newsfirstkannada.com

ಚೈತ್ರಾ ಕುಂದಾಪುರ ವಂಚನೆ ಕೇಸ್‌ನಲ್ಲಿ ಆ ವಾಗ್ಮಿ ಕೈವಾಡ ಇದ್ಯಾ?; ತನಿಖೆಯಲ್ಲಿ ಸ್ಫೋಟಕ ವಿಷ್ಯಗಳು ಬಯಲು

Share :

15-09-2023

    ವಂಚನೆ ಕೇಸ್‌ನಲ್ಲಿ 7 ಜನರಲ್ಲ 10 ಮಂದಿ ಭಾಗಿಯಾಗಿರೋ ಶಂಕೆ

    ಅವ್ರು ಹೇಳಿದ, ಸೂಚನೆಯಂತೆ ಕೆಲಸ ಮಾಡಿದ್ದೇನೆ ಎಂದ ಚೈತ್ರಾ

    ಆ ವಾಗ್ಮಿಯ ವಿಚಾರವಾಗಿ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸ್

ಬೆಂಗಳೂರು: ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರ ವಂಚನೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಇದುವರೆಗೂ 7 ಜನರನ್ನು ಬಂಧಿಸಿದ್ದಾರೆ. ಕೋಟಿ, ಕೋಟಿ ವಂಚನೆ ಆರೋಪದಲ್ಲಿ 10ಕ್ಕೂ ಹೆಚ್ಚು ಜನ ಭಾಗಿಯಾಗಿದ್ದು, ಸಿಸಿಬಿ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ಎಲ್ಲಾ ಆಯಾಮಗಳಲ್ಲೂ ತನಿಖೆ ಮಾಡುತ್ತಿರುವ ಸಿಸಿಬಿ ತನಿಖಾ ತಂಡ ಚೈತ್ರಾ ಕುಂದಾಪುರ ಅಂಡ್‌ ಗ್ಯಾಂಗ್ ಹಣದ ಮೂಲ, ಅದು ಖರ್ಚಾಗಿದ್ದು ಎಲ್ಲಿ ಅಂತಲೂ ತನಿಖೆ ಕೈಗೊಂಡಿದೆ.

ಚೈತ್ರಾ ಕುಂದಾಪುರ ಅವರ ಪ್ರಕರಣದ ತನಿಖೆಗೆ ಸಿಸಿಬಿ ಪೊಲೀಸರ ಮೂರು ಟೀಂ ರಚಿಸಲಾಗಿದೆ. 7 ಆರೋಪಿಗಳನ್ನು ಬಂಧಿಸಿರುವ ಒಂದು ಪೊಲೀಸರ ತಂಡ ಇನ್ನೂ ಮೂವರು ಆರೋಪಿಗಳ ಹುಡುಕಾಟ ನಡೆಸುತ್ತಿದೆ. ಮತ್ತೊಂದು ಟೀಮ್ ಸಿಸಿಬಿಯಲ್ಲಿ ಬಂಧಿತರ ವಿಚಾರಣೆ ಮಾಡ್ತಿದೆ. ಮೂರನೇ ತಂಡ ಕೋಟ್ಯಾಂತರ ರೂಪಾಯಿ ಹಣದ ಮೂಲ, ಖರ್ಚಾಗಿದ್ದು ಎಲ್ಲಿ ಅಂತ ತನಿಖೆ ಕೈಗೊಂಡಿದೆ. ಪ್ರಮುಖವಾಗಿ ಚೈತ್ರಾ ಕುಂದಾಪುರ ಅವರ ತಂಡ ವಂಚಿಸಿ ಪಡೆದಿರುವ 5 ಕೋಟಿ ಹಣ ಎಲ್ಲಿದೆ? ಅದನ್ನ ಏನ್ಮಾಡಿದ್ರು? ಅನ್ನೋ ಮಾಹಿತಿಯನ್ನು ಸಿಸಿಬಿ ಪೊಲೀಸರು ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ: ಮೂರ್ಛೆ ರೋಗದಿಂದ ಅಸ್ವಸ್ಥರಾಗಿ ಕುಸಿದು ಬಿದ್ದ ಚೈತ್ರಾ ಕುಂದಾಪುರ.. ಅಧಿಕಾರಿಗಳು ಈ ಬಗ್ಗೆ ಹೇಳಿದ್ದೇನು?

ಸಿಸಿಬಿ ಪೊಲೀಸರ ತನಿಖೆಯಲ್ಲಿ ಪ್ರಮುಖವಾಗಿ ಆರೋಪಿಗಳ ಅಕೌಂಟ್ ವಿವರಗಳನ್ನ ಕಲೆ ಹಾಕಲಾಗುತ್ತಿದೆ. ಈಗಾಗಲೇ ಎಲ್ಲಾ ಆರೋಪಿಗಳ ಅಕೌಂಟ್​ಗಳನ್ನ ಸಿಸಿಬಿ ಫ್ರೀಜ್ ಮಾಡಿದೆ. ಆರೋಪಿಗಳು ಇತ್ತೀಚಿಗೆ ಏನೇನೆಲ್ಲಾ ಖರೀದಿ ಮಾಡಿದ್ದಾರೆ. ಕಾರು, ಸ್ಥಿರಾಸ್ತಿ, ಚರಾಸ್ತಿ ಬಗ್ಗೆಯೂ ಮಾಹಿತಿಯನ್ನ ಕಲೆ ಹಾಕಲಾಗ್ತಿದೆ. ಒಟ್ಟು 6 ತಿಂಗಳ ಅಕೌಂಟ್ ಟ್ರಾನ್ಸಾಕ್ಷನ್ ಅನ್ನು ಸಿಸಿಬಿ ಪೊಲೀಸರು ಪರಿಶೀಲನೆ ನಡೆಸ್ತಿದ್ದಾರೆ. ಈ ಮಾಹಿತಿ ಕಲೆ ಹಾಕಿದ ಬಳಿಕ ಹಣದ ಬಗ್ಗೆ ಕ್ಲಾರಿಫಿಕೇಷನ್ ಸಿಸಿಬಿ ಪೊಲೀಸರಿಗೆ ಸಿಗಲಿದೆ. ಶೀಘ್ರದಲ್ಲೇ ಬಂಧಿತರ ಮೊಬೈಲ್ ರಿಟ್ರೀವ್ ಡಾಟಾ ಕೂಡ ತನಿಖಾ ತಂಡದ ಕೈ ಸೇರುವ ಸಾಧ್ಯತೆ ಇದೆ.

ವಿಚಾರಣೆ ವೇಳೆ ವಾಗ್ಮಿ ಹೆಸರು ಪ್ರಸ್ತಾಪ!

ಚೈತ್ರಾ ಕುಂದಾಪುರ ಅವರ ಕೋಟಿ, ಕೋಟಿ ವಂಚನೆ ಕೇಸ್‌ನ ವಿಚಾರಣೆ ವೇಳೆ ಪ್ರಮುಖವಾಗಿ ವಾಗ್ಮಿಯೊಬ್ಬರ ಹೆಸರು ಪ್ರಸ್ತಾಪವಾಗಿದೆ. ಅವ್ರು ಹೇಳಿದ, ಸೂಚನೆಯಂತೆ ಕೆಲಸ ಮಾಡಿದ್ದೇನೆ. ನನ್ನ ಕುಟುಂಬಸ್ಥರನ್ನ ಕೇಳಿ, ನಾನು ಕಷ್ಟದಲ್ಲಿದ್ದೇನೆ. ನಮ್ಮನೆ ತುಂಬಾ ಚಿಕ್ಕದು, ಕಷ್ಟ ಅಂತ ಚೈತ್ರಾ ಕುಂದಾಪುರ ಕಣ್ಣೀರು ಹಾಕಿದ್ದಾರೆ. ಕೋಟಿ, ಕೋಟಿ ನನ್ನಲ್ಲಿದ್ರೆ ನಾನ್ಯಾಕೆ ಆ ಮನೆಯಲ್ಲಿರ್ತಿದ್ದೆ ಎಂದು ಚೈತ್ರಾ ಹೇಳಿದ್ದು, ಸದ್ಯ ಪೊಲೀಸರು ಆ ವಾಗ್ಮಿಯ ವಿಚಾರವಾಗಿ ತನಿಖೆ ನಡೆಸಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚೈತ್ರಾ ಕುಂದಾಪುರ ವಂಚನೆ ಕೇಸ್‌ನಲ್ಲಿ ಆ ವಾಗ್ಮಿ ಕೈವಾಡ ಇದ್ಯಾ?; ತನಿಖೆಯಲ್ಲಿ ಸ್ಫೋಟಕ ವಿಷ್ಯಗಳು ಬಯಲು

https://newsfirstlive.com/wp-content/uploads/2023/09/Chaitra-Kundapura-6.jpg

Load More