ಕಬಾಬ್ ವ್ಯಾಪಾರಿ ಬಿಜೆಪಿ ಚುನಾವಣಾ ಸಮಿತಿ ಸದಸ್ಯನಾದ ಕಥೆ
ಸ್ಪಷ್ಟವಾಗಿ ಹಿಂದಿ ಮಾತಾಡುವ ವ್ಯಕ್ತಿ ಬೇಕಿತ್ತು ಅಂತ ನನ್ನತ್ರ ಬಂದ್ರು
ವಿಶ್ವನಾಥ್ ಜೀ ಪಾತ್ರಕ್ಕೆ 93 ಸಾವಿರ ರೂ. ಅಕೌಂಟ್‌ಗೆ ಹಾಕಿದ್ದರು
ಬೆಂಗಳೂರು: ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರ ವಂಚನೆ ಕೇಸ್‌ಗೆ ಇವತ್ತು ಮೇಜರ್ ಟ್ವಿಸ್ಟ್ ಸಿಕ್ಕಿದೆ. ವಿಧಾನಸಭಾ ಚುನಾವಣೆಯಲ್ಲಿ 5 ಕೋಟಿ ರೂಪಾಯಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿದ್ದ ಚೈತ್ರದ ಕ್ರೈಮಾಂಜಲಿ ಬಗೆದಷ್ಟು ಬಯಲಾಗ್ತಿದೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರು ವಿಶ್ವನಾಥ್ ಜೀ ಪಾತ್ರ ಮಾಡಿದ್ದ ಕಬಾಬ್ ವ್ಯಾಪಾರಿ ಚನ್ನನಾಯಕ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ವಶಕ್ಕೆ ಪಡೆಯೋದಕ್ಕೂ ಮುನ್ನ ಚನ್ನನಾಯಕ್ ನ್ಯೂಸ್ ಫಸ್ಟ್ ಚಾನೆಲ್ ಜೊತೆ ಮಾತನಾಡಿದ್ದು, ವೇಷಭೂಷಣದ ಹಿಂದಿನ ರಿಹರ್ಸಲ್ ಕಹಾನಿಯನ್ನು ಎಳೆ ಎಳೆಯಾಗಿ ಬಾಯ್ಬಿಟ್ಟಿದ್ದಾರೆ.
ಇದನ್ನೂ ಓದಿ: VIDEO: ಮಗಳ ಸ್ಥಿತಿ ಕಂಡು ಬಹಳ ಬೇಸರ ಆಗುತ್ತೆ; ಚೈತ್ರಾ ಕುಂದಾಪುರ ತಾಯಿ ಪ್ರತಿಕ್ರಿಯೆ
ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸೋದಾಗಿ ಹೇಳಿದ್ದ ಚೈತ್ರಾ ಕುಂದಾಪುರ ಅವರ ಗ್ಯಾಂಗ್ ವಿಶ್ವನಾಥ್ ಜೀ ಅನ್ನೋರನ್ನ ಪರಿಚಯಿಸಿದೆ. ಅಸಲಿಗೆ ವಿಶ್ವನಾಥ್ ಜೀ ಪಾತ್ರಧಾರಿಯೇ ಕಬಾಬ್ ವ್ಯಾಪಾರಿ ಚನ್ನನಾಯಕ್. ಈ ಚನ್ನನಾಯಕ್ ನ್ಯೂಸ್ ಫಸ್ಟ್ ಜೊತೆ ಮಾತನಾಡಿದ್ದು ಅಸಲಿಗೆ ಆಗಿದ್ದೇನು ಅನ್ನೋ ಸಂಪೂರ್ಣ ವಿವರವನ್ನು ಬಾಯ್ಬಿಟ್ಟಿದ್ದಾರೆ.
ನನಗೆ ಚೈತ್ರಾ ಕುಂದಾಪುರ್ ಅವರ ಜೊತೆಗಿದ್ದ ಗಗನ್ ಮತ್ತು ಧನಂಜಯ್ ಸ್ನೇಹಿತರು. ಒಬ್ಬರಿಗೆ ವಿಧಾನಸಭೆ ಟಿಕೆಟ್ ಕೊಡಿಸಬೇಕು. ಎಲ್ರಿಗೂ ಒಳ್ಳೆಯದಾಗುತ್ತೆ.. ಎಲ್ರಿಗೂ ಒಳ್ಳೆಯದಾಗುತ್ತೆ. ದೊಡ್ಡವರು ಒಬ್ಬರಿದ್ದಾರೆ, ಟಿಕೆಟ್ ಕೊಡಿಸ್ತಾರೆ ಎಂದಿದ್ರು. ಹಿಂದಿ ಮಾತಾಡುವ ವ್ಯಕ್ತಿ ಬೇಕಿತ್ತು ಅಂತ ನನ್ನತ್ರ ಬಂದ್ರು.
ನನಗೆ ಬಿಜೆಪಿ ಚುನಾವಣಾ ಸಮಿತಿಯಿಂದ ಬಂದ ವ್ಯಕ್ತಿ ಪಾತ್ರ ಕೊಟ್ಟಿದ್ರು. ಈ ಹಿಂದೆ ಯೂಟ್ಯೂಬ್‌ನಲ್ಲಿ ನಾನು ಮಾಡಿದ್ದ ಹಿಂದಿ ಭಾಷಣ ನೋಡಿ ಬಂದಿದ್ರು. ಬಳಿಕ ನನಗೆ ಚೈತ್ರಾ ಕುಂದಾಪುರ ಅವರನ್ನು ಪರಿಚಯ ಮಾಡಿಸಿದ್ರು. ಗಗನ್ ಮನೆಯಲ್ಲಿ ನನಗೆ ರಿಹರ್ಸಲ್ ಮಾಡಿಸಿದ್ರು. ಲೆಟರ್ ಕೊಡೋದು ಅಷ್ಟೇ ಆಗಿತ್ತು ನನ್ನ ಕ್ಯಾರೆಕ್ಟರ್ ಎಂದು ಕಬಾಬ್ ವ್ಯಾಪಾರಿ ಚನ್ನನಾಯಕ್ ಹೇಳಿದ್ದಾರೆ.
Chaitra Kundapura Case : ಚೈತ್ರಾ ಕುಂದಾಪುರ ಕೇಸ್ನಲ್ಲಿ ನಿಮ್ಮ ಪಾತ್ರ ಏನು ?#BLChannaNaik #ChaitraKundapur #Udupi #CCBEnquiry #GovindBabu #FraudCase #NewsFirstKannada pic.twitter.com/QXexmnDFmK
— NewsFirst Kannada (@NewsFirstKan) September 14, 2023
ಮಾತುಕತೆ ವೇಳೆ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರು ಹಣಕಾಸಿನ ವಿಚಾರವಾಗಿ ಚರ್ಚಿಸಿಲ್ಲ. ನನ್ನ ಬಳಿ ಅವರು ಹಿಂದಿಯಲ್ಲಿ ಮಾತುಕತೆ ನಡೆಸಿದ್ರು. ಆದಾದ ಮೇಲೆ ನನಗೆ ಹಣದ ವಿಚಾರ ಗೊತ್ತಾಗಿದ್ದು. ಚೈತ್ರಾ ಕುಂದಾಪುರ ಅವರು ಸಂಸದೆ ಆಗೋಕೆ ಗೋವಿಂದಬಾಬುರನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ಚೈತ್ರಾ ಅವರೇ ದುಡ್ಡು ಹಾಕಿ ಪೂಜಾರಿಯನ್ನ ಗೆಲ್ಲಿಸ್ತಿದ್ದಾರೆ ಎಂದಿದ್ರು. ಹಣದ ವಿಚಾರ ನನ್ನ ಮುಂದೆ ಯಾರೂ ಮಾತಾಡಿಲ್ಲ. ಎಂಎಲ್ಎ ಮತ್ತು ಎಂಪಿ ಸೀಟ್ ಬಗ್ಗೆಯಷ್ಟೇ ಮಾತಾಡಿದ್ರು. ನನ್ನ ಪಾತ್ರದಲ್ಲಿ ಅಭಿನಯಿಸಲು 7 ಸಾವಿರ ರೂಪಾಯಿ ಕಾರಿನ ಬಾಡಿಗೆ ಜೊತೆ 93 ಸಾವಿರ ರೂಪಾಯಿ ಅಕೌಂಟ್‌ಗೆ ಹಾಕಿದ್ದಾರೆ ಎಂದಿದ್ದಾರೆ.
ಇನ್ನು, ನಾನು ಅಡಿಕೆ ತಟ್ಟೆ ಮಾಡ್ತಿದ್ದವನು, ನಂತರ ಕಡೂರಿಗೆ ಹೋದೆ. ಕೊರೊನಾದಲ್ಲಿ ಕಡೂರಿಗೆ ಹೋಗಿ ಬಿರಿಯಾನಿ ಸೆಂಟರ್ ತೆರೆದೆ. ಚುನಾವಣೆ ಸಮಯದಲ್ಲಿ ನನ್ನ ಬಳಿ ಬಂದು ನಾಟಕ ಆಡಿದ್ರು. ನಂದೇ ತಪ್ಪು, ಅವರು ಹೇಳಿದಂಗೆ ಕೇಳಿದ್ದು ನನ್ನ ತಪ್ಪು. ಆಮೇಲೆ ವಿಷಯ ತಿಳಿದು ಕರೆ ಮಾಡಿ ಅವರನ್ನ ವಿಚಾರಿಸಿದೆ. ಆಗ ನಾವು ವಾಪಸ್ ಕೊಡ್ತೀವಿ, ತಲೆಕೆಡಿಸಿಕೊಳ್ಳಬೇಡಿ ಎಂದ್ರು. ನಾವು ತಪ್ಪು ಮಾಡಿದ್ದೀವಿ, ಪೂಜಾರಿನೂ ತಪ್ಪು ಮಾಡಿದ್ದಾರೆ. ಪ್ರಜಾಪ್ರಭುತ್ವ ಆಳಬೇಕಾದವ್ರು ಲಂಚ ಕೊಡಲು ಯತ್ನಿಸಿದ್ರು. ಚೈತ್ರಾ ಎಂಪಿ ಆಗ್ಬೇಕು, ಅದೃಷ್ಟ ಇದ್ರೆ ಸಿಎಂ ಆಗ್ತೀನಿ ಅಂತಿದ್ರು. ನಡೆದಿರೋದನ್ನ ನಾನು ಎಲ್ಲಿ ಬೇಕಾದ್ರೂ ಹೇಳೋಕಾದ್ರೂ ರೆಡಿ ಎಂದು ಚನ್ನ ನಾಯಕ್ ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ