newsfirstkannada.com

ಚೈತ್ರಾ ವಿರುದ್ಧ ಬಿತ್ತು ಮತ್ತೊಂದು ಕೇಸ್.. ಮೀನುಗಾರನಿಂದ 5 ಲಕ್ಷ ಪೀಕಿಸಿ, ಅತ್ಯಾಚಾರ ಕೇಸ್, ಕೊಲೆ ಬೆದರಿಕೆ ಹಾಕಿದ್ರಂತೆ..!

Share :

19-09-2023

  ಚೈತ್ರಾ ಕುಂದಾಪುರ ವಿರುದ್ಧ ಮತ್ತೊಂದು ಪ್ರಕರಣ ದಾಖಲು

  ಬಟ್ಟೆ ಅಂಗಡಿ ಹಾಕಿ ಕೊಡುವುದಾಗಿ ವಂಚನೆ ಮಾಡಿರುವ ಚೈತ್ರಾ ಕುಂದಾಪುರ

  ಬಾಡಿಗೆ ಗೂಂಡಾಗಳಿಂದ ಕೊಲೆ‌ ಮಾಡಿಸುವುದಾಗಿ ಮೀನುಗಾರನಿಗೆ ಬೆದರಿಕೆ

ಗೋವಿಂದ ಬಾಬು ಪೂಜಾರಿಗೆ ಪಂಚಕೋಟಿ ನಾಮ ಹಾಕಿದ ಚೈತ್ರಾ ಚಿತ್ರಕಥೆಯ ಮೋಸದಾಟದ ಒಂದೊಂದು ಸೀನ್​ಗಳು ಒಂದರ ಮೇಲೊಂದರಂತೆ ಬಟಾ ಬಯಲಾಗುತ್ತಿದೆ. ವಂಚನೆಯ ಜಾಲ ಬಿಚ್ಚಿಕೊಳ್ಳುತ್ತಿದೆ. ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಕೋಟಿ ಕೋಟಿ ನಾಮ ಹಾಕಿದ ಸುದ್ದಿ ಸದ್ದು ಮಾಡುತ್ತಲೇ ಇತ್ತ ಮೀನುಗಾರರೊಬ್ಬರಿಗೆ ಲಕ್ಷ ಲಕ್ಷ ಪಂಗನಾಮ ಹಾಕಿದ್ದು ಬಯಲಾಗಿದೆ.

ಚೈತ್ರಾ ಕುಂದಾಪುರ ಪ್ರಚೋದನಕಾರಿ ಭಾಷಣದಿಂದ ಜನರನ್ನು ರೊಚ್ಚಿಗೇಳಿಸ್ತಿದ್ದ ನಾಯಕಿ. ಬೆಣ್ಣೆಯಲ್ಲಿನ ಕೂದಲು ತೆಗೆದಂತೆ ನಯವಾಗಿ ಮಾತಾಡಿಕೊಂಡೇ ಬಹುಕೋಟಿ ಉದ್ಯಮಿ ಗೋವಿಂದ ಪೂಜಾರಿಯಿಂದ ಪಂಚಕೋಟಿ ಲಪಟಾಯಿಸಿದ ವಂಚಕಿ. ಇದೀಗ ಚೈತ್ರಾ & ಪಟಾಲಂ ಸದ್ಯ ಸಿಸಿಬಿ ಪೊಲೀಸರ ಆತಿಥ್ಯ ಸ್ವೀಕರಿಸುತ್ತಿದೆ. ಪಿಟ್ಸ್​ ಎಂದು ಆಸ್ಪತ್ರೆ ಸೇರಿದ್ದ ಚೈತ್ರಾ ಡಿಸ್ಚಾರ್ಜ್‌ ಆಗಿದ್ದಾಳೆ. ಆದ್ರೆ ಬಾಯಿಯಿಂದ ಬಂದ ನೊರೆ ಚೈತ್ರಾಳೇ ಮಾಡಿಕೊಂಡಿದ್ದು ಅಂತ ವೈದ್ಯರು ಬಯಲುಮಾಡಿದ್ದಾರೆ. ಈ ನಡುವೆ ಇದೇ ಚೈತ್ರಾಳ ಮತ್ತೊಂದು ವಂಚನೆಯ ಕಥೆ ಹೊರಬಿದ್ದಿದೆ.

ಇದನ್ನು ಓದಿ:ಚೈತ್ರಾ ಕುಂದಾಪುರ ಬಳಿ ಕೋಟಿ ಕೋಟಿ ದುಡ್ಡು ಕಂಡು ದಂಗಾದ ಸಿಸಿಬಿ.. ಏನಿದು ಸ್ಟೋರಿ..?

ಮೀನುಗಾರನಿಂದಲೂ ಲಕ್ಷ ಲಕ್ಷ ಪೀಕಿರುವ ವಂಚಕಿ ಚೈತ್ರಾ!

ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಮಕ್ಮಲ್ ಟೋಪಿ ಹಾಕಿ ಫೇಮಸ್​ ಆಗಿರುವ ಚೈತ್ರಾ ಕೇವಲ ಪೂಜಾರಿಗೆ ಮಾತ್ರ ವಂಚಿಸಿಲ್ಲ. ಬದಲಾಗಿ ಉಡುಪಿ ಜಿಲ್ಲೆಯ ಬ್ರಹ್ಮಾವರದ ಮೀನುಗಾರನಿಗೂ ವಂಚಿಸಿದ್ದಾಳೆ. ಆತನಿಂದಲೂ ಲಕ್ಷ ಲಕ್ಷ ಪೀಕಿದ್ದಾಳೆ. ಬ್ರಹ್ಮಾವರ ನಿವಾಸಿ ಸುದೀನಾ ಎಂಬ ಮೀನುಗಾರಿಕೆ ವೃತ್ತಿ ಮಾಡುತ್ತಿದ್ದ ಯುವಕನಿಗೆ ಉಡುಪಿ ಹಾಗೂ ಕೋಟಾದಲ್ಲಿ ಬಟ್ಟೆ ಅಂಗಡಿ ಹಾಕಿ ಕೊಡುವುದಾಗಿ ವಂಚನೆ ಎಸಗಿದ್ದಾಳೆ.

ಬಾಡಿಗೆ ಗೂಂಡಾಗಳಿಂದ ಕೊಲೆ‌ ಮಾಡಿಸುವುದಾಗಿ ಬೆದರಿಕೆ ಹಾಕಿದ್ದ ಚೈತ್ರಾ

2015ರಲ್ಲಿ ಸುದೀನಾಗೆ ಚೈತ್ರ ಕುಂದಾಪುರ ಪರಿಚಯ ಆಗುತ್ತೆ. ತನಗೆ ಬಿಜೆಪಿ ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿರುವ ಸಚಿವರು, ಮಂತ್ರಿಗಳ, ಶಾಸಕರ ನಿಕಟ ಸಂಪರ್ಕವಿದೆ ಅಂತ ಚೈತ್ರಾ ಸುದೀನಾನನ್ನು ನಂಬಿಸುತ್ತಾಳೆ. ಅಲ್ಲದೇ ಬಟ್ಟೆ ಅಂಗಡಿ ಹಾಕಿಸಿಕೊಡುತ್ತೇನೆ ಅಂತ 2018-2023 ರ ಅವಧಿಯಲ್ಲಿ ಅಂಗಡಿ ನಿರ್ಮಾಣಕ್ಕೆ ಒಟ್ಟು 5 ಲಕ್ಷ ಪಡೆದಿದ್ದಾಳೆ. ಆದರೆ ಅಂಗಡಿ ಮಾತ್ರ ನಿರ್ಮಿಸಿ ಕೊಡಲೇ ಇಲ್ಲ. ಕೊನೆಗೆ ಸುದೀನ ಹಣ ವಾಪಾಸು ಕೇಳಿದ್ದಾಗ ಅತ್ಯಾಚಾರ ಪ್ರಕರಣ ಕೊಡುತ್ತೇನೆ, ಬಾಡಿಗೆ ಗೂಂಡಾಗಳಿಂದ ಕೊಲೆ‌ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾಳಂತೆ. ಇದರಿಂದ ಹೆದರಿ ಸುದೀನಾ ದೂರು ದಾಖಲಿಸದೇ ದೂರ ಉಳಿದಿದ್ದ. ಸದ್ಯ ಗೋವಿಂದ ಬಾಬು ಪೂಜಾರಿಗೆ ವಂಚಿಸಿದ ವಿಷಯ ಸುದ್ದಿಯಾಗುತ್ತಲೇ, ತನಗೂ ಚೈತ್ರಾಳಿಂದ 5 ಲಕ್ಷ ಮೋಸ ಆಗಿದೆ ಅಂತ ಉಡುಪಿಯ ಕೋಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸದ್ಯ ಕೋಟ ಪೊಲೀಸರು ದೂರು ದಾಖಲಿಸಿಕೊಂಡಿದ್ದು ಚೈತ್ರ ವಿರುದ್ದ ಎಫ್​ಐಆರ್ ದಾಖಲಿಸಿದ್ದಾರೆ. ಸದ್ಯ ವಂಚಕಿ ಚೈತ್ರಾಳಿಂದ ಮೋಸ ಹೋದ ಇಬ್ಬರು ಮುಂದೆ ಬಂದಿದ್ದಾರೆ. ಆದರೆ ಈಕೆಯಿಂದ ವಂಚನೆಗೆ ಒಳಗಾಗಿ ದೂರು ಕೊಡಲು ಅದೆಷ್ಟು ಮಂದಿ ಮರ್ಯಾದೆಗೆ ಅಂಜಿ ಹಿಂದೆ ಸರಿದಿದ್ದಾರೋ ದೇವರೇ ಬಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚೈತ್ರಾ ವಿರುದ್ಧ ಬಿತ್ತು ಮತ್ತೊಂದು ಕೇಸ್.. ಮೀನುಗಾರನಿಂದ 5 ಲಕ್ಷ ಪೀಕಿಸಿ, ಅತ್ಯಾಚಾರ ಕೇಸ್, ಕೊಲೆ ಬೆದರಿಕೆ ಹಾಕಿದ್ರಂತೆ..!

https://newsfirstlive.com/wp-content/uploads/2023/09/Sudina-chaitra-Kundapur.jpg

Load More