ಚೈತ್ರಾ ಅವರೇ ಹೆಣ್ಣು ಮಕ್ಕಳ ಬಗ್ಗೆ ಮಾತಾಡಬೇಡಿ ಅಂತೀರಾ ಆದ್ರೆ!
ಇಡೀ ಮನೆ ಮಂದಿಗೆ ಕ್ಲಾಸ್ ತೆಗೆದುಕೊಂಡಿದ್ದ ಕಿಚ್ಚ ಸುದೀಪ್
ಕಿಚ್ಚನ ಪಂಚಾಯ್ತಿ ಬಳಿಕ ಅಸಮಾಧಾನ ಹೊರ ಹಾಕಿದ್ದಾರೆ ಚೈತ್ರಾ?
ಕನ್ನಡದ ಬಿಗ್ಬಾಸ್ ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರೋ ರಿಯಾಲಿಟಿ ಶೋ. ಪ್ರತಿ ವಾರದ ಕೊನೆಯಲ್ಲಿ ಕಿಚ್ಚ ಸುದೀಪ್ ಸ್ಪರ್ಧಿಗಳು ಮಾಡಿದ ಸರಿ ತಪ್ಪಗಳ ಬಗ್ಗೆ ಮಾತಾಡುತ್ತಾರೆ. ಸ್ಪರ್ಧಿಗಳು ಕಳಪೆ ಮಟ್ಟದಲ್ಲಿ ಆಟ ಆಡಿದ್ರೂ ನೇರವಾಗಿ ಪ್ರಶ್ನೆ ಮಾಡ್ತಾರೆ ಕಿಚ್ಚ ಸುದೀಪ್.
ಇದನ್ನೂ ಓದಿ: ಬಿಗ್ ಬಾಸ್ ವೇದಿಕೆ ಮೇಲೆ ಅಮ್ಮನನ್ನು ನೆನೆದಿದ್ದ ಕಿಚ್ಚ.. ಶೂಟಿಂಗ್ ಮುಗಿಸಿ ಆಸ್ಪತ್ರೆ ಓಡಿ ಹೋಗಿದ್ರು
ನಿನ್ನೆ ಹಾಗೂ ಮೊನ್ನೆ ನಡೆದ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಮನೆಯ ಎಲ್ಲ ಸ್ಪರ್ಧಿಗಳ ವಿರುದ್ಧ ಕೆಂಡ ಕಾರಿದ್ದರು. ಪ್ರಾಮಾಣಿಕತೆ ಅನ್ನೋದೇ ಈ ಮನೆಗೆ ಸೂಟ್ ಆಗಲ್ಲ ಅಂತೇಳಿ ಸರಿಯಾಗಿ ಬೆಂಡೆತ್ತಿದ್ದರು. ಅದರಲ್ಲೂ ತುಕಾಲಿ ಸಂತೋಷ್ ಪತ್ನಿ ಮಾನಸ, ಚೈತ್ರಾ ಕುಂದಾಪುರ, ಹಂಸ, ಭವ್ಯ ಗೌಡ, ಉಗ್ರಂ ಮಂಜು, ಅನುಷಾ ರೈ ಸೇರಿದಂತೆ ಎಲ್ಲರಿಗೂ ಕ್ಲಾಸ್ ತೆಗೆದುಕೊಂಡಿದ್ದರು.
ಇವರಲ್ಲಿ ಚೈತ್ರಾ ಅವರು ಲಾಯರ್ ಜಗದೀಶ್ ಅವರಿಗೆ ‘ಒಬ್ಬ ಅಪ್ಪನಿಗೆ ಹುಟ್ಟಿದ್ರೆ’ ಎಂಬ ಪದವನ್ನು ಬಳಕೆ ಮಾಡಿದ್ರು. ಅದಕ್ಕೆ ಕಿಚ್ಚ ಸುದೀಪ್ ಅವರು ವಾರದ ಪಂಚಾಯ್ತಿಯಲ್ಲಿ ಚೈತ್ರಾ ಅವರೇ ಹೆಣ್ಣು ಮಕ್ಕಳ ಬಗ್ಗೆ ಮಾತನಾಡಬೇಡಿ ಅಂತೀರಾ. ಒಬ್ಬ ಅಪ್ಪನಿಗೆ ಹುಟ್ಟಿದ್ಯಾ ಅಂದ್ರೆ ಯಾವ ನನ್ಮಗನು ಅಪ್ಪನಿಗೆ ಬೈಯುತ್ತಿಲ್ಲ ಮೇಡಂ ತಾಯಿಗೆ ಬೈಯುತ್ತಾ ಇರೋದು ಎಂದು ಆಕ್ರೋಶವಾಗಿ ಮಾತನಾಡಿದ್ದರು.
ಇದೇ ವಿಚಾರದ ಬಗ್ಗೆ ಕಿಚ್ಚನ ಪಂಚಾಯ್ತಿ ಬಳಿಕ ಚೈತ್ರಾ ಅವರು ಕಿಚ್ಚ ಸುದೀಪ್ ಅವರ ಮೇಲೆ ಅಸಮಧಾನ ಹೊರ ಹಾಕಿದ್ದಾರೆ. ಇಷ್ಟು ವರ್ಷದ ನೈತಿಕತೆ ಒಂದೇ ಗಂಟೆಯಲ್ಲಿ ಕಳೆದುಕೊಂಡೆ. ನನಗೆ ಇದು ಹೇಗೆ ಕಾಣಿಸ್ತು ಅಂದ್ರೆ, ಜಗದೀಶ್ ಸರ್ ಅವರನ್ನು ಕ್ಲೀನ್ ಶೀಟ್ ಕೊಡುವಂತೆ ಕಾಣಿಸ್ತು. ಸುದೀಪ್ ಸರ್ ಏಕೆ ಅವರ ಬಗ್ಗೆ ಆ ರೀತಿ ಕ್ಲಾರಿಟಿ ಕೊಟ್ರು ಅಂತ ಗೊತ್ತಾಗುತ್ತಿಲ್ಲ. ನನಗೆ ಮಾತನಾಡೊಕೆ ಚಾನ್ಸ್ ಕೊಡಲೇ ಇಲ್ಲ. ಇಡೀ ಮನೆಯನ್ನು ವಿಲನ್ ಮಾಡಿ, ಅವರು ಮಾಡಿದ್ದೇ ಸರಿ ಅಂತ ಪೋಟ್ರೆ ಮಾಡೋದು ಎಷ್ಟು ಸರಿ ಅಂತ ಚೈತ್ರಾ ಮಾತಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ