newsfirstkannada.com

ಹೊಸ ಕಾರ್​​, ಜಮೀನು.. ಚೈತ್ರಾ ಕುಂದಾಪುರ ಲೈಫ್​ ದಿಢೀರ್​ ಬದಲಾಗಿದ್ದು ಹೇಗೆ?

Share :

15-09-2023

  ಇನ್ನೊಬ್ಬರ ಹಣಕ್ಕೆ ಆಸೆ ಪಟ್ಟವಳಲ್ಲ ಎಂದು ತಾಯಿ ಸ್ಪಷ್ಟನೆ!

  ಸಲೂನ್​ ಮಾಲೀಕನಿಗೆ ಆರೋಪಿ ಧನರಾಜ್​ ಆಪ್ತ ಧಮ್ಕಿ

  ಕಡೂರು ಕಾಂಗ್ರೆಸ್​ ಶಾಸಕನ ಜೊತೆಗೂ ಧನರಾಜ್​ ಲಿಂಕ್​

ಟಿಕೆಟ್​ಗಾಗಿ ಡೀಲ್​ ಕೇಸ್​ನಲ್ಲಿ ಅರೆಸ್ಟ್​ ಆಗಿರುವ ಚೈತ್ರಾ ಕುಂದಾಪುರಳನ್ನ ಸಿಸಿಬಿ ತೀವ್ರ ವಿಚಾರಣೆಗೆ ಒಳಪಡಿಸಿದೆ. ಡೀಲ್‌ ಸಂಬಂಧ ಆಕೆ ಪೊಲೀಸರ ಬಳಿ ಷಡ್ಯಂತ್ರದ ಬಗ್ಗೆ ಮಾತಾಡುತ್ತಿದ್ದಾಳೆ. ಆದರೆ ಕಳೆದ ಕೆಲ ಸಮಯದಿಂದ ಚೈತ್ರಾ ಲೈಫ್​ಸ್ಟೈಲ್​ ಚೇಂಜ್​ ಆಗಿರೋದು ಗೊತ್ತಾಗ್ತಿದೆ.

ಚೈತ್ರಾ ಐಷಾರಾಮಿ ಕಾರು ಖರೀದಿಸಿದ್ದಲ್ಲದೆ, ಜಮೀನು ಖರೀದಿ ವ್ಯವಹಾರವೂ ನಡೆದಿರೋ ವಿಷ್ಯ ಬೆಳಕಿಗೆ ಬಂದಿದೆ. ಚೈತ್ರಾ ಕುಂದಾಪುರ ಹಿಂದುತ್ವದ ಭಾಷಣವನ್ನೇ ಯಶಸ್ಸಿನ ಮೆಟ್ಟಿಲಾಗಿ ಮಾಡಿಕೊಂಡು ಖಡಕ್​ ನಾಯಕಿಯಾದವಳು. ಯಾವುದೇ ಕಾರ್ಯಕ್ರಮಕ್ಕೆ ಹೋದರು, ಚೈತ್ರಾ ಸೀದಾ ಸಾದವಾಗಿ ಹೋಗುತ್ತಿದ್ದರು. ಆದರೆ ಇದೀಗ ಬಂಧನದ ಬಳಿಕ ಚೈತ್ರಾಳ ಐಷಾರಾಮಿ ಬದುಕಿನ ಬಂಡಾವಳ ಬಯಲಾಗಿದೆ.

ವಂಚನೆ ಮಾಡಿ ಐಶಾರಾಮಿ ಜೀವನ ಸಾಗಿಸ್ತಿದ್ರಾ ಚೈತ್ರಾ?

ಉದ್ಯಮಿ ಗೋವಿಂದ ಪೂಜಾರಿಗೆ ಟಿಕೆಟ್​ ಕೊಡಿಸ್ತೀನಿ ಎಂದು 5 ಕೋಟಿ ಹಣ ಪಡೆದ ಆರೋಪಕ್ಕೆ ಗುರಿಯಾಗಿರೋ ಹಿಂದುತ್ವ ಭಾಷಣಗಾರ್ತಿ ಚೈತ್ರಾ ತನ್ನನ್ನ ತಾನು ಸಮರ್ಥನೆಯಂತೂ ಮಾಡಿಕೊಳ್ತಿದ್ದಾಳೆ. ಆದರೆ ಕಳೆದ ಕೆಲ ಸಮಯದಿಂದ ಬದಲಾಗಿರೋ ಆಕೆಯ ಲೈಫ್​ಸ್ಟೈಲ್​ ಅಂತೂ ಅನುಮಾನ ಬಲವಾಗಿಸುವಂತಿದೆ. ಯಾಕಂದ್ರೆ, ಗೋವಿಂದ ಪೂಜಾರಿ ಸಂಪರ್ಕದ ಬಳಿಕ ಚೈತ್ರಾ ಬದುಕಲ್ಲಿ ರಮ್ಯ ಚೈತ್ರಕಾಲ ಶುರುವಾದಂತಿದೆ.

ಚೈತ್ರಾ ಕುಂದಾಪುರ ಇತ್ತೀಚೆಗೆ ಕಾರು, ಜಮೀನು ಖರೀದಿಸಿರೋದು ಬೆಳಕಿಗೆ ಬಂದಿದೆ. ಚಿನ್ನ ಜೊತೆಗೆ ಜಾಗವನ್ನೂ ಖರೀದಿಸಿದ್ದಾಳೆ. ತನ್ನ ಹೆಸರಿನ ಬದಲು ಗೆಳೆಯ ಶ್ರೀಕಾಂತ್ ಹೆಸರಲ್ಲಿ 2 ಎಕ್ಕರೆ ಜಾಗ ಖರೀದಿಸಿದ್ದಾಳೆ. ಇತ್ತೀಚಿಗೆ ಹಳೆ ಕಾರಿನ ಬದಲಾಗಿ ಹೊಸ ಕಾರಿನಲ್ಲಿ ಓಡಾಟ ಮಾಡುತ್ತಿದ್ದಳು. ಸುಮಾರು 25 ಲಕ್ಷ ಮೌಲ್ಯದ ಹೊಸ ಕಾರನ್ನು ಚೈತ್ರಾ ಕುಂದಾಪುರ ಖರೀದಿಸಿ, ಐಷಾರಾಮಿ ಜೀವನ ಸಾಗಿಸುತ್ತಿದ್ಲು ಅನ್ನೋ ಮಾಹಿತಿ ಬಹಿರಂಗವಾಗಿದೆ.

ಇದನ್ನು ಓದಿ: ನೀನು ಹಳ್ಳಿ ಗುಗ್ಗು ಎಂದು ಕಾಟ ಕೊಟ್ಟ ಹೆಂಡತಿ; ರೋಸಿ ಹೋದ ಗಂಡ ಸಾವಿಗೆ ಶರಣು

ಚೈತ್ರಾ ಕುಂದಾಪುರ ಪರಿಸ್ಥಿತಿ ಕಂಡು ತಾಯಿ ಕಣ್ಣೀರು

ಇನ್ನು, ಮಗಳ ಬಂಧನ ಬಗ್ಗೆ ಚೈತ್ರಾ ಕುಂದಾಪುರ ತಾಯಿ ಬೇಸರ ವ್ಯಕ್ತಪಡಿಸಿದ್ದಾರೆ. ಮಗಳ ಸ್ಥಿತಿ ಕಂಡು ಬಹಳ ಬೇಸರ ಆಗುತ್ತೆ. ನನ್ನ ಮಗಳನ್ನ ಬಳಸಿಕೊಂಡು ಅವಳನ್ನ ಈ ಸ್ಥಿತಿಗೆ ತರಲಾಗಿದೆ. ತನ್ನ ಕೈಯಿಂದ ಹಣ ಹೋದರೂ ಪರವಾಗಿಲ್ಲ ಬೇರೊಬ್ಬರ ಹಣಕ್ಕೆ ಆಸೆ ಪಟ್ಟವಳಲ್ಲ ನನ್ನ ಮಗಳು. ಏನೂ ಮಾಡದಿರುವ ತಪ್ಪಿಗೆ ನನ್ನ ಮಗಳು ಗುರಿಯಾಗಿದ್ದಾಳೆ. ನಮಗೆ ಯಾವ ಚಿಂತೆ ಆಕೆ ಕೊಡಲ್ಲ ಅವಳೇ ಎಲ್ಲ ನಿಭಾಯಿಸುತ್ತಾಳೆ ಎಂದು ಚೈತ್ರಾ ಕುಂದಾಪುರ ತಾಯಿ ರೋಹಿಣಿ ಪ್ರತಿಕ್ರಿಯಿಸಿದ್ದಾರೆ.

ಮೇಕಪ್‌ ಬಗ್ಗೆ ಬಿಚ್ಚಿಟ್ಟ ಸಲೂನ್‌ ಅಂಗಡಿಯವನಿಗೆ ಬೆದರಿಕೆ

ಇನ್ನೂ, ವಂಚನೆ ಪ್ರಕರಣದಲ್ಲಿ ಮತ್ತೊಂದು ಪ್ರಮುಖ ಪಾತ್ರವೇ ಆರ್​ಆರ್​ಎಸ್​ ಪ್ರಚಾರಕ ವಿಶ್ವನಾಥ್ ಕ್ಯಾರೆಕ್ಟರ್. ವಿಶ್ವನಾಥ ಹೆಸರಿನಲ್ಲಿ ನಟನೆಗೆ ರಮೇಶ್​ ಎಂಬುವರಿಗೆ ಆರೋಪಿ ಧನರಾಜ್​ ಕಡೂರಿನ ದೊಡ್ಡ ಪೇಟೆ ಬನಶಂಕರಿ ಬೀದಿಯಲ್ಲಿರುವ ರಾಮು ಕಟಿಂಗ್​ ಶಾಪ್​ನಲ್ಲಿ ಹೇರ್​ಸ್ಟೈಲ್​ ಮಾಡಿಸಿದ್ದನಂತೆ. ರಾಮು ಅಂಗಡಿಗೆ ಧನರಾಜ್​ ಕಾಯಂ ಕಸ್ಟಮರ್​. ಹೀಗಾಗಿ ಧನರಾಜ್​ ಹೇಳಿದಂತೆ ರಾಮು, ರಮೇಶ್​ ಎಂಬಾತನಿಗೆ ಹೇರ್​ಸ್ಟೈಲ್​ ಮಾಡಿದ್ದನಂತೆ. ಈ ಬಗ್ಗೆ ಸಲೂನ್ ಮಾಲೀಕ ರಾಮು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ. ಮಾಸ್ಟರ್‌ ಮೈಂಡ್‌ ಬಗ್ಗೆ ಕಡೂರಿನ ಕಟಿಂಗ್​ ಶಾಪ್​ನ ಸಿಬ್ಬಂದಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರಂತೆ. ಇದರ ಬೆನ್ನಲ್ಲೇ ಆರೋಪಿ ಧನ್‌ರಾಜ್‌ ಸ್ನೇಹಿತ ಕಟಿಂಗ್‌ ಶಾಪ್‌ನ ಮಾಲೀಕ ರಾಮುಗೆ ಧಮ್ಕಿ ಹಾಕಿದ್ದಾನೆ.

ನಮ್ಮನ್ನ ಎದುರು ಹಾಕಿಕೊಂಡು ಸಲೂನ್ ನಡೆಸ್ತೀಯಾ ಎಂದು ರಾಮುಗೆ ಕರೆ ಮಾಡಿ ಧನರಾಜ್ ಸ್ನೇಹಿತನ ಧಮ್ಕಿ ಹಾಕಿರುವ ಆಡಿಯೋ ವೈರಲ್ ಆಗಿದೆ. ಬಿಜೆಪಿ ಟಿಕೆಟ್​ ಕೊಡಿಸೋದಾಗಿ ಉದ್ಯಮಿಗೆ ಕೋಟಿ ಕೋಟಿ ಹಣ ವಂಚನೆ ಪ್ರಕರಣದಲ್ಲಿ ತನಿಖೆ ತೀವ್ರವಾಗಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ಯಾರು ಈ ಪ್ರಕರಣದಲ್ಲಿ ಅರೆಸ್ಟ್​ ಆಗ್ತಾರೋ ಗೊತ್ತಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೊಸ ಕಾರ್​​, ಜಮೀನು.. ಚೈತ್ರಾ ಕುಂದಾಪುರ ಲೈಫ್​ ದಿಢೀರ್​ ಬದಲಾಗಿದ್ದು ಹೇಗೆ?

https://newsfirstlive.com/wp-content/uploads/2023/09/chitraa-3.jpg

Load More