ಮಾಡಿದ್ದಾರೆ.
ಇಂದಿರಾ ಕ್ಯಾಂಟೀನ್ ಬಿಲ್ ಪಾವತಿಗಾಗಿ ಈ ಪ್ಲಾನ್ ಮಾಡಿದ್ರಾ!?
ಮೊದಲೇ ಫುಡ್ ಸರ್ವಿಸ್ ನಡೆಸ್ತಿದ್ದ ಗೋವಿಂದ ಪೂಜಾರಿ 2017ರಿಂದಲೂ ಇಂದಿರಾ ಕ್ಯಾಂಟೀನ್ ನಡೆಸ್ತಿದ್ರು. ಚೆಫ್ ಟ್ಯಾಕ್ ಎಂಬ ಕಂಪನಿಯನ್ನ ನಡೆಸುತ್ತಿರುವ ಗೋವಿಂದ ಪೂಜಾರಿ 98 ಇಂದಿರಾ ಕ್ಯಾಂಟೀನ್ಗಳ ಗುತ್ತಿಗೆ ಹೊಂದಿದ್ದಾರೆ. ಇದರಲ್ಲಿ ಗೋವಿಂದನಿಗೆ ಸುಮಾರು 35 ಕೋಟಿ ರೂಪಾಯಿ ಬರಬೇಕಿತ್ತು. ಈ 35 ಕೋಟಿ ರೂಪಾಯಿಯನ್ನ ಬಿಡುಗಡೆ ಮಾಡಬೇಕಾದ್ರೆ ಚೈತ್ರಾಳನ್ನ ಲಾಕ್ ಮಾಡಿಸು ಅಂತ ಡೀಲ್ ಆಗಿತ್ತಂತೆ. ಇದೇ ಹಣಕ್ಕೆ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆಂದು ಚೈತ್ರಾ ಆರೋಪಿಸಿದ್ದಾರೆ. ಇಂದಿರಾ ಕ್ಯಾಂಟೀನ್ ಹಣಕ್ಕೆ ಈ ಪ್ಲಾನ್ ಮಾಡಿದ್ರಾ ಅನ್ನೋ ಚರ್ಚೆ ಸದ್ಯ ಶುರುವಾಗಿದೆ. ಇನ್ನು ಚೈತ್ರಾ ಆರೋಪಿಸಿದಂತೆ ಇಂದಿರಾ ಕ್ಯಾಂಟೀನ್‌ಗೂ ಈ ಕೇಸ್ಗೂ ಸಂಬಂಧವಿಲ್ಲ ಅಂತ ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ಇಂದಿರಾ ಕ್ಯಾಂಟೀನ್‌ಗೂ ಇದಕ್ಕೂ ಸಂಬಂಧವಿಲ್ಲವೆಂದ ಪರಮೇಶ್ವರ್
ಇನ್ನು, ಚೈತ್ರಾರನ್ನು ಬಂಧಿಸಿದ ತಕ್ಷಣ ಅಪರಾಧಿ ಅನ್ನೋಕಾಗಲ್ಲ ಅಂತ ಅವರ ಪರ ವಕೀಲ ರಮಣಪ್ಪ ಹೇಳಿದ್ದಾರೆ. ನಿನ್ನೆ ಕಕ್ಷಿದಾರರ ಭೇಟಿಗೆ ಅವಕಾಶ ಕೊಡಲಿಲ್ಲ. ಚರ್ಚೆ ಬಳಿಕ ಎಲ್ಲಾ ಮಾಹಿತಿ ಕೊಡುತ್ತೇವೆ ಅಂತ ವಕೀಲರು ಹೇಳಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಚೈತ್ರದ ಮೋಸಾಂಜಲಿ ಚಿತ್ರ ಭರ್ಜರಿಯಾಗೇ ಸದ್ದು ಮಾಡ್ತಿದೆ. ಸದ್ಯ ಚೈತ್ರಾ ಲಾಕ್ ಆಗಿರೋದ್ರ ಹಿಂದೆ ಷಡ್ಯಂತ್ರವಿದೆ. ಗೋವಿಂದ ಪೂಜಾರಿಗೆ ಇಂದಿರಾ ಕ್ಯಾಂಟೀನ್ ಬಿಲ್ ಪಾವತಿಗಾಗಿ 35 ಕೋಟಿ ಬರಬೇಕಿತ್ತು. ಇದಕ್ಕಾಗಿ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಅಂತ ಚೈತ್ರಾ ಆರೋಪಿಸಿದ್ದಾರೆ. ಈ ಸ್ಫೋಟಕ ಹೇಳಿಕೆಯಿಂದ ಕೇಸ್ಗೆ ಮತ್ತಷ್ಟು ರೋಚಕತೆ ಸಿಕ್ಕಿದ್ದು ಈ ಚೈತ್ರದ ಮೋಸಾಂಜಲಿ ಚಿತ್ರದಲ್ಲಿ ಮತ್ಯಾವ ಪಾತ್ರದಾರಿ ಇದ್ದಾರೋ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ