ಚೈತ್ರಾ ಕುಂದಾಪುರ ವಂಚನೆ ಕೇಸ್ ಪ್ರಕರಣ, ಶ್ರೀಗಳಿಗಾಗಿ ಸಿಸಿಬಿ ಹುಡುಕಾಟ
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚೈತ್ರಾ ಕುಂದಾಪುರ
ಅಭಿನವ ಶ್ರೀಗಳು ಕಾರು ಚಾಲಕನ ಬಳಿ ಏನು ಹೇಳಿದ್ದಾರೆ ಗೊತ್ತಾ?
ಚೈತ್ರಾ ಆ್ಯಂಡ್ ಟೀಂನ ವಂಚನೆ ಕೇಸ್ಗೆ ಸಂಬಂಧಿಸಿದಂತೆ, ಆರೋಪಿ ಅಭಿನವ ಶ್ರೀಗಳ ಕಾರು ಚಾಲಕನನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿ, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ವಿಚಾರಣೆ ವೇಳೆ ಸ್ವಾಮೀಜಿ ಎಲ್ಲಿ ಇದ್ದಾರೋ ನನಗೆ ಗೊತ್ತಿಲ್ಲ ಎಂದು ಕಾರು ಚಾಲಕ ಹೇಳಿಕೆ ನೀಡಿರೋದಾಗಿ ತಿಳಿದು ಬಂದಿದೆ.
ಅಭಿನವ ಶ್ರೀಗಳು ಮಠದಿಂದ ಕೆಲಸ ಇದೆ ಹೊರ ಹೋಗಿ ಬರ್ತೀನಿ ಅಂತ ಹೇಳಿ ಹೋದ್ರು. ಆಮೇಲೆ ಸಂಪರ್ಕ ಮಾಡಿಲ್ಲ ಎಂದು ಕಾರು ಚಾಲಕ ಮಾಹಿತಿ ನೀಡಿದ್ದಾನಂತೆ. ಸದ್ಯ ಸಿಸಿಬಿ ಪೊಲೀಸರು ಶ್ರೀಗಳ ಕಾರು ಚಾಲಕನ ನಂಬರ್ ಅನ್ನು ಸಿಡಿಆರ್ ಹಾಕಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಚೈತ್ರಾ ಕುಂದಾಪುರ ಸಿಸಿಬಿ ಪೊಲೀಸರ ವಶದಲ್ಲಿರುವಾಗ ಅಸ್ವಸ್ಥರಾಗಿದ್ದಾರೆ. ಸದ್ಯ ಅವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚೈತ್ರಾ ಕುಂದಾಪುರ ಅವರ ಆರೋಗ್ಯ ಸ್ಥಿರವಾಗಿದೆ. ಅವರ ಆರೋಗ್ಯದ ಬಗ್ಗೆ ಇಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದಾರೆ.
ಸಿಸಿಬಿ ವಶದಲ್ಲಿರುವ ಚೈತ್ರಾ ಕುಂದಾಪುರ ಅವರ ಆರೋಗ್ಯ ಸ್ಥಿರವಾಗಿದೆ. ಸಿಟಿ ಸ್ಕ್ಯಾನ್ ಕೂಡ ನಾರ್ಮಲ್ ಇದೆ. ಚೈತ್ರಾ ಕುಂದಾಪುರ ಅವರು ಆಸ್ಪತ್ರೆಗೆ ದಾಖಲಾದಾಗ ಅವರಿಗೆ ಮೂರ್ಛೆ ರೋಗ ಇರಲಿಲ್ಲ. ಅವರನ್ನ ಈಗ ಮಾತನಾಡಿಸಬಹುದು ಎಂದು ಪರೀಕ್ಷೆ ನಡೆಸಿರುವ ವೈದ್ಯರು ಹೇಳಿದ್ದಾರೆ. ಆದ್ರೆ ಚೈತ್ರಾ ಕುಂದಾಪುರ ಅವರು ಮಾತ್ರ ಯಾರನ್ನೂ ಮಾತನಾಡಿಸುತ್ತಿಲ್ಲ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ