newsfirstkannada.com

×

ಚೈತ್ರಾ ಕುಂದಾಪುರ 5 ಕೋಟಿ ವಂಚನೆ ಪ್ರಕರಣಕ್ಕೆ ಟ್ವಿಸ್ಟ್; ಸಂಧಾನ ಸಭೆಯಲ್ಲಿ ನಡೆದ ಹೈಡ್ರಾಮಾ ಹಲ್​ಚಲ್​..!

Share :

Published September 16, 2023 at 6:51am

Update September 16, 2023 at 7:26am

    ಗೋವಿಂದ ಬಾಬು ಮುಂದೆ ಚೈತ್ರಾ ಅಂಡ್ ಟೀಂ ನಾಟಕ

    ಅಂದು ನಡೆದ ನಾಟಕೀಯ ಬೆಳವಣಿಗೆಯ ದೃಶ್ಯ ಸೆರೆ

    ವಿಕ್ಟೋರಿಯಾ ಆಸ್ಪತ್ರೆಯ ಐಸಿಯುನಲ್ಲಿ ಚೈತ್ರಾಗೆ ಚಿಕಿತ್ಸೆ

ಚೈತ್ರಾ ಕುಂದಾಪುರ ಪುರಾಣದಲ್ಲಿ ಸಿಸಿಬಿ ತನಿಖೆ ಚುರುಕಾಗಿದ್ದು 5 ಕೋಟಿ ಹಣ ಯಾಱರ ಖಜಾನೆ ಸೇರಿದೆ ಅನ್ನೋ ಮೂಲವನ್ನ ಕೆದಕುತ್ತಿದೆ. ಉದ್ಯಮಿ ಗೋವಿಂದ ಪೂಜಾರಿಗೆ ವಂಚಿಸಿರುವ 5 ಕೋಟಿ ಹಣ ಯಾಱರ ಜೇಬು ಸೇರಿದೆ ಅನ್ನೋದನ್ನು ಶೋಧಿಸುತ್ತಿದೆ. ಈ ಮಧ್ಯೆ ಚೈತ್ರಾ ಕುಂದಾಪುರ ವಂಚನೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಚೈತ್ರಾ ಟೀಂ ಜತೆ ಗೋವಿಂದ ಪೂಜಾರಿ ಸಂಧಾನ ನಡೆಸುವಾಗ ನಡೆದಿರೋ ಹೈಡ್ರಾಮಾ ಹಲ್‌ಚಲ್ ಎಬ್ಬಿಸಿದೆ. ಗೋವಿಂದ ಬಾಬು ಪೂಜಾರಿ ಕಚೇರಿಯಲ್ಲಿ ಚೈತ್ರಾ ಅಂಡ್ ಟೀಂ ಮಾಡಿದ್ದ ಮಹಾ ನಾಟಕ ಬಯಲಾಗಿದೆ.

ಚೈತ್ರಾ ಕುಂದಾಪುರ 5 ಕೋಟಿ ವಂಚನೆ ಪ್ರಕರಣಕ್ಕೆ ಟ್ವಿಸ್ಟ್​

ವಂಚನೆ ಕೇಸ್‌ನಲ್ಲಿ ಪೊಲೀಸರ ಅತಿಥಿಯಾಗಿರೋ ಚೈತ್ರಾ ಕುಂದಾಪುರ, ಗಗನ್, ಶ್ರೀಕಾಂತ್ ಚುನಾವಣೆಗೂ ಮುನ್ನ ಗೋವಿಂದ ಬಾಬು ಬಳಿ 5 ಕೋಟಿ ಹಣವನ್ನ ಪೀಕಿದ್ದಾರೆ ಎಂಬ ಆರೋಪ ಇದೆ. ಆದರೆ ಟಿಕೆಟ್‌ ಸಿಗದಿದ್ದಾಗ ಗೋವಿಂದ ಬಾಬು ಪೂಜಾರಿಗೆ ಇವರ ಮೇಲೆ ಡೌಟ್ ಬಂದಿದೆ. ಕಳೆದ ಏಪ್ರಿಲ್ 24ನೇ ತಾರೀಖಿನಂದು ಬೆಂಗಳೂರಿನ ಬಂಡೆಪಾಳ್ಯದಲ್ಲಿರೋ ತಮ್ಮ ಕಚೇರಿಗೆ ಕರೆಸಿ ಹಣ ವಾಪಸ್ ಕೊಡುವಂತೆ ಡಿಮ್ಯಾಂಡ್ ಇಟ್ಟಿರ್ತಾರೆ.

ಯಾವಾಗ ದುಡ್ಡು ವಾಪಸ್ ಕೊಡಿ ಅಂತಾ ಗೋವಿಂದ ಬಾಬು ಪಟ್ಟು ಹಿಡಿತಾರೋ ಚೈತ್ರಾ ಕೇಸ್‌ನಲ್ಲಿರೋ 2ನೇ ಆರೋಪಿ ನಾನು ಎಲ್ಲಾ ಡಿಸೈಡ್ ಮಾಡಿಕೊಂಡು ಬಂದಿದ್ದೇನೆ. ಸತ್ರೇ ಇಲ್ಲೇ ಸಾಯ್ಬೇಕು ಅಂತ ರೆಡಿಯಾಗಿ ಬಂದಿದ್ದೇನೆ ಅಂತ ಎಚ್ಚರಿಕೆ ನೀಡಿದ್ದಾನೆ ಎನ್ನಲಾಗಿದೆ.

ನಡೆದ ಹೈಡ್ರಾಮಾ ಏನು..?

ಅದಕ್ಕೆ ಗೋವಿಂದ ಪೂಜಾರಿ, ನನ್ನ ದುಡ್ಡು ತೆಗೆದುಕೊಂಡು ಮೋಸ ಮಾಡಿದ್ದೀರಿ. ವಿಶ್ವನಾಥ್ ಅಂತ ಇದಾರಾ? ಇಲ್ವಾ? ಅಂತ ಗೋವಿಂದ ಬಾಬು ಗರಂ ಆಗ್ತಿದ್ದಂತೆ ಗಗನ್‌ ಕಡೂರು ಟೇಬಲ್ ಕೆಳಗೆ ಇಟ್ಟಿದ್ದ ವಿಷದ ಬಾಟಲಿಯನ್ನು ಕೈಗೆ ತೆಗೆದುಕೊಂಡಿದ್ದಾನೆ. ಬಳಿಕ ನಾನು ಸಾಯ್ತೀನಿ ಅಂತ ವಿಷವನ್ನ ಕುಡಿಯೋಕೆ ಮುಂದಾಗ್ತಾನೆ. ಬಳಿಕ ಎಲ್ಲರೂ ಸೇರಿ ಹೇಗೋ ಆತನ ಕೈಯಿಂದ ಬಾಟಲಿಯನ್ನ ಕಿತ್ತು ಕೊಳ್ತಾರೆ.. ಈ ವೇಳೆ ವಿಷ ಕುಡಿದು ಅಸ್ವಸ್ಥನಾದವನಂತೆ ಗಗನ್ ಕಡೂರು ನೆಲದ ಮೇಲೆ ಬಿದ್ದು ಹೈಡ್ರಾಮಾ ಮಾಡೋಕೆ ಶುರು ಮಾಡ್ತಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸದ್ಯ ಅನಾರೋಗ್ಯ ಹಿನ್ನೆಲೆ ಚೈತ್ರಾಳಿಗೆ ವಿಕ್ಟೋರಿಯಾ ಆಸ್ಪತ್ರೆಯ ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗ್ತಿದೆ. ಆಕೆಗೆ ಯಾವುದೇ ಮೂರ್ಚೆ ರೋಗ ಇಲ್ಲ ಅಂತ ವಿಕ್ಟೋರಿಯಾ ಟ್ರಾಮಾ ಕೇರ್ ಸೆಂಟರ್ ಸ್ಪೇಷಲ್ ಆಫೀಸರ್ ಡಾ.ಬಾಲಾಜಿ ಮಾಹಿತಿ ನೀಡಿದ್ದಾರೆ. ಈಕೆ ಕಾನೂನು ಕೈಯಿಂದ ತಪ್ಪಿಸಿಕೊಳ್ಳೋಕೆ ಈ ರೀತಿ ಡ್ರಾಮಾ ಮಾಡಿದ್ಲಾ ಎಂಬ ಶಂಕೆಯೂ ವ್ಯಕ್ತವಾಗಿದೆ. ಇದನ್ನೆಲ್ಲಾ ನೋಡ್ತಿದ್ರೆ ಚೈತ್ರಾ ಅಂಡ್‌ ಮಿತ್ರಮಂಡಳಿಗೆ ವಂಚಿಸೋದು, ಹೀಗೆ ನಾಟಕ ಆಡೋದು ಕರಗತ ಆದಂತೆ ಕಾಣ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚೈತ್ರಾ ಕುಂದಾಪುರ 5 ಕೋಟಿ ವಂಚನೆ ಪ್ರಕರಣಕ್ಕೆ ಟ್ವಿಸ್ಟ್; ಸಂಧಾನ ಸಭೆಯಲ್ಲಿ ನಡೆದ ಹೈಡ್ರಾಮಾ ಹಲ್​ಚಲ್​..!

https://newsfirstlive.com/wp-content/uploads/2023/09/CHAITRA-1.jpg

Load More